ವಿವಾಹ ಆರತಕ್ಷತೆ ಕಾರ್ಯಕ್ರಮ

Wedding reception program

ವಿವಾಹ ಆರತಕ್ಷತೆ ಕಾರ್ಯಕ್ರಮ

ಹುಬ್ಬಳ್ಳಿ 26: ಧಾರವಾಡ ಹೆಸ್ಕಾ ಇಂಜಿನಿಯರ್ ಶಿವಕುಮಾರ ಎನ್‌. ಉಳಸಂದ್ರ ಕುಟುಂಭದ ಶುಭ ವಿವಾಹ ಆರತಕ್ಷತೆ ಕಾರ್ಯಕ್ರಮ ಜಿಲೇಬಿ ಬಸಣ್ಣ ಹಾಲ್‌ನಲ್ಲಿ ಅದ್ಧೂರಿಯಾಗಿ ನೇರವೇರಿತು. ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ, ನವ ವಧುವರರಾದ ಡಾ. ಮಂಜುನಾಥ ಹಾಗೂ ಡಾ. ವೈಷ್ಣವಿ ಅವರಿಗೆ ಗಣ್ಯರು, ಬಂಧುಗಳು, ಶುಭಾಶೀರ್ವದಿಸಿದರು. ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭ ಕೋರಿದರು. ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಮೃತ್ಯುಂಜಯ ಮಟ್ಟಿ, ಇಂದುಧರ ಹಿರೇಮಠ, ಕೆ.ಎಸ್‌.ಮೋತೆ, ಕಿರಣ ಮಟ್ಟಿ, ಲತಾ(ಪ್ರೇಮಾ) ಉಳಸಂದ್ರ, ಶಿವಕುಮಾರ ಎನ್‌.ಉಳಸಂದ್ರ, ಡಾ. ಅನಿತಾ ಲಂಗಾಡೆ, ಡಾ. ಮಲ್ಲಿನಾಥ ಮಾರುತಿ ಲಂಗಾಡೆ, ಮುಂತಾದವರು ಇದ್ದರು.