'ಒಂದು ಗಂಟೆಯ ಕಥೆ' ಟ್ರೇಲರ್ ರಿಲೀಸ್ VANDU GHANTEYA KATHE TRAILER RELEASED
Lokadrshan Daily
4/11/25, 6:23 PM ಪ್ರಕಟಿಸಲಾಗಿದೆ
ಬೆಂಗಳೂರು, ಮಾ 03, ಕಶ್ಯಪ್ ದಕೋಜು ನಿರ್ಮಿಸಿ, ದ್ವಾರ್ಕಿ ರಾಘವ ನಿರ್ದೇಶಿಸಿರುವ ‘ಒಂದು ಗಂಟೆಯ ಕಥೆ’ ಟ್ರೈಲರ್ ಹೊರಬಂದಿದ್ದು, ಕಾಮಿಡಿ ವಿತ್ ಟ್ರಾಜಿಡಿಯಿರುವ ಸ್ಪೆಷಲ್ ಸಿನಿಮಾ ಅಂತ ಚಿತ್ರತಂಡ ಹೇಳಿಕೊಂಡಿದೆ ಅಜಯ್ ರಾಜ್, ರೆಮೊ, ಯಶ್ವಂತ್ ಸರ್ ದೇಶಪಾಂಡೆ, ಶನಾಯಾ ಕತ್ವೆ, ಸೇಥಿ ಶರ್ಮಾ, ಚಿದಾನಂದ್, ಚಂದ್ರಕಲಾ, ಪ್ರಶಾಂತ್ ಸಿದ್ದಿ ಮೊದಲಾದವರಿದ್ದಾರೆ. ಒಂದು ಸ್ಪೆಷಲ್ ಥೀಮ್ ನ ಕಥೆ ಇದಾಗಿದ್ದು, ಟ್ರೈಲರ್ ನೋಡಿದವರು ಹೆದರ ಬೇಕಿಲ್ಲ ಚಿತ್ರ ದಲ್ಲಿ ಒಂದು ಒಳ್ಳೆಯ ಮೆಸೇಜ್ ಇದೆ. ಈಗಿನ ಕಾಲಕ್ಕೆ ತಕ್ಕ ಚಿತ್ರ. ಬಹಳ ಮುಖ್ಯ ವಾಗಿ ಯುವಪೀಳಿಗೆ ನೋಡಲೇಬೇಕು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಪ್ರತಿ ಶಾಟ್ ನಲ್ಲೂ ಕಾಮಿಡಿ ಇದೆ, ಹಾರ್ಟ್ ಗೆ ಟಚ್ ಆಗುವ ಚಿತ್ರ. ಡಬಲ್ ಮೀನಿಂಗ್ ಸಂಭಾಷಣೆಗಳಿರುವ ಚಿತ್ರವಲ್ಲ. ಚಿತ್ರ ಸೆನ್ಸಾರ್ ಆಗಿದ್ದು ‘ಎ’ ಸರ್ಟಿಫಿಕೇಟ್ ಕೊಟ್ಟಿದಾರೆ. ಬಹಳಷ್ಥು ಜನ ಹಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.