ತಂಬಾಕು, ವಾತಾವರಣದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಸ್.ಜಿ.ಸಲಗರೆ

ಗದಗ 31: ತಂಬಾಕು ಮುಕ್ತ ವಾತಾವರಣದಿಂದ ಆರೋಗ್ಯಯುತ ಸಮಾಜ ನಿರ್ಮಾಣ  ಮಾಡಲು ಸಾಧ್ಯ ಈ ಕುರಿತು ಪರಿಣಾಮಕಾರಿಯಾಗಿ ಜನಜಾಗೃತಿ ಮೂಡಿಸಬೇಕು ಎಂದು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಎಸ್.ಜಿ.ಸಲಗರೆ ತಿಳಿಸಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸಮೀಕ್ಷಣಾಧಿಕಾರಗಳ ಕಾರ್ಯಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ನಸರ್ಿಂಗ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜರುಗಿದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಂಬಾಕು ಸೇವನೆಂದ ಆಗುವ ಬಾಧಕಗಳ ಕುರಿತು ಇಂದಿನ ಯುವ ಜನತೆಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿರುವದು ಅತ್ಯವಶ್ಯಕವಾಗಿದೆ ಎಂದರು. ತಂಬಾಕು ಉತ್ಪನ್ನಗಳಿಂದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಅರಿವು ಹೊಂದಿರುವ ಇಂದಿನ ವಿದ್ಯಾವಂತರು ತಂಬಾಕು ಉತ್ಪನ್ನಗಳ ದಾಸರಾಗಿರುವದು ಅತ್ಯಂತ ದುರದೃಷ್ಟಕರವಾದಂತಹ ಸಂಗತಿಯಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷ ಜನ ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಈ ಕುರಿತು ಸಾರ್ವಜನಿಕರಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಅದರಲ್ಲೂ ದೇಶದ ಯುವಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ದಾಸರಾಗಿದ್ದು ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ಯುವಜನತೆ ತಂಬಾಕು ಸೇವನೆ ವ್ಯಸನದಿಂದ ಹೊರಬಂದು ಇತರರಿಗೂ ಇದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಸಶಕ್ತ ರಾಷ್ಟ್ರ ನಿಮರ್ಿಸಲು ಮುಂದಾಗಬೇಕೆಂದು ಸಲಗರೆ ನುಡಿದರು.

ತಂಬಾಕು ನಿಯಂತ್ರಣಾಧಿಕಾರಿ  ಡಾ. ಸತೀಶ. ಸಿ. ಬಸರೀಗಿಡದ ಮಾತನಾಡಿ ವಿಶ್ವದಾದ್ಯಂತ ತಡೆಗಟ್ಟಬಹುದಾದ ಖಾಯಿಲೆ ಮತ್ತು ಮರಣಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆ ಮಾಡದವರಿಗಿಂತ ಕಡಿಮೆ ವಯಸ್ಸಿನವರಂತೆ ಕಾಣುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯನ್ನು ತ್ಯಜಿಸುವ ಮೂಲಕ ಆರೋಗ್ಯವಂತರಾಗಲು ಕರೇ ನೀಡಿದರು.

    ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ  ಡಾ. ಅರುಂಧತಿ ಕುಲಕಣರ್ಿ, ಜಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್ ಸುರೇಶ, ಜಿಲ್ಲಾ  ಆಹಾರ ಸುರಕ್ಷಣಾಧಿಕಾರಿ ಡಾ|| ರಾಜೇಂದ್ರ ಎನ್ ಗಡಾದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ, ಜಿಲ್ಲಾ ತಂಬಾಕು ಸಲಹೆಗಾರ ಗೋಪಾಲ ಸುರಪುರ, ಡಿ.ಎಸ್.ಅಂಗಡಿ, ಬಸವರಾಜ ಲಾಲಗಟ್ಟಿ, ಆಶಾ ಕಾರ್ಯಕರ್ತರು, ವಿವಿಧ ನಸರ್ಿಂಗ ಕಾಲೇಜು ವಿದ್ಯಾಥರ್ಿನಿಯರು ಜಾಥಾ ಕಾರ್ಯಕ್ರಮಲದಲ್ಲಿ ಭಾಗವಹಿಸಿದ್ದರು.