ಉರ್ದು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಭಾಷೆ: ಹುಸೇನ್

ಲೋಕದರ್ಶನ ವರದಿ

ಕೊಪ್ಪಳ 08: ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ಭಾರತ ದೇಶದ ಸಂಸ್ಕೃತಿ ಈಡಿ ವಿಶ್ವಕ್ಕೆ ಮಾದರಿಯಾಗಿದ್ದು, ಇಲ್ಲಿ ಹುಟ್ಟಿ ಬೆಳೆದ ಉರ್ದು  ಭಾಷೆ ನಮ್ಮೇಲ್ಲ ಭಾರತಿಯರ ಭಾಷೆ, ಇದು ಕೇವಲ ಮುಸಲ್ಮಾನರ ಭಾಷೆ ಅಲ್ಲ, ಉರ್ದು   ಭಾಷೆ ಅತ್ಯಂತ ಸೊಗಸಾದ ಭಾಷೆ ಎಂದು ರಾಜ್ಯಸಭಾ ಸದಸ್ಯ ಬಳ್ಳಾರಿಯ ಡಾ. ಸಯ್ಯದ್ ನಾಸೀರ್ ಹುಸೇನ್ ಹೇಳಿದರು.

ಅವರು ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ಉರ್ದು   ಅಕ್ಯಾಡಮಿ ಬೆಂಗಳುರು ವತಿಯಿಂದ ಎರ್ಪಡಿಸಿದ ಈದ್ ಮಿಲನ್ ಬೃಹತ್ ಕುಲ್-ಹಿಂದ್ ಮುಷಾಯರಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅತೀ ಹೆಚ್ಚು ಮಾತನಾಡಲ್ಪಡು ಭಾಷೆಯಲ್ಲಿ ಇದು ಕೂಡ ಒಂದಾಗಿದೆ. ಉರ್ದು  ಭಾಷೆಗೆ ಶೀರೀನ್ ಭಾಷೆ ಎಂದು ಹೆಳಲಾಗುತ್ತದೆ ಅಂದರೆ ಅತ್ಯಂತ ಸೊಗಸಾದ ಭಾಷೆ ಇದಾಗಿದೆ ಎಂದರು.

ಮುಂದುವರೆದು ಮಾತನಾಡಿದ ಅವರು ಕನರ್ಾಟಕ ರಾಜ್ಯದಲ್ಲಿ ಕೂಡ ಎಲ್ಲೇಡೆ ಉದರ್ು ಭಾಷಿಕರು ಹೆಚ್ಚಾಗಿದ್ದಾರೆ, ನಮ್ಮ ಸಮಾಜದ ಮಾತೃಭಾಷೆ ಉದರ್ು ಆಗಿದ್ದು ಸರ್ಕಾರ್ ಕೂಡ ಅವರವರಿಗೆ ಮಾತೃ ಭಾಷೆಯಲ್ಲಿ ವಿದ್ಯಾಬ್ಯಾಸ ಮಾಡಲು ಆಧ್ಯತೆ ನೀಡಿದೆ. ನಮ್ಮ ಸಮಾಜ ಬಾಂದವರು ತಮ್ಮ ಮಕ್ಕಳಿಗೆ ಉದರ್ು ಜೋತೆಗೆ ಕನ್ನಡ ಭಾಷೆ ಕಲಿಯಲು ಕೂಡ ಆದ್ಯತೆ ಕೊಡಬೇಕು ಕನ್ನಡ ನಮ್ಮ ನಾಡಿನ ಆಡಳಿತ ಭಾಷೆಯಾಗಿದ್ದು, ಪ್ರತಿಯೊಬ್ಬರು ಕಲಿಯ ಬೇಕು ಎಂದರು. ಉದರ್ು ಶಾಲೆಗಳ ಅಭಿವೃದ್ಧಿ ಮತ್ತು ಉರ್ದು ಕಲಿಯುವ ಅಭ್ಯತರ್ಿಗಳಿಗೆ ಸೌಕರ್ಯ ವದಗಿಸಿಕೊಡಲು ತಮ್ಮ ಸಂಸತ್ ನಿಧಿಯಲ್ಲಿ ಸಿಗುವ ಸಹಾಯ ಸೌಕರ್ಯ ಮತ್ತು ಅನುದಾನ ಹೆಚ್ಚು ಬಳಕೆಗೆ ಮುತುವಜರ್ಿ ವಹಿಸಿ ಶ್ರಮಿಸುತ್ತಿದ್ದೆನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕನರ್ಾಟಕ ಉದರ್ು ಅಕ್ಯಾಡಮಿಯ ಅಧ್ಯಕ್ಷ ಮುಬೀನ್ ಮುನ್ನವರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ಹೊಸಪಟೇಟೆಯ ಸಮಾಜ ಸೇವಕ ಹಾಗೂ ಸವರ್ೊಜನ ಸುಕಿನೊ ಭವಂತು ಟ್ರಸ್ಟ್ನ ಅಧ್ಯಕ್ಷ ಕೆ.ಮಹೇಶ ಕುಮಾರ, ಕಾಂಗ್ರೆಸ್ ಮುಖಂಡ ಹೊಸಪೇಟೆಯ ಫಹಿಂ ಬಾಷಾ, ಲಾಯನ್ಸ್ ಕ್ಲಬ್ ಅಧ್ಯಕ್ಷ ಗವಣ್ಣ ಮುದಗಲ್, ಅಕ್ಯಾಡಮಿಯ ಸದಸ್ಯ ಶಾಹಿದ್ ಖಾಜಿ, ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ, ಬಸೇರಾ ಯತೀಮ್ ಖಾನಾ ಟ್ರಸ್ಟ್ನ ಅಧ್ಯಕ್ಷ ಎಂ.ಡಿ. ಯುಸುಫ್ ಖಾನ್, ಸೇರಿದಂತೆ ಟ್ರಸ್ಟಿನ್ ಸದಸ್ಯ ಶಬ್ಬೀರ್ ಹಾಗೂ ಸಮದ್ ಸಿದ್ದೀಖಿ ಮತ್ತು ನವೀದ್ ಬದಿಯುದ್ದಿನ ಮತ್ತಿತರರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಉದರ್ು ಕವಿಗಳಾದ ಶಫೀಖ್ ಆಬಿದಿ, ಚಾಚಾ ಪಾಲನ್ಪುರಿ, ಕಲಿಂಸಮರ ಬದಿಯುಂ, ಮುಷ್ತಾಖ್ ಸಯ್ಯಿದ್, ಮಝರ್ ಮೊಹಿಯುದ್ದಿನ್, ಶಮಿಮ್ ರಾಝ್, ಗೌಸ್ ಪೀರ್ ಹಂದದರ್್, ಶಬಾನಾ ಶಬನಮ್ ಉಜ್ಜನ್, ರಾನಾ ಜ್ಯೆಬಾ ಗ್ವಾಲಿಯರ್, ಅನ್ವರ್ ಹುಸೇನ್, ಖಮರ್ ಸುರುರ್, ಸೀರಾಜ ಶೊಲಾಪುರಿ, ಸುಂದರ್ ಮಾಲೆಗೌಂ, ಸಾಗರ್ ಬೇಳಗಾವಿ, ಎಜಾಜ್ ರಾನಿಬೆನ್ನುರ್, ವಿಜಾರತ್ ಅಲಿ ತಾಯರ್ ರವರುಗಳು ತಮ್ಮ ಕವನ ವಾಚನ ಮಾಡಿ ಜನ-ಮನ ರಂಜಿಸಿದರು.