ಜಲಶಕ್ತಿ ಅಭಿಯಾನ: ಮಳೆ ನೀರು ಸಂಗ್ರಹ, ಸಂರಕ್ಷಣೆ, ಪುನರ್ಬಳಕೆ ನಿತ್ಯ ಜೀವನದ ಅಂಗವಾಗಲಿ

ಗದಗ 07: ನೀರು ಜನರ ಅತ್ಯಂತ ಪ್ರಾಥಮಿಕ ಅವಶ್ಯಕತೆ. ಅದರ ಸಂರಕ್ಷಣೆ, ಸಂವರ್ಧನೆ ನಿತ್ಯ ಜೀವನದ ಅಂಗವಾಗಬೇಕು ಅಂತಹ ತಿಳುವಳಿಕೆ, ಜಾಗೃತಿ ಜನರಲ್ಲಿ ಮೂಡಿಸುವ ಮೂಲ ಉದ್ದೇಶದಿಂದ ಜಲಶಕ್ತಿ ಅಭಿಯಾನವನ್ನು ಕೇಂದ್ರ ಸಕರ್ಾರ ಜಾರಿಗೊಳಿಸಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದಶರ್ಿ ಸುನೀಲಕುಮಾರ ನುಡಿದರು.

     ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಲಶಕ್ತಿ ಅಭಿಯಾನ ಜಾರಿ ಕುರಿತು ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ತಾವು ರೋಣ ಹಾಗೂ ಗದಗ ತಾಲೂಕಿನಲ್ಲಿ ಗುರುವಾರ ಪ್ರವಾಸ ಮಾಡಿ ಜಲಶಕ್ತಿ ಅಭಿಯಾನದಡಿ ಕಾಮಗಾರಿ ಕಾರ್ಯಗಳನ್ನು ಪರಿಶೀಲಿಸಿದ್ದು  ಜಲ ಸಂವರ್ಧನೆ, ಸಂರಕ್ಷಣೆ ಕುರಿತಂತೆ ಜಿಲ್ಲೆ ಉತ್ತಮ ಕಾರ್ಯ ಮಾಡುತ್ತಿದ್ದು ಇದನ್ನು ಸೆಪ್ಟೆಂಬರ 15ರ ಒಳಗಾಗಿ  ಪೂರ್ಣಗೊಳಿಸಲು ಜಿಲ್ಲಾ ಪಂಚಾಯತ, ಸ್ಥಳೀಯ ಸಂಸ್ಥೆಗಳು, ಕೃಷಿ, ತೋಟಗಾರಿಕೆ, ಅರಣ್ಯ, ಸಣ್ಣ ನೀರಾವರಿ, ಪಂಚಾಯತ ರಾಜ್ ಇಂಜನಿಯರಿಂಗ, ಲೋಕೋಪಯೋಗಿ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳು ಪ್ರಯತ್ನಿಸಬೇಕು. ಹುಲಕೋಟಿಯ ಕೆವಿಕೆ ಸೇರಿದಂತೆ ಎಲ್ಲ ಸಕರ್ಾರೇತರ ಸಂಸ್ಥೆಗಳು, ರೈತರು, ಸಾರ್ವಜನಿಕರು ಇದನ್ನು ಜನಾಂದೋಲನ ರೂಪದಲ್ಲಿ ಜಾರಿಗೊಳಿಸಲು ಮುಂದಾಗಬೇಕು. ಗದಗ ರೋಣ ಗ್ಪಿಳೂಕುಗಳ ಎಲ್ಲ ಸಾಂಪ್ರದಾಯಿಕ ಕಲ್ಯಾಣಿ, ಭಾವಿ, ಕೆರೆಗಳ ಪುನಶ್ಚೇತನ, ಹಳ್ಳಿಗಳಿಗೆ ಚೆಕ್ಡ್ಯಾಂ, ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ನಗರ ಹಾಗೂ ಗ್ರಾಮೀಣ ಪ್ರಾದೇಶಿಕ ಎಲ್ಲ ಸಕರ್ಾರಿ ಕಟ್ಟಡಗಳಿಗೆ ಹಾಗೂ ಮನೆಗಳಿಗೆ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯವಾಗಿಸಬೇಕು. ಅರಣ್ಯ ಇಲಾಖೆಯು ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯ ಅಂದಾಜು 3911 ಕಿ.ಮೀ. ಗ್ರಾಮೀಣ ರಸ್ತೆಗಳ ಬದಿಗಳಿಗೆ ಮರಗಳನ್ನು ನೆಡುವ ಕಾರ್ಯಕ್ರಮ ರೂಪಿಸಬೇಕು ಎಂದು ಸುನೀಲಕುಮಾರ ಸೂಚಿಸಿದರು.

