ಲೋಕದರ್ಶನ ವರದಿ
ರಾಣಿಬೆನ್ನೂರ11:ಪ್ರಸುತ್ತ ಸಮಾಜದಲ್ಲಿ ಮಹಿಳಾ ಶಿಕ್ಷಣಕ್ಕೆ ಪೂರಕ ವಾತಾವರಣವಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸಮಸ್ಯೆಗಳ ಪ್ರಸ್ತಾಪಕ್ಕೆ ಅವಕಾಶವಿಲ್ಲದಾಗಿದೆ ಎಂದು ಕನರ್ಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಗೌರವಾಧ್ಯಕ್ಷೆ ರಮಾದೇವಿ ಹೇಳಿದರು.
ನಗರದ ಬಿಎಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಕನರ್ಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾವು ಮೊದಲ ಬಾರಿಗೆ ಮಹಿಳೆಯರ ಪ್ರತ್ಯೇಕ ಸಂಘಟನೆಗೆ ಮುಂದಾದಾಗ ರಾಜಕಾರಣಿಗಳು ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಯಿತು ಎಂದರು.
ಇಂದು ಹೋರಾಟದ ಫಲವಾಗಿ ಶಿಕ್ಷಕರ ಸಂಘಟನೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲಾಗಿದ್ದರೂ ಇಂದಿಗೂ ಸೂಕ್ತ ಸ್ಥಾನಮಾನವಾಗಲಿ ಹಾಗೂ ಭಾವನೆಗಳಿಗೆ ಬೆಲೆಯಾಗಲಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆ ಸಂಘಟನೆ ಮಹಿಳಾ ಶಿಕ್ಷಕಿಯರ ಪಾಲಿಗೆ ಆಶಾಕಿರಣವಾಗಿದೆ. ತಮ್ಮ ಜೀವನದ ಕೊನೆಯ ಉಸಿರನವರೆಗೂ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಸಾವಿತ್ರಿಬಾಯಿ ಫುಲೆ ಕೇವಲ ಒಬ್ಬ ಶಿಕ್ಷಕಿಯಾಗಿರದೆ ಅಂದಿನ ಕಾಲದಲ್ಲಿ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಅಂಧ ಆಚರಣೆಗಳು ಹಾಗೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಆದರ್ಶ ಮಹಿಳೆಯಾಗಿದ್ದರು ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತ ಧೀಮಂತ ಹೆಣ್ಣು ಮಗಳಾಗಿದ್ದರು ಎಂದರು.
ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ| ಆರ್.ಎಂ.ಕುಬೇರಪ್ಪ ಮಾತನಾಡಿ, ಹಿಂದಿನಿಂದಲೂ ಸಮಾಜದಲ್ಲಿ ದುರ್ಬಲ ವರ್ಗದವರನ್ನು ದುಷ್ಟ ಶಕ್ತಿಗಳು ಆಳುತ್ತಾ ಬಂದಿದ್ದು ಅಂತಹ ಶಕ್ತಿಗಳ ವಿರುದ್ಧ ಪ್ರತಿಭಟಿಸಿದಾಗ ಯಶಸ್ಸು ಲಭಿಸುತ್ತದೆ. ಮಹಿಳೆಯರು ತತ್ವ-ಸಿದ್ಧಾಂತಕ್ಕಾಗಿ ಸಂಘಟನೆಗೆ ಮುಂದಾಗಿರುವುದು ಗೌರವದ ಸಂಗತಿಯಾಗಿದೆ. ಸಮಸ್ಯೆಗಳ ಈಡೇರಿಕೆಗಾಗಿ ನಡೆಸುವ ಹೋರಾಟ ಸುಗಮ ಹಾದಿಯಲ್ಲ. ಸಂಘಟನೆ ಕಟ್ಟುವಾಗ ಇರುವ ಹುಮ್ಮಸ್ಸನ್ನು ಅದನ್ನು ಬೆಳೆಸಿ ಮುಂದುವರೆಸಿಕೊಂಡು ಹೋಗುವಾಗಲು ಇರಬೇಕು. ಇದಕ್ಕಾಗಿ ಸಂಘಟನೆ ಎಲ್ಲಾ ಸದಸ್ಯರು ತನು, ಮನ, ಧನದಿಂದ ನಿರಂತರ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಆಂತರಿಕ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಸಂಘದ ಅಧ್ಯಕ್ಷೆ ಸರೋಜಿನಿ ಭರಮಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶೋಭಾ ನಾಗನಗೌಡ್ರ, ಮಂಜುಳಾ ಯು, ತುಳಸಾ ಹೊಸಮನಿ, ಅನಸೂಯಾ ಇಚ್ಚಂಗಿ, ಅನ್ನಪೂಣರ್ಾ ಕಟಗಿ, ಸಂಧ್ಯಾರಾಣಿ, ರಾಜೇಶ್ವರಿ ಸಜ್ಜೆಶೆಟ್ಟರ, ರೇಣುಕಾ ಕುರವತ್ತಿ, ಇಂದಿರಾ ಬಾರಂಗಿ, ಕೆ.ಶಾರದಮ್ಮ, ಲತಾ ಮಳ್ಳೂರ, ಮಂಗಳಗೌರಿ ಪೂಜಾರ, ಹೇಮಾ ರೊಡ್ಡಣ್ಣನವರ, ಪ್ರೇಮಾ ಹೆಗಡಿ, ಸೀತಾ ಚಾಕಲಬ್ಬಿ, ಲಕ್ಷ್ಮೀ, ದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್, ಎಸ್.ವಿ.ಸೀಮಿಕೇರಿ, ಲಿಂಗರಾಜ ಸುತ್ತಕೋಟಿ, ಸುಮತಿ ಎಸ್, ಶಮಾ ಪಾಟೀಲ, ರೇಣುಕಾ ಬಸ್ಯೆನಾಯ್ಕರ್, ಎ.ಬಿ.ರತ್ನಮ್ಮ, ಜಯಶ್ರೀ ಮುರಡೆಣ್ಣನವರ, ಆರ್.ಡಿ.ಹೊಂಬರಡಿ, ನಿವೃತ್ತ ಶಿಕ್ಷಕಿ ಗಿರಿಜಾ ದುರ್ಗದಮಠ, ಸುಧಾ ಹಮಸಾಗರ ಸೇರಿದಂತೆ ಮತ್ತಿತರು ಇದ್ದರು.