ರಾಯಬಾಗ: ವಿದ್ಯಾಥರ್ಿಗಳಲ್ಲಿ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಸಾಧನೆಯನ್ನು ಮಾಡುವ ಕ್ಷಮತೆ ಇರುತ್ತದೆ. ಅದನ್ನು ವಿದ್ಯಾಥರ್ಿಗಳು ಕೊಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕೆಂದು ಕೆನರಾ ಬ್ಯಾಂಕ್ ಸಿನಿಯರ್ ಕೌನ್ಸಲರ್ ಸಿ.ಡಿ.ಹಂಜಿ ಹೇಳಿದರು.
ಇತ್ತೀಚೆಗೆ ಸ್ಥಳೀಯ ಕೆ. ಎಲ್. ಇ. ಸಂಸ್ಥೆಯ ಮಲಗೌಡ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿ.ಕಾಂ ಪ್ರಥಮ ವರ್ಷದ ವಿದ್ಯಾಥರ್ಿಗಳ ಸ್ವಾಗತ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಪ್ರೋ. ಆರ್ ವ್ಹಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಿಂಡಿಕೆಟ್ ಬ್ಯಾಂಕ್ನ ಗ್ರಾಮೀಣ ಅಭಿವೃಧ್ಧಿ ಅಧಿಕಾರಿ ಶ್ರೀನಿವಾಸನ್, ವಾಯ್. ಆರ್. ಕಾಂಬಳೆ, ಗುರುರಾಜ ಹೀರೆಮಠ ಹಾಗೂ ಎಮ್. ಎಸ್. ಉಜ್ಜೈನಿಮಠ ಇದ್ದರು. ವೈಷ್ಣವಿ ಕುಲಕಣರ್ಿ ಸ್ವಾಗತಿಸಿ, ನಿರೂಪಿಸಿದರು. ಸೌಧಮರ್ಿ ಘೋಂಗಡೆ ವಂದಿಸಿದರು.