ತಾಳಿಕೋಟಿ 29: ನಮ್ಮ ದಿವ್ಯ ಭಾರತದ ಹಬ್ಬಗಳ ಸಾಲಿನಲ್ಲಿ ಯುಗಾದಿ ಪ್ರಮುಖವಾದ ಹಬ್ಬ. ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ಮನೆ ಮನೆಯಲ್ಲಿ ಸಡಗರ ಸಂಬ್ರಮ. ಹಸಿರು ತೋರಣಗಳ ಅಲಂಕಾರ. ಬೇವು ಬೆಲ್ಲವನ್ನು ಹಂಚಿ ತಿನ್ನುವ ಸಂಪ್ರದಾಯ ಮುಂಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬ ವಾಗ್ದಾನದ ಸಂಕೇತವಾಗಿದೆ ಎಂದಿ ಎಸ್ ಕೆ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಜಾತ ಸಿ. ಚಲವಾದಿ ಹೇಳಿದರು.
ಶನಿವಾರ ಪಟ್ಟಣದ ಪ್ರತಿಷ್ಠಿತ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಐಕ್ಯೂ ಏಸಿ ಹಾಗೂ ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ಹಮ್ಮಿಕೊಂಡ ಯುಗಾದಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ದಿನಕ್ಕೊಂದು ಹಬ್ಬದಂತೆ ಹಬ್ಬಗಳ ಸಾಲು ಸಾಲು. ಒಂದೊಂದು ಹಬ್ಬದ ಆಚರಣೆ ಒಂದೊಂದು ಬಗೆಯದು. ಯುಗಾದಿ ಕರಳು ಬೆಸೆಯುವ ಹಬ್ಬ ಅಕ್ಕ ತಮ್ಮ ಅಣ್ಣ ತಂಗಿ ಅಪ್ಪ ಅಮ್ಮ ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ ಯುಗಾದಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚೇರ್ಮನ್ನ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯ ಕಾಶಿನಾಥ ಮುರಾಳ ಅವರು ಮಾತನಾಡಿ ಯುಗಾದಿಯು ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ, ಇದನ್ನು ವಿಶೇಷವಾಗಿ ಭಾರತದ ದಕ್ಷಿಣ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. “ಯುಗಾದಿ” ಎಂಬ ಪದವು ಸಂಸ್ಕೃತ ಪದಗಳಾದ “ಯುಗ” ಅಂದರೆ ಯುಗ ಅಥವಾ ವಯಸ್ಸು ಮತ್ತು “ಆದಿ” ಎಂದರೆ ಆರಂಭ ಎಂಬ ಪದಗಳಿಂದ ಬಂದಿದೆ. ಹೀಗಾಗಿ, ಯುಗಾದಿಯು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಆರ್.ಎಂ.ಬಂಟನೂರ ಪ್ರಾಚಾರ್ಯರು ಯುಗಾದಿಯು ಸಮೃದ್ಧಿ, ಸಂತೋಷ ಮತ್ತು ಯೋಗಕ್ಷೇಮವನ್ನು ಸಂಕೇತಿಸುವ ವಿವಿಧ ಆಚರಣೆಗಳು ಮತ್ತು ಸಂಪ್ರದಾಯಗಳಿಂದ ನಿರೂಪಿತವಾದ ಹಬ್ಬವಾಗಿದೆ. ಪ್ರತಿ ಮನುಷ್ಯನ ಜೀವನದಲ್ಲಿ ಮೂರುವರೆ ದಿನಗಳು ಅತಿ ಪ್ರಮುಖವಾಗಿವೆ ಅವುಗಳೆಂದರೆ ಯುಗಾದಿ ದೀಪಾವಳಿ ವಿಜಯದಶಮ ಅರ್ಧ ದಿನ ಅಕ್ಷಯ ತೃತೀಯ ಇವು ಗಳಲ್ಲಿ ಯುಗಾದಿ ಹೊಸತನದ ಸಂಭ್ರಮ ಹೊಸವರ್ಷದ ಆರಂಭವಾಗಿದೆ ಎಂದು ಹೇಳಿದರು. ವೇದಿಕೆ ಮೇಲೆ ಐಕ್ಯೂ ಎಸಿ ಮುಖ್ಯಸ್ಥರಾದ ಉಮೇಶ್ ಮಂಗೊಂಡ ಹಾಗೂ ಸಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಸುರೇಶ್ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸರ್ವ ಸಿಬ್ಬಂದಿ ವರ್ಗ ಪ್ರಥಮ ತೃತೀಯ ಸೆಮಿಸ್ಟರ್ನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ಕು. ಸಂಗೀತ ಹಾಗೂ ಸುಮಾ ಯರಗಲ್ ನೆರವೇರಿಸಿದರು ಸ್ವಾಗತ ಹಾಗೂ ಪರಿಚಯವನ್ನು ಕು. ಐಶ್ವರ್ಯ ದೊಡ್ಡಮನಿ. ವಂದನೆಯನ್ನು ಕು. ಸೌಜನ್ಯ ಕಾರ್ಯಕ್ರಮದ ನಿರೂಪಣೆಯನ್ನು ವೀರೇಶ್ ಹುನಗುಂದ ನಡೆಸಿಕೊಟ್ಟರು.