ಲೋಕದರ್ಶನ ವರದಿ
ಬೆಳಗಾವಿ, 16: ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಅಡಿಯಲ್ಲಿ ದಿ. 12.ರಂದು ಸ್ವಾಮಿ ವಿವೇಕಾನಂದರ 156 ನೇ ಜನ್ಮ ದಿನೋತ್ಸವ ಮತ್ತು ಚಿಕ್ಯಾಗೊ ಧರ್ಮಸಮ್ಮೇಳನದ 125 ನೇ ವಷರ್ಾಚರಣೆ ಪ್ರಯುಕ್ತ ನಡೆದ ಈ ಸಮಾರಂಬದ ಮುಖ್ಯ ಅತಿಥಿಯಾಗಿ ಕುಮಾರಿ ನಿವೇದಿತಾ ಬುಳ್ಳಾ ಸ್ವಯಂ ಸೇವಕರ ಉದ್ದೆಶೀಸಿ ಸ್ವಾಮೀ ವಿವೇಕಾನಂದರ ವಿಚಾರಧಾರೆಗಳನ್ನು ಮತ್ತು ಅವರ ಜೀವನ ಸಮಾಜಸೇವೆ ಮತ್ತು ಭಾರತೀಯ ಪರಂಪರೆಯನ್ನು ಜಗತ್ತಿಗೆ ತೋರಿಸುವ ವಿವಿಧ ಸನ್ನಿವೇಶಗಳನ್ನು ತಿಳಿಸುತ್ತ ವಿವೇಕಾನಂದರ ವಿಚಾರ ಧಾರೆಗಳು ಯವಕರಿಗೆ ಸರ್ವಕಾಲಕ್ಕೂ ದಾರಿ ದೀಪವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈ ಸಮಾರಂಭದ ಅಧ್ಯಕ್ಷೀಯ ಸ್ಥಾನ ವಹಿಸಿದ ಡಾ. ಎ.ವ್ಹಿ ದೇವಾಂಗಮಠ ಅವರು ಅಧ್ಯಕ್ಷೀಯ ನುಡಿಗಳನ್ನು ಹೇಳುತ್ತಾ ವಿದ್ಯಾಥರ್ಿಗಳು ವಿವೇಕಾನಂದರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಜಿ.ಟಿ. ನಾಯಕ್ ಮತ್ತು ವೈ.ಆರ್.ಸಿ ಸಂಯೊಜಕ ಘಟಕದ ಶ್ರೀಮತಿ ನಾಗಶ್ರೀ ಪೂಜಾರ ಭಾಗವಹಿಸಿದ್ದರು. ಈ ಸಮಾರಂಭವನ್ನು ರಾಜೇಶ ಕೊಪ್ಪಳ್ ಅವರು ನಿರೂಪಿಸಿದರು, ಸುಪ್ರಿಯಾ ಕುಲಕಣರ್ಿ ಅವರು ಸ್ವಾಗತಿಸಿದರು ಹಾಗೂ ಕಾಶೀಮಾ ನೂರಭಾಷಾ ವಂದಿಸಿದರು.