ವಾಷಿಂಗ್ಟನ್, ಡಿ 23, ವಾರಾಂತ್ಯದಲ್ಲಿ
ಅಮೆರಿಕ ರಾಜ್ಯವಾದ ಮೇರಿಲ್ಯಾಂಡ್ ನ ಬಾಲ್ಟಿಮೋರ್ ನಲ್ಲಿ ನಾಲ್ಕು ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ
ಮೂರು ಜನರು ಸಾವನ್ನಪ್ಪಿದ್ದು, ಇನ್ನೂ ಏಳು ಜನರು ಗಾಯಗೊಂಡಿದ್ದಾರೆ.ಭಾನುವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ
6.45 ಕ್ಕೆಅಪರಿಚಿತರು ಬಾಲ್ಟಿಮೋರ್ ಪಟ್ಟಣದಲ್ಲಿ ಸಾಲಾಗಿ ನಿಂತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಘಟನೆಯಲ್ಲಿ ಮೂವರು ಹದಿಹರೆಯದವರು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯಪೊಲೀಸರನ್ನು
ಉಲ್ಲೇಖಿಸಿ ಬಾಲ್ಟಿಮೋರ್ ಸನ್ ವರದಿ ಮಾಡಿದೆ.ಭಾನುವಾರ ನಡೆದ ಮತ್ತೊಂದು ದಾಳಿಯಲ್ಲಿ, 35 ವರ್ಷದ ಯುವತಿಯನ್ನು
ಕಿರಾಣಿ ಅಂಗಡಿಯೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ನಗರದ ಡೌನ್ಟೌನ್ಪ್ರದೇಶದಲ್ಲಿಯೂ ಸಹ ಶನಿವಾರ
ಸಂಜೆ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಮಹಿಳೆಯೊಬ್ಬರನ್ನು ಹೇರ್ ಸಲೂನ್‌ನಲ್ಲಿಮತ್ತು 21 ವರ್ಷದ
ಯುವಕನನ್ನು ಕೊಲ್ಲಲಾಗಿದೆ.‘ಭಾನುವಾರ ಸಂಜೆಯವರೆಗೆ ಪೊಲೀಸರು ದಾಳಿ ಕುರಿತಂತೆ ಯಾರೊಬ್ಬರನ್ನೂ ಬಂಧಿಸಿಲ್ಲ.
ಗುಂಡಿನ ದಾಳಿ ಘಟನೆಗಳಬಗ್ಗೆ ಕೆಲವೊಂದು ವಿವರಗಳನ್ನು ಪಡೆದಿದ್ದಾರೆ.’ ಎಂದು ವರದಿ ತಿಳಿಸಿದೆ.ಹುಕ್ಕಾ
ಕೋಣೆಯ ಹೊರಗೆ ಜನರನ್ನು ಕೊಲ್ಲಲು ಶಂಕಿತರನ್ನು ಪ್ರೇರೇಪಿಸಿದ ಅಂಶ ಯಾವುದು ಎಂಬ ಬಗ್ಗೆ ಪೊಲೀಸರಿಗೆ
ತಿಳಿದಿಲ್ಲ ಎಂದು ಬಾಲ್ಟಿಮೋರ್ ಪೊಲೀಸ್ ಇಲಾಖೆಯ ಗಸ್ತು ಮುಖ್ಯಸ್ಥ ರಿಚರ್ಡ್ವರ್ಲೆ ಹೇಳಿದ್ದಾರೆ.