ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಿದವರು ಶರಣರು: ಎನ್‌.ಆರ್‌.ಠಕ್ಕಾಯಿಮಹಾಸಭೆಯಲ್ಲಿ ಅಮವಾಸ್ಯೆಅನುಭಾವ ಗೋಷ್ಠಿ

Those who nurtured Kannada language surrendered: Amavasya Anubhav concert at NR Thakkaimahasabha

ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸಿದವರು ಶರಣರು: ಎನ್‌.ಆರ್‌.ಠಕ್ಕಾಯಿಮಹಾಸಭೆಯಲ್ಲಿ ಅಮವಾಸ್ಯೆಅನುಭಾವ ಗೋಷ್ಠಿ 

ಬೆಳಗಾವಿ 29 : ಹನ್ನೆರಡನೆಯ ಶತಮಾನದ ಶರಣರು ಜನಮುಖಿಯಾದ ಸಾಹಿತ್ಯವನ್ನು ರಚಿಸಿ ಕನ್ನಡ ಭಾಷೆ ಸಂಸ್ಕೃತಿಯನ್ನು ಎತ್ತಿ ಹಿಡಿದುದ್ದು ಐತಿಹಾಸಿಕ ಕಾಲಘಟ್ಟ. ಅವರಿಂದಕನ್ನಡ ಭಾಷೆಯ ಕಸುವು ಹೆಚ್ಚಿತು, ಮಾತ್ರವಲ್ಲದೇಕನ್ನಡ ಅಸ್ಮಿತೆಯನ್ನು ಉಳಿಸಿ ಬೆಳೆಸಿದ ಕೀರ್ತಿಅವರಿಗೆ ಸಲ್ಲುತ್ತದೆ ಎಂದು ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದಎನ್‌.ಆರ್‌.ಠಕ್ಕಾಯಿ ಹೇಳಿದರು.ಅವರು ಶಿವಬಸವ ನಗರದ ವೀರಶೈವ ಲಿಂಗಾಯತ ಮಹಾಸಭೆಯು ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿಕನ್ನಡ ಭಾಷೆಗೆ ವಚನಕಾರರ ಕೊಡುಗೆ ವಿಷಯದ ಮೇಲೆ ಅನುಭಾವವನ್ನು ಮಂಡಿಸಿದರು.ಶರಣರುಕನ್ನಡ ಭಾಷೆಗೆ ವಚನಗಳ ಮೂಲಕ ಶಕ್ತಿತುಂಬಿದರು. ರಾಜಾಶ್ರಯದಲ್ಲಿದ್ದ ಕನ್ನಡ ಭಾಷೆಯು ಜನಸಾಮಾನ್ಯರ ಆವರಣಕ್ಕೆ ಬರುವಂತಾಯಿತು. ಸಂಸ್ಕೃತ ಭೂಯಿಷ್ಟವಾದ ಭಾಷೆಯಿಂದ ಬಿಡುಗಡೆ ಹೊಂದಿ ಜನಾಶ್ರಯವನ್ನು ಪಡೆದುಕೊಂಡಿತು. ಅತ್ಯಂತ ಸರಳಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿದರು. ಜಾತಿ ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿದ ಶರಣರು ವಚನಗಳ ಮೂಲಕ ಅರಿವು ಉಂಟು ಮಾಡಿದರು. ಸಂಸಾರದಲ್ಲಿದ್ದು ಸದ್ಗತಿಯನ್ನು ಪಡೆಯುವ ಸುಲಭವಾದ ಮಾರ್ಗಕ್ಕೆ ವಚನಗಳು ಅಡಿಪಾಯವಾದವು. ಸಾಹಿತ್ಯವನ್ನುಎಲ್ಲ ವರ್ಗದವರು, ಪಂಗಡದವರು, ಪುರುಷ ಸ್ತ್ರೀ ಎಂಬ ಭೇದಭಾವವಿಲ್ಲದೆ ಬರೆಯಲು ಪ್ರೇರೇಪಿಸಿದರು. ವಚನಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದವರು ವಚನಕಾರರು. ಅಂತೆಯೇ ಅವರಿಂದ ಅದ್ಭುತವಾದ ವಚನಗಳು ಮೂಡಿಬಂದವು. ಮಾದರಚನ್ನಯ್ಯ, ಡೋಹರಕಕ್ಕಯ್ಯ, ಅಂಬಿಗರಚೌಡಯ್ಯ, ವೈದ್ಯ ಸಂಗಣ್ಣ, ಮಾರಯ್ಯ, ಗಂಗಾಂಬಿಕೆ, ಮುಕ್ತಾಯಕ್ಕ, ಸಂಕವ್ವೆ, ರಾಯಮ್ಮ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭುದೇವರ ಸಾವಿರಾರು ವಚನಗಳು ಇಂದಿಗೂ ಅಮರವಾಣಿಗಳೆನಿಸಿಕೊಂಡಿವೆ.ಇಲ್ಲಿಯವರೆಗೆ ಹನ್ನೆರಡನೆಯ ಶತಮಾನದಎರಡನೂರಕ್ಕೂ ಹೆಚ್ಚು ವಚನಕಾರರ ಹತ್ತುಸಾವಿರದಷ್ಟು ವಚನಗಳು ದೊರೆತಿವೆ. ಈ ವಚನಗಳು 15ನೇ ಶತಮಾನಕ್ಕೂ ಪ್ರೇರಣೆಯಾದವು, ಷಣ್ಮುಖಸ್ವಾಮಿಗಳು ಮೊದಲ್ಗೊಂಡು ಅನೇಕ ವಚನಕಾರರು ವಚನಗಳನ್ನು ರಚಿಸಿದರು. ಅಂದರೆ ಸುಮಾರುಇಪ್ಪತ್ತು ಸಾವಿರ ವಚನಗಳನ್ನು ನಾವಿಂದು ನೋಡುತ್ತಿದ್ದೇವೆ. ಆಧುನಿಕಕಾಲಘಟ್ಟದಲ್ಲಿಯೂ ವಚನಕಾರರ ಪ್ರೇರಣೆಯಿಂದಜ.ಚ.ನಿ, ಡಾ.ಸಿದ್ದಯ್ಯ ಪುರಾಣಿಕರನ್ನು ಮೊದಲ್ಗೊಂಡುಅನೇಕರು ವಚನಗಳನ್ನು ರಚಿಸಿ ಕನ್ನಡ ಭಾಷೆಗೆಜೀವತುಂಬಿದ್ದನ್ನುಅವಲೋಕಿಸುತ್ತೇವೆ. ಒಟ್ಟಿನಲ್ಲಿ ಶರಣರಕನ್ನಡ ಭಾಷೆ ಸಂಸ್ಕೃತಿಯನ್ನುಎತ್ತಿಹಿಡಿಯುವ ಮೂಲಕ ಕನ್ನಡರಕ್ಷಕರಾದರೆಂದು ಹೇಳಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಘಟಕದಅಧ್ಯಕ್ಷೆ ರತ್ನಪ್ರಭಾ ಬೆಲ್ಲದಅವರು ಮಾತನಾಡುತ್ತ, ಶರಣರ ವಚನಗಳು ಬದುಕಿನ ಸಂಜೀವಿನಿಯಾಗಿವೆ. ಅವರ ಅನುಭಾವ ದರ್ಶನವು ಕನ್ನಡದಲ್ಲಿ ಮೂಡಿದ್ದು ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿತು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಅಸಾದೃಶ್ಯವೆನಿಸಿದೆ. ವಚನ ಸಾಹಿತ್ಯ ರಚನೆಗೊಳ್ಳದೇ ಹೋಗಿದ್ದರೆಕನ್ನಡ ಸಾಹಿತ್ಯ ಶೂನ್ಯವೆನಿಸುತ್ತಿತ್ತು. ವಚನಗಳು ಕನ್ನಡದ ಉಪನಿಷತ್ತುಗಳು. ಅದರಕ್ಕೆ ಕಹಿ ಉದರಕ್ಕೆ ಸಿಹಿ ನಮ್ಮಕೂಡಲಸಂಗನ ಶರಣರ ವಚನಗಳು ಎಂಬ ಮಾತು ವೇದ್ಯವೆನಿಸಿದೆ. ನಮ್ಮ ಮಕ್ಕಳಿಗೆ ವಚನ ಸಂಸ್ಕಾರವನ್ನು ಕಲಿಸುವುದು ಇಂದಿನ ಅಗತ್ಯವೆನಿಸಿದೆ. ಸಂಗೀತ, ನೃತ್ಯ, ಶಾಲಾ ಕಾಲೇಜುಪಠ್ಯ ಹಾಗೂ ಭಾಷಾಂತರದ ಮೂಲಕಅದನ್ನುಜಾಗತಿಕವಾಗಿ ವಿಸ್ತರಿಸುವುದುಅಗತ್ಯವಿದೆ. ಇಂತಹಅನುಭಾವ ಸಾಹಿತ್ಯವನ್ನುಕನ್ನಡದಲ್ಲಿ ನೀಡಿದ ಶರಣರದು ಅನುಪಮ ಕೊಡುಗೆ ಎಂದು ಹೇಳಿದರು.ಸಾನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ದ ಮಹಾಸ್ವಾಮೀಜಿಯವರು ವಚನಗಳನ್ನು ಓದುವ, ಅರ್ಥೈಸುವ ಪರಿಪಾಠವನ್ನು ಇಂದಿನ ಯುವಜನಾಂಗದಲ್ಲಿ ಮೂಡಿಸಬೇಕಾಗಿದೆ. ಅವು ಬದುಕಿನ ದಿವ್ಯೌ ಓಷಧಿಗಳು. ವಚನಗಳು ಓದಲು ಸರಳವಾಗಿದ್ದರೂ ಅವುಗಳ ಆಧ್ಯಾತ್ಮದ ಹರವು ಬಹುವಿಸ್ತಾರ,ಅರ್ಥದ ನೆಲೆಯಲ್ಲಿ ಸೂಕ್ಷ್ಮವಾಗಿವೆ. ವಚನಕಾರರು ಅನೇಕ ಬೆಡಗಿನ ವಚನಗಳನ್ನು, ಕಾಲಜ್ಞಾನ ವಚನಗಳನ್ನು ನೀಡಿರುವುದು ಗಮನಾರ್ಹವೆನಿಸಿದೆ ಎಂದುಹೇಳಿದರು. 

ಲಲಿತಾ ಪರ್ವತರಾವ್ ವಚನ ಪ್ರಾರ್ಥನೆ ಸಲ್ಲಿಸಿದರು. ಸುನಂದಾ ಹಾಲಬಾವಿ ವಚನ ವಿಶ್ಲೇಷಣೆ ಮಾಡಿದರು. ಡಾ.ಮಹೇಶ ಗುರನಗೌಡರ ಸ್ವಾಗತಿಸಿದರು. ಶೈಲಾ ಸಂಸುದ್ದಿ ಅತಿಥಿ ಪರಿಚಯ ಮಾಡಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು. ಅಂಜನಾಕಿತ್ತೂರ ವಂದಿಸಿದರು. ಡಾ.ಎಚ್‌.ಬಿ.ರಾಜಶೇಖರ, ಡಾ.ಎಫ್‌.ವ್ಹಿ.ಮಾನ್ವಿ, ಎಂ.ವೈ. ಮೆನಸಿನಕಾಯಿ, ಜ್ಯೋತಿ ಬದಾಮಿ, ಜಯಶ್ರೀ ಬ್ಯಾಕೋಡ್, ಆರ್‌.ಪಿ.ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ, ಎಸ್‌.ಆರ್‌.ಗದಗ ಮೊದಲಾದವರು ಉಪಸ್ಥಿತರಿದ್ದರು.