ಸಂಬರಗಿ: ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ

ಲೋಕದರ್ಶನ ವರದಿ

ಸಂಬರಗಿ  21:  ಡಿಸೆಂಬರ 5 ರಂದು ಕಾಗವಾಡ ವಿಧಾನ ಸಭಾ ಉಪ ಚುನಾವಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ  ಪಿಎಸ್ಐ  ಸುಮಾ ಗೋರಗಲ್  ಇವರ ನೇತೃತ್ವದಲ್ಲಿ ಗುರುವಾರ ಸಂಬರಗಿ ಗ್ರಾಮದಲ್ಲಿ ಪಥಸಂಚಲನ ನಡೆಸಿ ಮತದಾನ ಜಾಗೃತಿ ಶಾಂತಿಯುತವಾಗಿ ಮತದಾನ ಮಾಡಬೇಕೆಂದು ವಿನಂತಿಸಿದರು.

 ಈ ಸಂದರ್ಭದಲ್ಲಿ ಸಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷರು ಮಹಾದೇವ ತಾನಗೆ ಮಾತನಾಡಿ ಎಲ್ಲಾರು ಕಡ್ಡಾಯವಾಗಿ  ಯುವಕ ಯುವತಿಯರು ಹೆಚಿನ ಪ್ರಮಾಣದಲ್ಲಿ ಮತ ಚಲಾಯಿಸಬೇಕೆಂದು ವಿನಂತಿಸಿದರು.

          ಡಿಆರ್ , ಕೆಎಸ್ ಆರ್ ಪಿ , ಪೊಲೀಸ ಪಡೆ ಹಾಗೂ ಶಾಲಾ ಮಕ್ಕಳಿಂದ ಗ್ರಾಮದ  ಪ್ರಮುಖ ಬೀದಿಗಳಲ್ಲಿ ಜಾಗೃತಿ ನಡೆಸಿದರು. ಈ ವೇಳೆ ಸಂಬರಗಿ ವಲಯದ ಪೊಲೀಸ ಇಲಾಖೆ ಅಧಿಕಾರಿಗಳು ಬಸವರಾಜ ತಳವಾರ ಪ್ರಧಾನಿ ಪೊಂಡೆ, ಸಂಜು ಕಾಂಬಳೆ, ಆನಂದ ಕೋಳಿ , ಸಿ ಜಿ ಉಮರೆ, ರಾಘವೇಂದ್ರ ಹೊಸಮನಿ , ಧರೆಪ್ಪಾ ಕುಂಬಾರ, ದೆವೇಂದ್ರ ಕೋಳಿ ಸೇರಿದಂತೆ ಅನೇಕ ಗ್ರಾಮದ ಗಣ್ಯರು ಹಾಜರಿದ್ದರು.