ಲೋಕದರ್ಶನವರದಿ
ರಾಣೇಬೆನ್ನೂರು09: ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ನಗರ ಹೊರವಲಯದ ದೇವರಗುಡ್ಡ ರಸ್ತೆಯ ಹೊಸದಾಗಿ ನಿಮರ್ಿಸಲಾಗುತ್ತಿವರು ರೈಲ್ವೆ ಒಳ ಸೇತುವೆಯಲ್ಲಿ ನದಿ ಆಕಾರದಲ್ಲಿ ನೀರು ತುಂಬಿದ್ದರಿಂದ ಹರಿದ ನೀರು ಹೊಲಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿಗಳ ಗೋವಿನಜೋಳ ಬೆಳೆಗಳು ಸಂಪೂರ್ಣ ಹಾನಿಗೊಂಡಿದೆ. ಸ್ಥಳಕ್ಕೆ ಧಾವಿಸದ ಜಮೀನು ಮಾಲೀಕರು ನೀರಾವೃತಗೊಂಡು ಹಾನಿಗೊಳಗಾದ ಬೆಳೆಗಳನ್ನು ಕಿತ್ತು ರಸ್ತೆಗೆ ಚಲ್ಲಿ ಪ್ರತಿಭಟಿಸಿದರು.
ಈ ರಸ್ತೆಯು ಬಾಗಲಕೋಟೆ, ಬಿಳಿಗಿರಿ ರಂಗನಬೆಟ್ಟ ಸಂಚಾರಿ ಸಂಪರ್ಕ ರಸ್ತೆಯಾಗಿದ್ದು, ಒಳ ಸೇತುವೆ ನಿಮರ್ಾಣದಿಂದ ಯಾವುದೇ ಪ್ರಯೋಜನ ಕಾಣದಂತಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗಬೇಕು ಇದರಿಂದ ಸಂಚಾರ ಸುಗಮವಾಗಲಿದೆ.
ಇಲ್ಲವಾದರೆ, ಈ ಭಾಗದ ಸಂಚಾರ ಸುಗಮ ಕಾಣದೇ ನಿತ್ಯ ಜನ-ಜಾನುವಾರುಗಳು, ವಾಹನಗಳಿಗೆ ಸಂಪರ್ಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಮತ್ತು ಹುಲ್ಲತ್ತಿ, ನಗರದ ನಾಗರೀಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ ಕೆರೋಡಿ, ಪ್ರಭುಸ್ವಾಮಿ ಕರ್ಜಗಿಮಠ ಸೇರಿದಂತೆ ನೂರಾರು ರೈತರು ಪಾಲ್ಗೊಂಡ್ಡಿದರು.