ಪುರಸಭೆ ಅಧಿಕಾರಿಗಳೇ ಈ ಗುಂಡಿ ಮುಚ್ಚೋದು ಯಾವಾಗ

ಅಶೋಕ ಉಕ್ಕಿಸಲ

ಗಜೇಂದ್ರಗಡ 07: ಪಟ್ಟಣದ 17ನೇ ವಾಡರ್ಿನಲ್ಲಿನ ನದಾಫ ಪ್ಲಾಟ್ ತೆರಳುವ ರಸ್ತೆಯಲ್ಲಿ  ಹಾಕಲಾದ ಬೆಡ್ಗೆ  ದೊಡ್ಡದಾದ ಗುಂಡಿಯೊಂದು ಬಿದ್ದು ವಾಹನ ಸವಾರರಿಗೆ ತುಂಬಾ ತೊಂದರೆದಾಯಕವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುಗಮ ಸಂಚಾರದ ಕಲ್ಪನೆಯನ್ನು ಇಟ್ಟುಕೊಂಡು ನಗರದ ವಿವಿಧ ಬಡಾವಣೆಯಲ್ಲಿ ಅದೇಷ್ಟೋ ಕಾಮಗಾರಿಗಳನ್ನು ನಗರದ ಪುರಸಭೆ ಅಧಿಕಾರಿಗಳು ಲಕ್ಷಾಂತರ ಹಣಗಳನ್ನು ಹಾಕಿ ಕಾಮಗಾರಿಗಳನ್ನು ನಡೆಸುತ್ತಾ ಬಂದಿದ್ದಾರೆ.

    ಆದರೆ ಪುರಸಭೆ ಪಕ್ಕದಲ್ಲಿಯೇ ಬೇಡ್ ಕುಸಿದರು ಪುರಸಭೆಯ ಹಲವು ಅಧಿಕಾರಿಗಳು ಪ್ರತಿನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು ಇದಕೆ ಕ್ಯಾರೆ ಎನ್ನದೇ ಇರುವುದು ಜನರ ಆಕ್ರೋಶಕ್ಕೆ  ಕಾರಣವಾಗಿದೆ.

ಬಾರಿ ವಾಹನ ಪ್ರಯಾಣದಿಂದ ಕುಸಿತ: ಈ ಹಿಂದೆಯೂ ಕೂಡ ನಗರೋತ್ಥಾನ ಕಾಮಗಾರಿ ನಡೆಯುವ ಸಮಯದಲ್ಲಿ ಭಾರಿ ವಾಹನ ಸಂಚರಿಸಿದ ಪರಿಣಾಮವಾಗಿ ಬೆಡ್ ಕುಸಿತಗೊಂಡು ಅದೇಷ್ಟೋ ದಿನ ಹಾಗೇಯೇ ಉಳಿದು ಹೊಗಿತ್ತು ಬಳಿಕ ನಿಮರ್ಾಣ ಮಾಡಿದ ನಂತರ ಮತ್ತೇ ಕಾಮಗಾರಿ ಪ್ರಾರಂಭವಾಗಿದೆ. ಈಗಲೂ ಕೂಡಾ ಅದೇ ಹಳೆಯ ರೀತಿಯಲ್ಲಿ ಬೆಡ್ ಕುಸಿದು ಸಂಚಾರಕ್ಕೆ ತೊಂದರೆ ಆಗಿದೆ. 

ಆ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು ಹಾಗೂ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸ್ಥಳೀಕರು ಆಗ್ರಹಿಸಿದರು.

ಕಳಪೆ ಮಟ್ಟದ ಕಾಮಗಾರಿಯಿಂದ ಕುಸಿತ: ಈ ಹಿಂದೆ ಇದೇ ಜಾಗದಲ್ಲಿ ಇದೇ ಬೆಡ್ ಕುಸಿತಗೊಂಡಿತ್ತು ಅದನ್ನು ಮರಳಿ ನಿಮರ್ಾಣ ಮಾಡಲಾಗಿತ್ತು ಆ ನಿಮರ್ಾಣ ಕಾರ್ಯಯು ಕಳಪೆ ಮಟ್ಟದಿಂದ ಕೂಡಿದ್ದರಿಂದಾಗಿ ಈ ಬಾರಿಯೂ ಕೂಡಾ ಕುಸಿತ ಕಂಡಿದೆ ಇದಕ್ಕೆ ಪುರಸಭೆ ಅಧಿಕಾರಿಗಳು ಕೂಡಾ ಸಾಥ್ ನೀಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ - ಕಾಲೇಜು ವಿದ್ಯಾರ್ಥಿ ಗಳಿಗೆ ತೊಂದರೆ: ಹೌದು ಇದೇ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಿದ್ಯಾಥರ್ಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ ಅವರು ಶಾಲಾ - ಕಾಲೇಜುಗಳಿಗೆ ಈ ರಸ್ತೆ ಸಮೀಪದ ದಾರಿಯಾಗಿತ್ತು ಸುಗಮವಾಗಿ ಸಂಚರಿಸುತ್ತಿದ್ದರು ಆದರೆ ಆ ಗುಂಡಿಯಿಂದಾಗಿ ವಿದ್ಯಾಥರ್ಿಗಳು ಒಂದು ರೌಂಡು ಹಾಕಿಕೊಂಡು ಶಾಲಾ - ಕಾಲೇಜುಗಳಿಗೆ ಹೋಗುವಂತ ಪರಿಸ್ಥಿತಿ ಬಂದಿದೆ.

ಒಟ್ಟಿನಲ್ಲಿ ಈ ರಸ್ತೆ ಎಲ್ಲಾ ವರ್ಗದ ಜನರಿಗೆ ಅನಕೂಲಕರವಾಗಿದ್ದು ಈ ರಸ್ತೆಯಲ್ಲಿನ ಗುಂಡಿ ನೋಡಿದ್ದರು ನೋಡದಂತೆ ಜಾಣ ಕುರುಡು ವರ್ತನೆಯನ್ನು ಪುರಸಭೆ ಅಧಿಕಾರಿಗಳು ತೋರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಇದನ್ನು ಸರಿಯಾದ ರೀತಿಯಲ್ಲಿ ಅಂದರೆ ಗುಣಮಟ್ಟದ ಕಾಮಗಾರಿ ನಡೆಯಬೇಕೇ ಹೊರತು ಕಳಪೆ ಮಟ್ಟದ ಕಾಮಗಾರಿ ನಡೆಯಬಾರದು. ಕಳಪೆ ಮಟ್ಟದಲ್ಲಿ ನಡೆದಿದ್ದು ಕಂಡು ಬಂದಲ್ಲಿ ಉಘ್ರವಾಎ ಹೋರಾಟ ಮಾಡುವುದಾಗಿ  ಸಾರ್ವಜನಿಕರು ತಿಳಿಸಿದರು.