    ಜಿಲ್ಲೆಯು ಬೇಟಿ ಬಚಾವೋ, ಬೇಟಿ ಪಡಾವೋ ಕೇಂದ್ರ ಯೋಜನೆಯಡಿ ಹಾಗೂ ಜಿಲ್ಲೆಯ ಅಂತರ್ಜಲ ಸಂವರ್ಧನೆ, ಸಂರಕ್ಷಣೆ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕೆ ರಾಷ್ಟ್ರಮಟ್ಟದ ಗಮನ ಸೆಳೆಯುವ ಸಾಧನೆ ಮಾಡಿದ್ದು ಅದೇ ರೀತಿ ಜನರೇ ಪ್ರಶಸ್ತಿ ನೀಡುವಂತೆ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಜಲಶಕ್ತಿ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಜಲ ಸಂರಕ್ಷಣೆ -ಮಳೆನೀರು ಸಂಗ್ರಹ, ಸಾಂಪ್ರದಾಯಿಕ ಕೆರೆ ಭಾವಿಗಳ ಪುನಶ್ಚೇತನ, ಜಲದ ಪುನರ್ಬಳಕೆ-ಇಂಗಿಸುವಿಕೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಹಾಗೂ ವ್ಯಾಪಕ ಹಸುರೀಕರಣ ಅಂಶಗಳನ್ನು ಒಳಗೊಂಡ ಜಲಶಕ್ತಿ ಅಭಿಯಾನಕ್ಕೆ ದೇಶದ 256 ಜಿಲ್ಲೆಗಳ 1000 ಕ್ಕೂ ಹೆಚ್ಚಿನ ಆಯ್ದ ತಾಲೂಕುಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದಶರ್ಿಗಳು ನುಡಿದರು.

