ಸಂತೋಷಕುಮಾರ ಕಾಮತ
ಮಾಂಜರಿ ದಿ 10
ಸರಕಾರ ನಿಗದಿ ಮಾಡಿರುವ ಕಬ್ಬಿನ ಬೆಂಬಲ ಬೆಲೆ ರೈತರಿಗೆ ಸಂದಾಯ ಮಾಡುವಲ್ಲಿ ಸಕ್ಕರೆ ಕಾಖರ್ಾನೆಗಳು ಹಿಂದೆ ಬಿದ್ದಿದ್ದು, ಕಳೆದ ಹಂಗಾಮಿನಲ್ಲಿ ಕಾಖರ್ಾನೆಗೆ ಪೂರೈಕೆ ಮಾಡಿರುವ ಬಿಲ್ ಪಾವತಿಯಾಗಿಲ್ಲ ಆದರೂ, ಗಡಿ ಭಾಗದ ಸಕ್ಕರೆ ಕಾಖರ್ಾನೆಗಳು ಪ್ರಸಕ್ತ ಹಂಗಾಮು ಆರಂಭ ಮಾಡಿರುವದರಿಂದ ರೈತ ಕಂಗಾಲಾಗಿದ್ದು, ಈ ಬಾರಿಯೂ ಕಬ್ಬು ಬೆಳೆದ ರೈತನಿಗೆ ದೀಪಾವಳಿ ಕಗ್ಗತಲೆಯಾಗಿ ಪರಿಣಮಿಸಲಿದೆ.
ರೈತರಿಗೆ ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿರುವದರಿಂದ ರೈತ ಮೊಗದಲ್ಲಿ ಕೊಂಚ ಮಂದಹಾಸ ಮೂಡಿದೆ. ಆದರೆ ಕಬ್ಬು ಬೆಳೆಯುವ ರೈತರಿಗೆ ಯಾವುದೇ ಖಾತರಿ ಇಲ್ಲದೆ ಡೋಲಾಯಮಾನವಾಗಿದೆ. ಕಳೆದ ಹಂಗಾಮು ಪ್ರಾರಂಭವಾದಾಗ ಎಲ್ಲ ಸಕ್ಕರೆ ಕಾಖರ್ಾನೆಗಳು ಪ್ರತಿ ಟನ್ ಕಬ್ಬಿಗೆ ಪ್ರಾರಂಭದಲ್ಲಿ 2900 ರೂ, ತದನಂತರ 2700 ರೂ, 2500 ರೂ, 2300 ರೂ ನೀಡಿ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಪ್ರಸಕ್ತ ವರ್ಷವಾದರೂ ಉತ್ತಮ ಬೆಲೆ ನಿರೀಕ್ಷೆ ಮಾಡಿದ ರೈತರಿಗೆ ಮತ್ತೆ ನಿರಾಸೆ ಭಾವ ಮೂಡಿದೆ.
ರಾಜ್ಯದ ಗಡಿ ಭಾಗದ ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾಖರ್ಾನೆ, ಬೇಡಕಿಹಾಳ ವೇಂಕಟೇಶ್ವರ ಸಕ್ಕರೆ ಕಾಖರ್ಾನೆ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆ, ಶಿವಶಕ್ತಿ ಸಕ್ಕರೆ ಕಾಖರ್ಾನೆ, ರಾಯಬಾಗ ಶ್ರೀ ರೇಣುಕಾ ಸಕ್ಕರೆ ಕಾಖರ್ಾನೆ, ಕಾಗವಾಡ ಶಿರಗುಪ್ಪಿ ಶುಗರ್ಸ್ ಕಾಖರ್ಾನೆ, ಉಗಾರ, ಅಥಣಿ ಶುಗರ್ಸ್ ಮತ್ತು ಕೆಂಪವಾಡ ಸಕ್ಕರೆ ಕಾಖರ್ಾನೆಗಳು ಪ್ರಥಮ ಕಂತಿನ ದರ ಘೋಷನೆ ಮಾಡದೇ ಹಂಗಾಮು ಆರಂಭಿಸಿವೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ವೈಜ್ಞಾನಿಕ ದರ ನಿಗದಿ ಮಾಡಿದ ನಂತರ ಹಂಗಾಮು ಪ್ರಾರಂಭ ಮಾಡಬೇಕೆಂದು ಸ್ವಾಭಿಮಾನಿ ರೈತ ಸಂಘಟನೆಗಳು ಅಲ್ಲಲ್ಲಿ ಗಲಾಟೆಗಳನ್ನು ಮಾಡಿ ಕಬ್ಬು ಕಟಾವು ಮಾಡುವುದನ್ನು ನಿಲ್ಲಿಸಿ ಸರಕಾರ ಮತ್ತು ಕಾಖರ್ಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರ ಕಬ್ಬನ್ನು ನುರಿಸಬೇಕೆಂದು ಆಲೋಚಿಸಿ ಗಡಿ ಭಾಗದ ಸಕ್ಕರೆ ಕಾಖರ್ಾನೆಗಳು ಹಂಗಾಮು ಆರಂಭ ಮಾಡಿವೆ. ಆದರೆ ಎಫ್ಆರ್ಪಿ ಆಧಾರದ ಮೇಲೆ ಕಬ್ಬಿಗೆ ದರ ಕೊಡಬೇಕೆಂದು ರೈತ ಸಂಘಟನೆಗಳು ಪಟ್ಟು ಹಿಡಿದಿದ್ದು, ಇತ್ತ ಸಕ್ಕರೆ ಕಾಖರ್ಾನೆಗಳನ್ನು ಕಬ್ಬು ನುರಿಸಲು ಆರಂಭ ಮಾಡಿವೆ. ರೈತರ ಸಂಘಟನೆಗಳು ಮತ್ತು ಸಕ್ಕರೆ ಕಾಖರ್ಾನೆಗಳ ಮಧ್ಯೆ ನಡೆಯುವ ಸಂಘರ್ಷದಲ್ಲಿ ಮಾರುದ್ದ ಬೆಳೆದು ನಿಂತಿರುವ ಕಬ್ಬು ಬಿಸಿಲಿನ ದಗೆಯಲ್ಲಿ ಕಮರಿ ಹೋಗುತ್ತಿವೆ. ನದಿ ತೀರದಲ್ಲಿ ಸಮರ್ಪಕ ಬಾರದ ವಿದ್ಯುತ್ನಿಂದ ಕಬ್ಬು ನೆಲಕಚ್ಚುತ್ತಿದ್ದು ಹೀಗೆ ಹಲವಾರು ಸಮಸ್ಯೆಗಳಿಗೆ ಸಿಲುಕಿ ಕಬ್ಬು ಬೆಳೆದ ರೈತ ಬೆಂಡಾಗುತ್ತಿದ್ದಾನೆ.
