ಲೋಕದರ್ಶನ ವರದಿ
ಬೆಳಗಾವಿ,30: ಸತ್ಸಂಗ ಕಾರ್ಯಕ್ರಮ ವಚನೋತ್ಸವವನ್ನು ಒಂದೇ ಜಾತಿ, ವರ್ಗಕ್ಕೆ ಸೀಮಿತಗೊಳಿಸಬೇಡಿ ಎಂದು ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ಸುರೇಂದ್ರ ಅವರು ಹೇಳಿದರು.
ರವಿವಾರ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ವಾರದ ಸತ್ಸಂಗ ವಚನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಅಯ್ಯಪ್ಪ, ಬಸವಣ್ಣ ಸೇರಿದಂತೆ ಎಲ್ಲಾ ಮಹಾತ್ಮರು ಜಗತ್ತಿನ ಒಳಿತಿಗಾಗಿಯೇ ಬೋಧಿಸಿದ್ದಾರೆ. ಹೀಗಾಗಿ ಮಹಾತ್ಮರನ್ನು ಒಂದೇ ಜಾತಿ, ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಸಿದ್ದಪ್ಪ ಪೂಜಾರಿ ಮಾತನಾಡಿದರು.
ನಾಗರಾಜ ಕೋಟಗಿ ಅಯ್ಯಪ್ಪ ಗೀತೆ ಹಾಡಿದರು. ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಖಟಾವಕರ ನಿರೂಪಿಸಿದರು. ಬಸಲಿಂಗಯ್ಯ ಹಿರೇಮಠ, ಅಜಮ್ ಖಾನಪಠಾಣ, ನಿಂಗಪ್ಪ ಭೂತಾಳಿ, ಸುರೇಶ ಕಂಬಳಿ, ಪರಶುರಾಮ ಟಾನಗಿ, ರಮೇಶ ಪೋತದಾರ, ಬಸವರಾಜ ಮುರಗೋಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.