     ಜಲಶಕ್ತಿ ಅಭಿಯಾನ ತಾಕರ್ಿಕ ಯಶಸ್ಸು ಕಾಣಬೇಕಾದ್ದಲ್ಲಿ ಜಿಲ್ಲೆಯ ರೈತರ ಕೃಷಿ ಯೋಜನೆಯಲ್ಲೂ ಮಾಪರ್ಾಡು ಆಗಬೇಕು. ರೈತರ ಬೆಳೆಗೆ ಯೋಗ್ಯ ಬೆಲೆ ಹಾಗೂ ಅಗತ್ಯ ಮಾರುಕಟ್ಟೆ ಒದಗಿಸುವುದು ಮುಖ್ಯವಾಗಿದೆ. ಇಂದಿನ ಸಂಕೀರ್ಣ ಜೀವನ, ವಿವಿಧ ರೋಗಗಳಿಂದ ಸಂರಕ್ಷಣೆ ಮುಂಬರುವ ದಿನಗಳಲ್ಲಿ ಮತ್ತೆ ರಾಗಿ, ಜೋಳ, ಗೋಧಿ, ಮಾವು, ಗೋಡಂಬಿ ಮುಂತಾದ ಸಾಂಪ್ರದಾಯಿಕ ಬೆಳೆಗಳಿಗೆ ಬೇಡಿಕೆ ಹೆಚ್ಚಲಿದೆ ಆದುದರಿಂದ ಕೃಷಿ, ತೋಟಗಾರಿಕೆ ಇಲಾಖೆಗಳು ಈಗಾಗಲೇ ಇರುವ ಸಕರ್ಾರಿ ಯೋಜನೆಗಳಡಿ ಕೃಷಿ ವಿಜ್ಞಾನಿಗಳು ಹುಲಕೋಟಿ ಕೆವಿಕೆ ಸಂಸ್ಥೆ ಮಾವು ಬೆಳೆಗಾರರ ಸಂಘ ಹಾಗೂ ಇತರ ಸಂಸ್ಥೆಗಳ ಸಹಕಾರದೊಂದಿಗೆ ರೈತರಲ್ಲಿ ಜಾಗೃತಿ ಮೂಡಿಸಲು, ಕಡಿಮೆ ನೀರಿನಿಂದ ಹೆಚ್ಚಿನ ಬೆಳೆ ತೆಗೆಯಲು ಹನಿ ನೀರಾವರಿಯಂತಹ ಸೌಲಭ್ಯ ಬೆಳೆಸಿಕೊಳ್ಳಲು ಉತ್ತೇಜಿಸಬೇಕು. ರೈತರು ವಿದೇಶಿ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನ ನೀಡಲು ಅನುವಾಗುವಂತೆ ಅಗತ್ಯದ ಎಲ್ಲ ಮಾಹಿತಿ ಒದಗಿಸಬಹುದಾಗಿದೆ ಎಂದು ಸುನೀಲಕುಮಾರ ಅಭಿಪ್ರಾಯಪಟ್ಟರು.

   ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಜಲಶಕ್ತಿ ಅಭಿಯಾನದಡಿ ಗದಗ ತಾಲೂಕಿನ 277 ಸಕರ್ಾರಿ ಕಟ್ಟಡಗಳ ಪೈಕಿ 164 ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಪೂರ್ಣಗೊಂಡಿದೆ ಎಂದರು. ರೋಣದಲ್ಲಿ ನೆರೆ ಪರಿಸ್ಥಿಯಿಂದ ವಿಳಂಬವಾಗಿದ್ದು ಅಕ್ಟೋಬರ ಒಳಗಾಗಿ ಎರಡು ತಾಲೂಕುಗಳ ಎಲ್ಲ ಸಕರ್ಾರಿ ಕಟ್ಟಡಗಳಿಗೆ ಮಳೆನೀರು ಸಂಗ್ರಹ ವಿಧಾನ ಅಳವಡಿಸಲಾಗುವುದು. ಮುಂಗಾರು ಹಾಗೂ ಹಿಂಗಾರು ಬೆಳೆ ನಂತರ ರೈತರ ಹೊಳಲಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಸಂವರ್ಧನೆ ಕಾಮಗಾರಿ ಕೈಗೊಳ್ಳಲಾಗುವುದು. ರಾಜ್ಯ ಸಕರ್ಾರದ ಜಲಾಮೃತ ಯೋಜನೆಯಡಿ ಜಿ.ಪಂ.ಇಂಜನಿಯರಿಂಗ ವಿಭಾಗಕ್ಕೆ ಕೆರೆಗಳ ಪುನಶ್ಚೇತನಕ್ಕೆ ಗದಗ ರೋಣ ತಾಲೂಕುಗಳಿಗೆ 1.10 ಕೋಟಿ ರೂ. ಅನುದಾನ ನೀಡಲಾಗಿದೆ. ಜಲಶಕ್ತಿ ಅಭಿಯಾನದ ಐದು ಅಂಶಗಳ ಸಂಪೂರ್ಣ ಜಾರಿಗೆ, ಜನರಿಗೆ, ರೈತರಿಗೆ ತಿಳುವಳಿಕೆ ಮಾಹಿತಿ ನೀಡಲು ಕೃಷಿ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಜಾಗೃತಿ ಮೂಡಿಸಲಾಗುತಿದ್ದು  ಗ್ರಾಮ ಪಂಚಾಯತ ಹಾಗೂ ಗ್ರಾಮ ಮಟ್ಟದಲ್ಲಿ ಮಳೆನೀರು ಸಂಗ್ರಹ, ಜಲಸಂವರ್ಧನೆ, ಕೆರೆ ಭಾವಿಗಳ ಪುನಶ್ಚೇತನ ಹಾಗೂ ಹಸುರೀಕರಣಕ್ಕೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಂಜುನಾಥ ಚವ್ಹಾಣ ನುಡಿದರು.

     ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ ಗದಗ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮನೆ, ಕಟ್ಟಡಗಳ ನಕಾಶೆಗೆ ಮಂಜೂರಾತಿ ನೀಡಲು, ಪೂರ್ಣಗೊಂಡಿದ್ದಕ್ಕೆ ಅನುಮತಿ ಪತ್ರ ನೀಡಲು ಮಳೆನೀರು ಸಂಗ್ರಹ ವಿಧಾನ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ತಪ್ಪದೇ ಅನುಸರಿಸಲು ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ನೀಡಲಾಗಿದೆ ಎಂದರು. ಎರಡು ತಾಲೂಕುಗಳ ನಗರ ಪ್ರದೇಶಗಳಲ್ಲಿನ ಸಕರ್ಾರಿ ಕಟ್ಟಡಗಳಿಗೆ ಮಳೆನೀರು ವಿಧಾನ ಅಳವಡಿಕೆಕಾಮಗಾರಿಗಳಿಗಾಗಿ ಟೆಂಡರ ಪ್ರಕ್ರಿಯೆ ಜರುಗಿಸಲಾಗಿದೆ. ಗದಗ ತಾಲೂಕಿನ 6 ಹಾಗೂ ರೋಣದ ಒಂದು ನಗರ ಪ್ರದೇಶದ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗದುಗಿನ ಭೀಷ್ಮ ಕೆರೆಯ 70 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹಿಸಲು ಕ್ರಮವಹಿಸಿದೆ. ಇದರಿಂದ ಗದುಗಿನ ಬಹುತೇಕ ಬೋರ್ವೇಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಗದಗ ರೋಣ ನಗರ ಪ್ರದೇಶಗಳಲ್ಲಿ ಜಲಶಕ್ತಿ ಅಭಿಯಾನದ ಐದು ಅಂಶಗಳನ್ನು ನಿಗದಿಯ ಅವಧಿಯಲ್ಲಿ ಪೂರ್ಣಗೊಳಿಸಲು ಸರ್ವಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು.

     ಸಭೆಯಲ್ಲಿ ಕೇಂದ್ರ ಸಕರ್ಾರದ ಉಕ್ಕು ಖಾತೆಯ ಉಪಕಾರ್ಯದಶರ್ಿ ಹಾಗೂ ಗದಗ ಜಿಲ್ಲೆಯ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಅನಿಲಕುಮಾರ, ಗದಗ ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿ ಪ್ರಾಣೇಶರಾವ್, ಗದಗ ಜಿಲ್ಲಾ ಜಲಶಕ್ತಿ ಅಭಿಯಾನದ ಜಿ. ಪಂ. ನೋಡಲ್ ಅಧಿಕಾರಿ ಟಿ. ದಿನೇಶ, ವಿವಿಧ ಇಲಾಖೆಗಳ ಹಾಗೂ ಹುಲಕೋಟಿ ಕೆವಿಕೆ ಸಂಸ್ಥೆಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಮಾವು ಬೆಳೆಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಜಲಶಕ್ತಿ ಅಭಿಯಾನದ ಅನುಷ್ಠಾನದ ಮಾಹಿತಿ ನೀಡಿದರು.