ಜೆಡಿಎಸ್ ಅಭ್ಯಥ್ರಿ ಭಾಷೆ ಅವರ ಸಂಸ್ಕೃತಿ ತೋರುತ್ತದೆ

ಕಾರವಾರ ೧೭: ಕೆನರಾ ಕ್ಷೇತ್ರದ ಜೆಡಿಎಸ್ ಅಭ್ಯಥರ್ಿ ಬಳಸುವ ಭಾಷೆ ಅವರ ಸಂಸ್ಕೃತಿಯನ್ನು ತೋರುತ್ತದೆ. ಅವರು ಬಿಜೆಪಿಗರನ್ನು ನಾಯಿ, ಮರಿಪುಡಾರಿಗಳು ಎಂದರು. ಆದರೆ ನಾವು ಅವರನ್ನು ಹಾಗೆ ಕರೆಯುವುದಿಲ್ಲ. ಅವರು ಮಂಗನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಿದರೂ ನಾವು ಅವರನ್ನು ಮಂಗ ಅನ್ನುವುದಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ್ ನಾಯಕ್ ವ್ಯಂಗ್ಯವಾಡಿದರು. ಕಾರವಾರದ ಪತ್ರಿಕಾ ಭವನದಲ್ಲಿ ಬುಧುವಾರ ಸುದ್ದಿಗೋಷ್ಠಿ ಮಾಡಿದ ಅವರು  ಮಂಗನಕಾಯಿಲೆ ಈಗೀಗ ಜನರನ್ನು ತುಂಬಾ ಕಾಡಿದೆ. ಹಾಗಾಗಿ ನಾವು ಮಂಗನ ಹೆಸರನ್ನು ಸಹ ತೆಗೆದುಕೊಳ್ಳುವುದಿಲ್ಲ ಎಂದರು. ನಾವು ರಾಜಕೀಯಕ್ಕೆ ಬಂದಾಗ ಆನಂದ ಅಸ್ನೋಟಿಕರ್ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಅವರು ನಮ್ಮ ಮುಂದೆ ಬಚ್ಚಾ ಎಂದರು. ಆನಂದ ತಂದೆ ವಸಂತ ಅಸ್ನೋಟಿಕರ್ ಕಾಲದಿಂದ ನಾವು ರಾಜಕೀಯ ಮಾಡುತ್ತಿದ್ದೇವೆ. ತಂದೆಯ ಸೌಜನ್ಯವನ್ನು ಆನಂದ ಕಲಿತಿಲ್ಲ ಎಂದರು. 

ಮಾಜಿ ಸಚಿವ ಆನಂದ ಆಸ್ನೋಟಿಕರ್ ನಾವು ಮಾಡಿದ ಆರೋಪಗಳಿಗೆ ನೇರವಾಗಿ ಉತ್ತರಿಸಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಬೇಡದ್ದನ್ನು ಮಾತಾಡಿದ್ದಾರೆ. ಅವರು ಹಣಕೋಣ ಉದ್ಯಮದಲ್ಲಿ ಪಾಲುದಾರನಾಗಿರಲಿಲ್ಲ, ಯಡಿಯೂರಪ್ಪ ಅವರು ಪಾಲು ಆ ಉದ್ಯಮದಲ್ಲಿತ್ತು  ಎಂದು ಸಾತೇರಿ ದೇವಿಯ ಮುಂದೆ ಪ್ರಮಾಣ ಮಾಡಲಿ. ನೋಡೋಣ ಎಂದು ಸವಾಲು ಹಾಕಿದರು. ಹಣಕೋಣ ಉದ್ಯಮ ಬರುವ ಸಮಯದಲ್ಲಿ ಕೇಂದ್ರದಲ್ಲಿ ಯುಪಿಎ ಸಕರ್ಾರ ಇತ್ತು. ಈಗ ಅದೇ ಕಾಂಗ್ರೆಸ್ಸಿಗರ ನೆರವು ಪಡೆದು ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸಕರ್ಾರ ಹಣಕೋಣ ಉಷ್ಣ ಸ್ಥಾವರ ಉದ್ಯಮಕ್ಕೆ ಪರವಾನಿಗೆ ನೀಡಿತ್ತು ಎನ್ನುತ್ತಿದ್ದಾರೆ. ಹಾಗಾದರೆ ಅದರ ಹೊಣೆ ಯುಪಿಎ ಸಕರ್ಾರದ್ದು ಎಂದು ಅಸ್ನೋಟಿಕರ್ ಅವರಿಗೆ ನೆನಪಿಸುತ್ತಿದ್ದೇನೆ ಎಂದರು. 

