ಕವಿ, ಸಾಹಿತಿ ಮಹಾಂತಪ್ಪ ನಂದೂರಗೆ ಸನ್ಮಾನ
ಹುಬ್ಬಳ್ಳಿ 10: ಕವಿ, ಸಾಹಿತಿ ಮಹಾಂತಪ್ಪ ನಂದೂರ ಅವರು ರೇಲ್ವೆ ಕಾರ್ಯಾಗಾರದಲ್ಲಿ ಸಹಾಯಕ ಹಣಕಾಸು ಸಲಹೆಗಾರರಾಗಿ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಸಂದರ್ಭದಲ್ಲಿ ಹಾಗೂ ಮಹಾಂತಪ್ಪ ನಂದೂರ ಅವರ ಅರವತ್ತರ ಅವಧಿಯ ವ್ಯಕ್ತಿತ್ವ ಸಾಹಿತ್ಯ ಅವಲೋಕನ ಕೃತಿ ನಂದದುರಿವ ಜ್ಯೋತಿ ಲೋಕಾರೆ್ಣ ಶುಭ ಸಂದರ್ಭದಲ್ಲಿ ಮಹಾಂತಪ್ಪ ನಂದೂರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಲು, ಮಾಲಾರೆ್ಣ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು.
ಅಭಿನಂದಿಸಿ, ನಿವೃತ್ ಜೀವನ ಸುಖಕರವಾಗಲೆಂದು ಶುಭ ಕೋರಿದರು. ಪುಷ್ಪಾ ಎಂ. ನಂದೂರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ, ಶಿವರುದ್ರ ಟ್ರಸ್ಟನ ಡಾ. ಬಸವಕುಮಾರ ತಲವಾಯಿ, ಕಸಾಪದ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿ ಪ್ರೊ ಕೆ.ಎಸ್.ಕೌಜಲಗಿ, ಬಿ.ಎಸ್.ಸೊಪ್ಪಿನ, ಸಾಹಿತಿ ಸಿ.ಎಂ.ಮುನಿಸ್ವಾಮಿ, ಡಾ. ಅಭೀಷೇಕ ನಂದೂರ, , ಸೋಮಶೇಖರ ಇಟಗಿ ಮುಂತಾದವರು ಇದ್ದರು.