ಈ ನಾಡು ಕಂಡಂತೆ ಅಂಧರಬಾಳಿನ ಆಶಾಕಿರಣ ಡಾ. ಪಂ. ಪುಟ್ಟರಾಜ ಗವಾಯಿಗಳು

ಲೋಕದರ್ಶನ ವರದಿ

ಗಜೇಂದ್ರಗಡ 09: ಈ ನಾಡು ಕಂಡಂತೆ ಎಲ್ಲ ಅಂದರ ಬಾಳಿಗೆ ಅನ್ನ ಮತ್ತು ಅಕ್ಷರ ದಾಸೋಹಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬ ಬಾಹ್ಯ ಅಂದಕನು ಸ್ವಾತಂತ್ಯ,ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಸಂಗಿತ ಮತ್ತು ಲಲಿತ ಕಲೆಗಳ ಜ್ಞಾನ ನೀಡಿದವರೆ ನಡೆದಾಡುವ ದೇವರೆನಿಸಿದ ಡಾ. ಪಂ ಪುಟ್ಟರಾಜ ಕವಿ ಗವಾಯಿಯವರಿಗೆ ಸಲ್ಲುತ್ತದೆ ಎಂದು ನಿಡಗುಂದಿಯ ಚೇತನ ಅನಗೌಡ್ರ ಹೇಳಿದರು.

ಅವರು ನಿಡಗುಂದಿಯ ವೀರಭದ್ರೇಶ್ವರ ದೇವಸ್ಥಾನದಳ್ಳಿ ಜರುಗಿದ ಪುಟ್ಟರಾಜ ಕವಿ ಗವಾಯಿಗಳವೃ ಪುಣ್ಯ ಸ್ಮರಣೆ ಅಂಗವಾಗಿ ಮಾತನಾಡಿದರು. ನಂತರ ಅನ್ನ ಪ್ರಸಾದವು ಜರುಗಿತು ಈ ಸಂದರ್ಭದಲ್ಲಿ ಪರಪ್ಪ ಅಣಗೌಡ್ರ, ಮಲ್ಲನಗೌಡ ಪಾಟೀಲ, ಮಂಜುನಾಥ ಪತ್ತಾರ, ಕಿರಣ ಮಠಪತಿ, ಶಿದ್ದಯ್ಯ ಮಠಪತಿ, ತಾಂತ್ರಿಕ ವಿಭಾಗಾಧಿಕಾರಿ ಅಮರೇಶ ಲಮಾಣಿ ಉಪಸ್ಥಿತರಿದ್ದರು.