ನಾಳೆ ಯು ಬ್ರಿಗೇಡದ ದಿಗ್ವಿಜಯ ರಥಯಾತ್ರೆ ಹುಕ್ಕೇರಿಗೆ ಆಗಮನ

ಲೋಕದರ್ಶನ ವರದಿ

ಹುಕ್ಕೇರಿ 17:  1893 ಸಪ್ಟೆಂಬರ 11 ವರೆಗೆ ಭಾರತ ವಿಶ್ವದ ಭೂಪಟದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಭಾರತವನ್ನು ಪಾಶ್ಚಾತ್ಯ ದೇಶಗಳು ನಿಷ್ಕೃಯವಾಗಿ ಕಾಣುತ್ತಿದ್ದವು. ಭಾರತದ ಸನಾತನ ಹಿಂದು ಧರ್ಮ, ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳು ಉಡುಗೆ ತೊಡುಗೆಗಳು ಆಹಾರ ಪದ್ಧತಿ ಕಲೆ ಸಂಸ್ಕೃತಿ, ಧಾಮರ್ಿಕ ಆಚರಣೆಗಳು ಮತ್ತಿತರ ಭಾರತೀಯ ಜೀವನ ಶೈಲಿ ಮೇಲೆ ಸಾವಿರಾರು ವರ್ಷಗಳಿಂದ ವಿದೇಶಿ ಆಕ್ರಮಣಕಾರರ ದಾಳಿಗೆ ತುತ್ತಾಗಿದ್ದವೆಂದು ಹುಕ್ಕೇರಿ ಯುವ ಬ್ರಿಗೇಡದ ಯುವ ಸಂಚಾಲಕ ಪ್ರಜ್ವಲ ನಿಲಜಗಿ ತಿಳಿಸಿದರು.

       ಅವರು ಬುಧವಾರದಂದು ಸ್ಥಳೀಯ ಅಡವಿಸಿದ್ಧೇಶ್ವರ ಮಠದಲ್ಲಿ ಕರೆಯಲಾದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು. ಗುಲಾಮಗಿರಿಯ ಘೋರ ಅಂಧಕಾರದಲ್ಲಿ ಮುಳಗಿದ್ದ ಭಾರತವನ್ನು ಪ್ರಖರ ಸೂರ್ಯನ ಬೆಳಕಿನಂತೆ ಉರಿಯುವ ತೇಜೋಮಯ ಮೂತರ್ಿಯಂತೆ ಸಿಡಿಲ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ಚಿಕ್ಯಾಗೋದಲ್ಲಿ ಆಯೋಜಿಸಲಾದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಅಂತಃಸತ್ವವನ್ನು ಜಗತ್ತಿಗೆ ಪರಿಚಯಿಸಿ ವಿಶ್ವದ ನಾಯಕರ ಅಜ್ಞಾನದ ಅಂಧಕಾರವನ್ನು ದೂರಗೊಳಿಸಿ ಒಂದೇ ಹೊಡೆತಕ್ಕೆ ಜಗತ್ತಿನಲ್ಲಿ ಭಾರತವನ್ನು ಜಗದ್ಗುರು ಸ್ಥಾನದಲ್ಲಿ ನಿಲ್ಲಿಸಿ ಸಹಸ್ರಾರು ವರ್ಷಗಳ ಗುಲಾಮಗಿರಿಯ ದಾಶ್ಯದಲ್ಲಿ ನಲುಗಿ ಹೋಗಿದ್ದ ಭಾರತಿಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಗರ್ವದಿಂದ ಹೆಮ್ಮೆ ಪಡುವಂತೆ ಮಾಡಿ ಇಂದಿಗೆ 125 ವರ್ಷಗಳ ದಿಗ್ವಿಜಯ ಸವಿ ನೆನಪಿಗಾಗಿ ಮತ್ತೊಮ್ಮೆ ದಿಗ್ವಿಜಯರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆಯೆಂದರು.

       ರಥ ಯಾತ್ರೆ ನಗರಕ್ಕೆ ಶುಕ್ರವಾರ ದಿ. 19 ರಂದು ಆಗಮಿಸಲಿದ್ದು  ಅಂದು ನೇಲರ್ಿ ಗ್ರಾಮದಿಂದ ಹಳೇ ಬಸ್ ನಿಲ್ದಾಣದ ವರೆಗೆ ತಲುಪಿದ ನಂತರ ಹಳೇ ಬಸ್ ನಿಲ್ದಾಣದಲ್ಲಿ ಸ್ವಾಗತಿಸಿ ತುರಮಂದಿಗೆ ತಲುಪಿ ಬಹಿರಂಗ ಸಭೆಯಾಗಿ ಮಾಪರ್ಾಡಗೊಳ್ಳಲಿದೆ. ಬಹಿರಂಗ ಸಭೆಯ ದಿವ್ಯ ಸಾನಿಧ್ಯವನ್ನು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ವಿರಕ್ತ ಮಠದ ಶಿವಬಸವ ಸ್ವಾಮಿಗಳು, ಕ್ಯಾರಗುಡ್ದ ಅವಜಿಕರ ಆಶ್ರಮದ ಮಲ್ಲಪ್ಪ ಮಹಾರಾಜರು ಹಾಗೂ ಅಭಿನವ ಮಂಜುನಾಥ ಮಹಾರಾಜರು  ವಹಿಸಲಿದ್ದು ಯುವ ಬ್ರಿಗೇಡ ರಾಜ್ಯ ಸಂಚಾಲಕರಾದ ಕಿರಣ ರಾಮ ಮುಖ್ಯ ಭಾಷಣಕಾರರಾಗಿ ಆಗಮಿಸಲಿರುವದಾಗಿ ಪ್ರಜ್ವಲ ನಿಲಜಗಿ ತಿಳಿಸಿದರು ಸಂಘಟಕ ಗಿರೀಶ ಖಡೇದ, ಭೀಮಶಿ ಗೋರಖನಾಥ, ನಿಖಿಲ ನಾಯಿಕ, ತಾಲೂಕಾ ಸಂಚಾಲಕ ಶಶಿಕಾಂತ ಮುಸಲ್ಮಾರಿ ಉಪಸ್ಥಿತರಿದ್ದರು