ರೆಡ್ ಕ್ರಾಸ್ ಸಂಸ್ಥೆಯ ನಿರಪೇಕ್ಷೆ ಕಾರ್ಯ ಶ್ಲಾಘನೀಯ: ಡಾ. ಬಾವಡೆಕರ

The selfless work of the Red Cross is commendable: Dr. Bavadekar

ಬೆಳಗಾವಿ 09: ರೆಡ್ ಕ್ರಾಸ್ ಸಂಸ್ಥೆಯು ಅನೇಕ ವರ್ಷಗಳಿಂದ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ, ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಯುವಕರು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದು ತಮ್ಮ ಓದಿನೊಂದಿಗೆ ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಬೆಳಗಾವಿ ಶಾಖೆ ಎಫ್‌ಪಿಎಐ ಅಧ್ಯಕ್ಷ ಡಾ. ವಿ. ಸಿ. ಬಾವಡೆಕರ ಕರೆ ನೀಡಿದರು.   

ಅವರು ದಿ. 8ರಂದು ಎಫ್‌ಪಿಎಐ ಬೆಳಗಾವಿ ಶಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳಗಾವಿ ಶಾಖೆ ಮತ್ತು ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ (ಅಖಿಇ) ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೆಡ್ ಕ್ರಾಸ ದಿನ ಆಚರಣೆ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಹೆನ್ರಿ ಡ್ಯುನ್ಯಾಟ್ ಎಂಬ ಮಹಾನ ವ್ಯಕ್ತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸುರೇಶ ಬಿ. ಕುಲಕರ್ಣಿ (ಒಜಟಛಜಡಿ ಓಚಿಣಠಚಿಟ ಃಠಥಿ ಚಿಟಿಜ ಅಚಿಡಿಟಚಿಟಿ ಃಜಟಚಿರಚಿತ ಆಣ.) ಇವರು ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಧೆಯ ಕಾರ್ಯ ವೈಖರಿಯ ಬಗ್ಗೆ ವಿವರಿಸುತ್ತಾ ಮಾನವತೆಯಿಂದ ಶಾಂತಿಯ ಕಡೆ 2025ರ ಧ್ಯೇಯ ವಾಕ್ಯವನ್ನು ಹೇಳುತ್ತಾ ರೆಡ್ ಕ್ರಾಸ್ ಸಂಸ್ಧೆ ಅನಾರೋಗ್ಯ ಪೀಡಿತರಿಗೆ ಮತ್ತು ಗಾಯಾಳುಗಳಿಗೆ ಜೀವನ ಮರಣದ ಸ್ಥಿತಿಯಲ್ಲಿ ಹೋರಾಡುತ್ತಿರುವವರಿಗೆ ವರದಾನವಾಗಿದೆ ಎಂದು ಅಭಿಪ್ರಾಯ ಪಟ್ಟರು.  

ಅಧ್ಯಕ್ಷತೆಯನ್ನು ವಹಿಸಿದ ಬಿ. ಎಸ್‌. ಮಾಯಾಚಾರಿ- ಖಜಚಿಜಜಡಿ ಂಛಿಣಠ ಖಜಚಿಡಿಛಿ ಆಜಠಿಣ. (ಅಖಿಇ) ಇವರು ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯು ಗಾಯಾಳುಗಳಿಗೆ ಮತ್ತು  ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸಂಜೀವನಿಯಾಗಿದೆ. ಈ ಬಗ್ಗೆ ಜಾಗೃತಿ ಪಡೆಯುವುದರೊಂದಿಗೆ ರೆಡಕ್ರಾಸ ಘಟಕದ ಸದಸ್ಯರು ಆದ ಪ್ರಶಿಕ್ಷಣಾರ್ಥಿಗಳು ತಮ್ಮ ಮತ್ತು ತಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕೆಂದು ತಿಳಿಸಿದರು.   

ಉಪನ್ಯಾಸಕ ಹಾಗೂ ಕಾರ್ಯಕ್ರಮಾಧಿಕಾರಿ ಬಿ. ಡಿ. ಕಾರಡಗೆ ಪ್ರಾಸ್ತಾವಿಕವಾಗಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಬೆಳೆದು ಬಂದ ಹಾದಿ ಮತ್ತು ಸಂಸ್ಥೆಯ ಗುರಿ ಉದ್ದೇಶಗಳನ್ನು ವಿವರಿಸುತ್ತಾ ತಮ್ಮ ಕಾಲೇಜಿನಲ್ಲಿಯೂ ರೆಡ್ ಕ್ರಾಸ್ ಘಟಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ತಿಳಿಸಿದರು.   

ವಿಕಾಸ್ ಆರ್‌. ಕಲಘಟಗಿ  ಮಾತನಾಡುತ್ತಾ ರೆಡ್ ಕ್ರಾಸ್  ಸಂಸ್ಧೆಯ  ಗುರಿ ಉದ್ದೇಶಗಳ ಬಗ್ಗೆ ವಿವರಿಸಿದರು.   

ಡಿ.ಬಿ. ನಾಯಕ-ಖಜಚಿಜಜಡಿ ಋ ಖಜಡಿತಛಿಜ ಆಜಠಿಣ. (ಅಖಿಇ),ಎಫ್ .ಪಿ. ಎ. ಐ. ಬೆಳಗಾವಿ ಶಾಖೆಯ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು, ಪ್ರಶಿಕ್ಷಣಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.