ಅಥಣಿ 06: ಕೂಲಿ ಮಾಡಿ ಬುದುಕು ಕಟ್ಟಿಕೊಂಡಿದ್ದ ವಿಧವೆ ಮಹಿಳೆಯೊಬ್ಬಳು ತನ್ನ ಕರುಳಿನ ಕುಡಿಯ ಬಗ್ಗೆ ಅನೇಕ ಕನಸು ಹೊತ್ತು ಶಾಲೆ ಕಲಿಸುತ್ತಿರುವಾಗಲೇ ಬರಸಿಡಿಲು ಬಡಿದಂತೆ ರಸ್ತೆ ಅಪಘಾತವಾಗಿ ಮಗು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿರುವ ಮಹಿಳೆಗೆ ನೆರವಿನ ಹಸ್ತ ಅಗತ್ಯವಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಾಲಕ ವಿಶಾಲ ಹಣಮಂತ ಬಿರಾದಾರ (14) ಕಳೆದ ಡಿಸೆಂಬರ 13 ರಂದು ರಸ್ತೆ ದಾಟುವಾಗ ನತದೃಷ್ಟ ಕಾರ ವಾಹನದಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಹಣಮಂತ ಬಿರಾದಾರನನ್ನು ಕಳೆದುಕೊಂಡ ವಿಶಾಲ ತಾಯಿ ಲಕ್ಕವ್ವನ ಮಾರ್ಗದರ್ಶನದಂತೆ ರಾಯಭಾಗ ತಾಲೂಕಿನ ಹಾರೂಗೇರಿಯ ಬೇಥಲ್ ಪೌಂಡಿಶೆನ್ ವತಿಯಿಂದ ನಡೆಯುತ್ತಿದ್ದ ಅನಾಥಶ್ರಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ, 2 ತಿಂಗಳ ಹಿಂದೇ ಕು. ವಿಶಾಲ ಬಿರಾದಾರ ಅದೇ ಗ್ರಾಮದ ರಸ್ತೆಯಲ್ಲಿ ಅಪಘಾತಗಿಡಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆ.
ತಲೆಗೆ ತೀವ್ರಗಾಯಗೊಂಡಿರುವ ಮಗುವಿಗೆ ಮಹಾರಾಷ್ಟ್ರದ ಸಾಂಗಲಿಯ ಭಾರತಿ ವಿದ್ಯಾಪೀಠ ಆಸ್ಪತ್ರೆಯಲ್ಲಿ 2 ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ಬಾರಿ ಪಟ್ಟು ಬಿದ್ದ ಹಿನ್ನಲೆಯಲ್ಲಿ ಮೆದುಳಿನ ಒಂದು ಭಾಗವನ್ನು ವೈಧ್ಯರು ಶಸ್ತ್ರ ಚಿಕಿತ್ಸೆ ನೀಡಿ ಹೊಟ್ಟೆಯ ಭಾಗದಲ್ಲಿ ಶೇಖರಿಸಿ ಇಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಈ ಮಗುವಿಗೆ ಇದೇ ಫೇ.17ರಂದು ಹೊಟ್ಟೆಯ ಭಾಗದಲ್ಲಿಟ್ಟಿರುವ ಮೆದುಳನ್ನು ಮತ್ತೇ ತಲೆಯ ಭಾಗದಲ್ಲಿ ಕಸಿ ಮಾಡಿ ಚಿಕಿತ್ಸೆ ನೀಡುವದಾಗಿ ವೈಧ್ಯರು ಹೇಳಿದ್ದಾರೆ.
ಸು. 4 ಲಕ್ಷ ರೂ.ವೆಚ್ಚವಾಗುವ ಈ ಚಿಕಿತ್ಸೆಗೆ ಹಣ ಹೊಂದಿಸಲು ಈ ಬಡ ಕುಟುಂಬದ ಮಹಿಳೆ ಬಾಲಕನ ತಾಯಿ, ಲಕ್ಕವ್ವ ಸಂಕಟ ಪಡುತ್ತಿದ್ದಾಳೆ. ಸರಕಾರ ನೇರವು ಕೂಡಾ ಈ ಮಗುವಿಗೆ ದೊರೆಯುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಶ್ರಮಿಸಬೇಕಾಗಿದೆ. ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಆಥರ್ಿಕ ನೇರವು ಅಗತ್ಯವಿದ್ದು, ಸಹಾಯಹಸ್ತ ನೀಡಬಯಸುವ ಕುರುಣಾಮಯಿಗಳು ತಾಯಿ ಮತ್ತು ಮಗುವಿನ ಜಂಟಿ ಹೆಸರಿನಲ್ಲಿರುವ ಕನರ್ಾಟಕ ಬ್ಯಾಂಕ ಖಾತೆ ನಂ.2732500100064501 ಗೆ ಹಣ ಸಂದಾಯ ಮಾಡಬಹುದು. ಇಲ್ಲವೇ ಅವರ ಜೊತೆಗೆ ಮಾತನಾಡಬಯಸುವವರು ಮೋಬೈಲ ನಂ 9449131699 ಸಂಪಕರ್ಿಸಬಹುದಾಗಿದೆ.