ರೈತರು- ಕಾಖರ್ಾನೆಗಳ ಮಧ್ಯೆ ಸಮನ್ವಯತೆ ಬೇಕು: ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡುವಲ್ಲಿ ಸಕ್ಕರೆ ಕಾಖರ್ಾನೆಗಳು ಪ್ರತಿ ವರ್ಷವು ಮೀನಮೇಷ ಎಣಿಸುತ್ತಿವೆ. ರೈತರಿಂದಲೇ ಸಕ್ಕರೆ ಕಾಖರ್ಾನೆಗಳು ನಡೆಯುತ್ತಿವೆ, ಸಕ್ಕರೆ ಕಾಖರ್ಾನೆಗಳಿಂದಲೂ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ರೈತರು-ಕಾಖರ್ಾನೆಗಳು ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಕಾಖರ್ಾನೆಗಳು ರೈತರಿಗೆ ಮೊಸಮಾಡಬಾರದು, ಇಬ್ಬರಲ್ಲು ಸಮನ್ವಯತೆ ಇದ್ದಲ್ಲಿ, ಸಕ್ಕರೆ ಕಾಖರ್ಾನೆಗಳ ಮಾಲಿಕರು ಸಹ ತಮ್ಮ ಕಾಖರ್ಾನೆಗೆ ಕಬ್ಬು ಪೂರೈಸುವ ರೈತರ ಸಭೆ ನಡೆಸಿ, ಬೆಲೆ ನಿಗದಿಗೊಳಿಸಬೇಕೆಂಬುದು ಪ್ರಜ್ಞಾವಂತ ರೈತರ ಅಭಿಪ್ರಾಯವಾಗಿದೆ.
================================================================
ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಯಾವುದೇ ಸಕ್ಕರೆ ಕಾಖರ್ಾನೆ ಸಮರ್ಪಕ ಬಿಲ್ ನೀಡಿಲ್ಲ, ಕಳೆದ ಹಂಗಾಮಿನ ಬಾಕಿ ಶೀಘ್ರವಾಗಿ ಸಂದಾಯ ಮಾಡಿ ಪ್ರಸಕ್ರ ವರ್ಷದಲ್ಲಿ ಎಫ್ಆರ್ಪಿ ದರದ ಮೇಲೆ ಹೆಚ್ಚುವರಿಯಾಗಿ 200 ರೂ ದರ ನೀಡಬೇಕೆಂದು ಸ್ವಾಭಿಮಾನಿ ಶೇತಕರ ಸಂಘಟನೆ ವತಿಯಿಂದ ರೈತರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಕಬ್ಬು ಕಟಾವು ಆರಂಭ ಮಾಡಿದ್ದನ್ನು ಶೇತಕರ ಸಂಘಟನೆ ವತಿಯಿಂದ ತಡೆಯಲಾಗಿದೆ.
ರಾಜು ಕಿಚಡೆ
ಸ್ವಾಭಿಮಾನಿ ರೈತ ಸಂಘಟನೆ ಮುಖಂಡ
============================
ಕಳೆದ ವರ್ಷದಲ್ಲಿ ಘೋಷಣೆ ಮಾಡಿದ ಕಬ್ಬಿನ ಬಿಲ್ ಕೂಡಲೇ ಪಾವತಿಯಾಗಲು ಜಿಲ್ಲಾಧಿಕಾರಿಗಳು ಆಯಾ ಸಕ್ಕರೆ ಕಾಖರ್ಾನೆಗಳಿಗೆ ಸೂಚನೆ ನೀಡಬೇಕು ಮತ್ತು ಪ್ರಸಕ್ತ ಹಂಗಾಮಿನಲ್ಲಿ ಪೂರೈಕೆಯಾಗುವ ಕಬ್ಬಿನ ದರ ಘೋಷನೆ ಮಾಡಬೇಕು. ಜಿಲ್ಲಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು.
ತ್ಯಾಗರಾಜ ಕದಮ್
ರೈತ ಸಂಘದ ವಕ್ತಾರರು ಬೆಳಗಾವಿ