ಲೋಕದರ್ಶನ ವರದಿ
ವಿಜಯಪುರ 14: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇದ್ದು, ಇದರ ಸದುಪಯೋಗವಾಗಬೇಕು. ಪ್ರತಿಯೊಂದು ಹಂತದಲ್ಲಿ ಸೃಜನಾತ್ಮಕತೆ ಬೆಳೆಸಿಕೊಂಡು ಮುಂದೆ ಬರಬೇಕು ಉತ್ತಮ ಸಮಾಜಮುಖಿ ಬದುಕು ರೂಪಿಸಿಕೊಳ್ಳಬೇಕು ಎಂದು ಇಂಟಲಿಜನ್ಸ್ ವಿಭಾಗದ ಡಿವೈಎಸ್ಪಿ ಪಿ ಡಿ ಗಜಾಕೋಶ ಹೇಳಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಎಂ ಬಿ ಎ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಆಹಾರಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳು ಕಲಿಕೆಯ ಜೊತೆಗೆ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿ ಉತ್ತಮ ವಿಚಾರಧಾರೆಗಳು ಮೂಡುತ್ತವೆ, ಹೊಸ ಹೊಸ ವಿಚಾರಗಳು ನಮ್ಮಲ್ಲಿ ಬಂದು ಜೀವನಮಾರ್ಗಕ್ಕೆ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಸೃಜನಶೀಲತೆಗೆ ಪೂರಕವೆಂಬಂತೆ ಆಹಾರಮೇಳ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್ ಎ ಪುಣೇಕರ ಮಾತನಾಡಿ, ಕಲಿಕೆ ಜೊತೆಗೆ ನಮ್ಮ ಕಾಲೇಜಿನ ವಿದ್ಯಾಥರ್ಿಗಳು ಆಹಾರಮೇಳ ಹಮ್ಮಿಕೊಂಡು ಮಾದರಿಯಾಗಿದ್ದಾರೆ. ಜೀವನಮಾರ್ಗ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳಾದ ಮಲ್ಲಪ್ಪ ತೋಟದ, ಜೆ ಡಿ ಗುಲಬಾಬಿ, ಸಂಸ್ಥೆಯ ಕಾರ್ಯದಶರ್ಿ ಎ ಎಸ್ ಪಾಟೀಲ, ನಿದರ್ೇಶಕರಾದ ಸಲಾವುದ್ದೀನ ಪುಣೇಕರ, ಅಜರುದ್ದೀನ ಸಗರ, ಸಂದೀಪ ಪಾಟೀಲ, ಪರವೇಜ ರೋಜಿನದಾರ, ಅಂಝಲ,ಅರೆಲ್ಲಾ,ಅಶ್ವಿನಿ, ಈಸ್ಮಾಯಿಲ ಸೋಹೆಲ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು.