ಜನ ಜಾನುವಾರಗಳಿಗೆ ನೀರಿನ ಸಮಸ್ಯೆಯಾಗದಿರಲಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಸೂಚನೆ

ರಾಯಬಾಗ 05: ತಾಲೂಕಿನಲ್ಲಿ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿದ್ದರಿಂದ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ. ನೋಡಲ್ ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಸೂಚಿಸಿದರು.

ಮಂಗಳವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಅಧಿಕಾರಿಗಳು ಯಾವುದೇ ನೆಪ ಹೇಳದೆ ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಚುರುಕಾಗಿ ಮಾಡಬೇಕೆಂದು ತಿಳಿಸಿದರು. 

        ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಡಿ.ಎಂ.ಜಕ್ಕಪ್ಪಗೋಳ ಮಾತನಾಡಿ, ತಾಲೂಕಿನ 24 ಗ್ರಾಮಗಳಿಗೆ ಟ್ಯಾಂಕರ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದೇವೆ. ಪ್ರತಿದಿನ ಸುಮಾರು 160 ರಿಂದ 170 ಸಾರಿಗೆಗಳಷ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಸಂಬಂಧಿಸಿದ ಆಯಾ ಗ್ರಾ.ಪಂ.ಅಧಿಕಾರಿಗಳು ಟ್ಯಾಂಕರ ಬಗ್ಗೆ ನಿಗಾವಹಿಸಿ ಯಾರಿಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು. 

    ಹೆಸ್ಕಾಂ ಅಧಿಕಾರಿ ರಮೇಶ ಶಿಡ್ಲಾಳೆ ಮಾತನಾಡಿ, ಗಂಗಾಕಲ್ಯಾಣ ಯೋಜನೆಯಡಿ 164 ಕಾಮಗಾರಿಗಳ ಪೈಕಿ 38 ಕಾಮಗಾರಿಗಳು ಮುಗಿದಿವೆ. ದೀನದಯಾಳ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ ತಾಲೂಕಿನಲ್ಲಿ 4400 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನು 1200 ಮನೆಗಳ ಕೆಲಸ ಪ್ರಗತಿಯಲ್ಲಿದೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು 20 ಅಜರ್ಿಗಳು ಬಂದಿದ್ದು, ಅದರಲ್ಲಿ 10 ಪಂಪಸೆಟ್ಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ ಎಂದರು. 

ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಆಯೋಜಿಸಲು ಕ್ರಮ ಕೈಗೊಳ್ಳಬೇಕು, ಶಾಲೆಗಳಲ್ಲಿ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧ್ಯಕ್ಷೆ ಸುಜಾತಾ ಪಾಟೀಲ ಅವರು ಬಿಇಒ ಅವರಿಗೆ ಸೂಚಿಸಿದರು. 

ಪಶುವೈದ್ಯಾಧಿಕಾರಿ ಎಮ್.ಬಿ.ಪಾಟೀಲ ಮಾತನಾಡಿ, ತಾಲೂಕಿನ ಬೂದಿಹಾಳ ಕ್ರಾಸ್ದಲ್ಲಿ ಗೋಶಾಲೆ ಮತ್ತು ಮೇವಿನ ಬ್ಯಾಂಕ್ ತೆರೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆಯು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದ್ದರಿಂದ ಸಭೆ 2 ಗಂಟೆಗಳ ಕಾಲ ತಡವಾಗಿ ಪ್ರಾರಂಭವಾಯಿತು. 

ತಾಲೂಕಾ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ವಾಚಿಸಿದರು.   

     ತಾ.ಪಂ. ಉಪಾಧ್ಯಕ್ಷೆ ಸವಿತಾ ನಾಯಿಕ, ಸಹಾಯಕ ಕೃಷಿ ನಿದರ್ೇಶಕ ಎಂ.ಸಿ.ಮನ್ನಿಕೇರಿ, ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಆರ್.ಕಳ್ಳಿಮನಿ, ಸಂತೋಷಕುಮಾರ, ಸುದೀಪ ಚೌಗಲಾ ಸೇರಿದಂತೆ ತಾಲೂಕು ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.