ಆನಂದ ಹಿಂದುಳಿದವರ ನಾಯಕ ತಾನು ಎನ್ನುವುದಾದರೆ ಕಾಂಗ್ರೆಸ್ ಪಕ್ಷದಲ್ಲಿನ ಬ್ರಾಹ್ಮಣರ ಕಾಲು ಹಿಡಿಯುತ್ತಿರುವುದೇಕೆ. ಅವರನ್ನು ಬಿಟ್ಟು ರಾಜಕೀಯ ಮಾಡಲಿ ನೋಡಣ ಎಂದು ಬಿಜೆಪಿ ವಕ್ತಾರ ರಾಜೇಶ್ ನಾಯಕ ಟೀಕಿಸಿದರು. ದಗರ್ಾಗಳಿಗೆ ಹೋಗಿ ಆನಂದ ಅಸ್ನೋಟಿಕರ್ ಪ್ರಾಥರ್ಿಸುತ್ತಿದ್ದಾರೆ. ಭಟ್ಕಳದ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ ಎಂದು ಟೀಕಿಸಿದರು. 

ದಲಿತರನ್ನು ನಾಯಿ ಎಂದು ಕರೆದಿಲ್ಲ:

ದಲಿತರನ್ನು ನಾಯಿಗಳು ಎಂದು ಸಂಸದ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕರೆದಿಲ್ಲ. ಈ ಅಪಾದನೆಯಲ್ಲಿ ಹುರಳಿಲ್ಲ ಎಂದು ರಾಜೇಶ್ ನಾಯಕ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ದಲಿತರನ್ನು ಹಾಗೆ ನಮ್ಮ ಸಂಸದರು ಕರೆದಿಲ್ಲ. ಕರೆಯುವುದೂ ಇಲ್ಲ. ಹಾಗೆ ಕರೆಯುವ ಸಂದರ್ಭವೂ ಬಂದಿಲ್ಲ ಎಂದರು. 2014 ರ ಚುನಾವಣಾ ಹೊಸ್ತಿಲಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮುಸ್ಲಿಮರ ಮತ ನನಗೆ ಬೇಕಿಲ್ಲ ಎಂದಿದ್ದು ನಿಜ. ಅದು ಮುಗಿದ ಅಧ್ಯಾಯ. ಅದರ ನಂತರ ಸಂಸದರು ಗೆದ್ದು, ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಈಗ ಮುಸ್ಲಿಮರ ಮತ ಬೇಕಿಲ್ಲ ಎಂದು ಕೇಂದ್ರ ಸಚಿವರು ಹೇಳಿಲ್ಲ. ಹಾಗೆ ಹೇಳುವುದಿಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದರು. ಕೇಂದ್ರ ಸಚಿವ ಹೆಗಡೆ ಅವರ ಅಪ್ತರ ಮನೆಯ ಮೇಲೆ ದಾಳಿಯಾಗಿದೆ. 81 ಲಕ್ಷ ರೂ. ಹಣವೂ ಸಿಕ್ಕಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ ಐಟಿ ಅಥವಾ ಇನ್ಕಂ ಟ್ಯಾಕ್ಸ ದಾಳಿ ಸರಿಯಾಗಿದೆ. ಇಂಥ ದಾಳಿಗಳನ್ನು ನಾವು ಟೀಕಿಸುವುದಿಲ್ಲ. ಇಲಾಖೆಗಳು ತಮ್ಮ ಕೆಲಸ ತಾವು ಮಾಡಿವೆ. ಮೋದಿ ಅವರು ಹಣಕಾಸು ವಿಷಯದಲ್ಲಿ ಪಾರದರ್ಶಕತೆ ತಂದಿದ್ದಾರೆ. ಅದು ನಮ್ಮ ಪಕ್ಷಕ್ಕೆ ಬೇಡ ಎಂದು ನಾನು ಹೇಳುವುದಿಲ್ಲ. ನಾವು ಎಂದೂ ಹಣದ ರಾಜಕೀಯ ಮಾಡಿಲ್ಲ. ಐಟಿ ದಾಳಿ ಯಾರ ಮೇಲೆ ನಡೆಯಲಿ, ಅದು ತಪ್ಪು ಎಂದು ನಾವು ಹೇಳುವುದಿಲ್ಲ ಎಂದು ಬಿಜೆಪಿ ವಕ್ತಾರರು ಪ್ರತಿಕ್ರಿಯಿಸಿದರು, 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿರಿಯರಾದ ರವೀಂದ್ರ ಪವಾರ್, ಗ್ರಾಮೀಣ ಅಧ್ಯಕ್ಷ ರಾಜೇಶ್ ನಾಯ್ಕ ಸಿದ್ದರ, ಸಂದೇಶ ಶೆಟ್ಟಿ, ಮಾರುತಿ ನಾಯ್ಕ. ಸತೀಶ್ ಅಮದಳ್ಳಿ, ವಿಕಾಸ ದೇಸಾಯಿ ಇದ್ದರು.