ವಿಜಯಪುರ: ಸಾಮೂಹಿಕ ವಿಹಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ

ಲೋಕದರ್ಶನ ವರದಿ

ವಿಜಯಪುರ 11: ಕಲಿಯುಗ ಪುಣ್ಯಯುಗವಾಗಬೇಕೆಂದರೆ ಸದಾ ಸದ್ಗುರುವಿನ ಸೇವೆ ಮಾಡುತ್ತಾ ಹೃದಯ ಹೂವಿನಂತಾಗಬೇಕು ಎಂದು ಸದಾಶಿವಮಠದ ಪೀಠಾಧಿಪತಿ ಗುರು ಸಿದ್ಧರಾಮೇಶ್ವರ ಚಿಕ್ಕಯ್ಯನವರಮಠ ಹೇಳಿದರು. 

ಹುಲ್ಯಾಳ-ರಹೀಂ ನಗರದ ಸದಾಶಿವ ಮಠದಲ್ಲಿ ಚಂದ್ರಗಿರಿ ದೇವಿ ಹಾಗೂ ಶ್ರೀಗುರು ಚಕ್ರವರ್ತಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸರಳ ಸಾಮೂಹಿಕ ಮದುವೆ ಸಮಾರಂಭದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಜನರ ಕಣ್ಣು ಮುಚ್ಚಬಹುದೇ ಹೊರತು ದೇವರ ಕಣ್ಣನ್ನು ಅಲ್ಲ. ಯಾರು ಪರಿಶುದ್ಧ ಮನಸ್ಸಿನಿಂದ ಶ್ರೀ ಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೋ ಅವರ ಬದುಕು ಪಾವನವಾಗುತ್ತದೆ. ಕಲಿಯುಗ ಕಾಯಕ ಯುಗವಾದಾಗ ಮಾತ್ರ ಜಗತ್ತು ಕಲ್ಯಾಣಮಯವಾಗುತ್ತದೆ. ಮೊಸ, ಕಪಟ, ವಂಚನೆ, ಬಹಳ ದಿನ ನಡೆಯಲಾರದು. ಸಾಮೂಹಿಕ ಮದುವೆಗಳಿಂದ ನಾವೆಲ್ಲಾ ಒಂದು ಎನ್ನುವ ಭಾವನೆ ಮೂಡಿ ಎಲ್ಲರಲ್ಲ್ಲೂ ಭಾತೃತ್ವ ಮೂಡುತ್ತದೆ ಎಂದರು. 

ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ಹಾಗೆ ದಂಪತಿಗಳು ಕಾಯಾ ವಾಚಾ ಮನಸಾ ಆದರ್ಶರಾಗಿರಬೇಕು. ತಂದೆ ತಾಯಿ, ಅತ್ತಿ ಮಾವ, ಗುರು ಹಿರಿಯರನ್ನು ಗೌರವಿಸಿ ಸಮಭಾವ ಸಾಮರಸ್ಯದಿಂದ ಬದುಕು ಮಾಡುವವರೇ ನಿಜವಾದ ಸುಖಿ ದಂಪತಿಗಳು. ಮನೆಯಲ್ಲಿನ ಸಂತೋಷವೇ ಸಮಾಜದ ಉಲ್ಲಾಸ ಅದುವೆ ದೇಶದ ಸಂಭ್ರಮ ಎಂದು ನುಡಿದರು. 

ಸಮಾರಂಭ ಉದ್ಘಾಟಿಸಿದ ಸುಕ್ಷೇತ್ರ ಸೊಕ್ಕೆ ಗ್ರಾಮದ ಬಬಲಾದಿ ಶಾಖಾ ಮಠದ ಸಾರಂಗಪ್ಪಯ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯನ ದುರಾಸೆ ಸ್ವಾರ್ಥವೆಂಬ ಬೆಂಕಿ ಜಗತ್ತನ್ನು ಸುಡುತ್ತಿದೆ. ಜಿಲ್ಲೆಯ ಬೀಕರ ಬರ ಮತ್ತು ಬಿರು ಬಿಸಲಿಗೆ ಕಾರಣರಾದ ನಾವುಗಳೆ ಅದರ ಪರಿಹಾರಾರ್ಥವಾಗಿ ಮರ ಬೆಳಿಸಿ ಮಳೆ ನೀರು ಹಿಡಿದು ಅಂತರ್ಜಲ ಹೆಚ್ಚು ಮಾಡಬೇಕು. ಪ್ರಳಯವೆಂದರೇ ಬೇರೆನು ಅಲ್ಲ. ಅತೀ ವೃಷ್ಟಿ ಅನಾವೃಷ್ಟಿಗಳೇ ಪ್ರಕೃತಿಯ ಮುನಿಸು ಎಂದು ವಿಶ್ಲೇಷಿಸಿದರು. 

ಚಿಕ್ಕ ಹಂಚಿನಾಳದ ಶ್ರೀ ಶಾಂತಾನಂದ ಮಹಾಸ್ವಾಮಿಗಳು ಆಶೀವರ್ಚನ ನೀಡಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಕಲ್ಯಾಣ ಸಮಾಜ ನಿಮರ್ಿಸಲು ಸಾಮೂಹಿಕ ಮದುವೆಗಳು ಸಹಕಾರಿಯಾಗಲಿವೆ ಎಂದರು.

         ಇದೇ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು. ಹಸೆಮಣೆ ಏರಿದ ನವದಂಪತಿಗಳಿಗೆ ಶ್ರೀಮಠದಿಂದ ವಸ್ತ್ರ, ಒಡವೆ ನೀಡಲಾಯಿತು.

     ಬಿದರಿಯ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಾರವಾಡದ ರುದ್ರಸ್ವಾಮಿ ಹಿರೇಮಠ, ತೊರವಿಯ, ಮಲ್ಲಿಕಾರ್ಜುನ  ಶಾಸ್ತ್ರಿಗಳು, ಹೊಕ್ಕುಂಡಿಯ ಮಾತೋಶ್ರೀ ದಾನಮ್ಮತಾಯಿ, ಬರಗುಡಿಯ ಮದ್ದಾನಿ ಮಹಾರಾಜರು, ಗಮಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ಸೋಮನಿಂಗಗೌಡ ಪಾಟೀಲ ಬರಗುಡಿ, ವೈದಿಕ ಚಿಂತಕ ಪಂಡೀತ ಮನೋಜ ಶಾಸ್ತ್ರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ರವಿ ಕಿತ್ತೂರ, ಬಿ.ಎಸ್. ಬ್ಯಾಳಿ, ಆರ್.ಆರ್. ಪಾಟೀಲ, ಈಶ್ವರಯ್ಯ ಪೂಜಾರಿ, ಶಿಕ್ಷಕ ಪಿ.ಎಸ್. ಮುಜಗೊಂಡ, ಸದಾಶಿವ ಮಠಪತಿ, ಮಲ್ಲಿನಾಥ ಹಿರೇಮಠ, ಈರಣ್ಣ ಮಠಪತಿ, ಶೋಭಾ ಬಿರಾದಾರ, ಮುಂತಾದವರು ಪಾಲ್ಗೊಂಡಿದ್ದರು. 

ಬಿ.ಎಂ. ಪಾಟೀಲ ಪ್ರಾಥರ್ಿಸಿದರು. ಆರ್.ಎನ್. ಕುಲಕಣರ್ಿ ಸ್ವಾಗತಿಸಿದರು. ಎಸ್.ಆರ್. ಪಾಟೀಲ ನಿರೂಪಿಸಿದರು.  ದೈಹಿಕ ಶಿಕ್ಷಕ ಎನ್.ಜಿ. ಕೋಟ್ಯಾಳ ವಂದಿಸಿದರು.