ಮಹಿಳೆಯರು ಸ್ವಉದ್ಯೋಗ ಮಾಡುವ ಮೂಲಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಿ : ಎಂ.ಎ.ಹಾಲಪ್ಪ
ಕಂಪ್ಲಿ 13: ಮಹಿಳೆಯರು ಸ್ವಉದ್ಯೋಗ ಪಡಿಯುವ ಮೂಲಕ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲವಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಾಲ್ಲೂಕು ಯೋಜನಾಧಿಕಾರಿ ಎಂ.ಎ.ಹಾಲಪ್ಪ ಹೇಳಿದರು. ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ 3ನೇ ದಿನದ ಶಿಬಿರದಲ್ಲಿ ಮಹಿಳಾ ಸಬಲೀಕರಣ ಉಪನ್ಯಾಸ ನೀಡಿ ಮಾತನಾಡಿ ಉನ್ನತ ಶಿಕ್ಷಣದ ಜೊತೆಗೆ ಸರ್ಕಾರಿ ಹುದ್ದೆಯನ್ನು ಪಡೆಯಲು ಮುಂದಾಗಬೇಕು. ತರಬೇತಿ ಮೂಲಕ ಅರ್ಥಿಕವಾಗಿ ಸಬಲರಾಗಬಹುದು. ಭವಿಷ್ಯದಲ್ಲಿ ಸ್ವಾವಲಂಬಿ ಬದುಕಿಗೆ ಶಿಕ್ಷಣವು ಸಹಾಯಕವಾಗಲಿದೆ. ಮತ್ತು ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಶಿಕ್ಷಣ ಅವಶ್ಯಕ. ಮಹಿಳಾ ಸಬಲೀಕರಕ್ಕಾಗಿ ಸ್ರ್ತೀ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ಧರದಲ್ಲಿ ಸಾಲ ನೀಡಲಾಗುವುದು ಇದರ ಸದಪಯೋಗಪಡೆದುಕೊಳ್ಳಿ ಎಂದರು. ಕಂಪ್ಲಿಯ ಕೋಟೆಯಲ್ಲಿ ಮತ್ತು ಸೋಮಪ್ಪ ಕರೆಯ ಮೇಲೆ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಸಂಜೀವ ಕುಮಾರ ವಿವಿಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಜಿ.ನಾಯಕ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಾಲಪ್ಪ, ಬಡಿಗೇರ್ ಜಿಲಾನಸಾಬ್, ಪ್ರಾಚಾರ್ಯರಾದ ಮದ್ದಾನಪ್ಪ ಬಿಡನಾಳ ಉಪನ್ಯಾಸಕಿ ಸುನೀತಾ ಡಾ.ವಿಜಯಶಂಕರ, ಲಕ್ಷ್ಮಣನಾಯಕ ಪಿಯು ಕಾಲೇಜು ಪ್ರಾಚಾರ್ಯ ಮಹಾಭಲೇಶ್ವರ, ಕಲ್ಮಠ ಪ್ರೌಢಶಾಲೆಯ ಸಹ ಶಿಕ್ಷಕ ಲೋಕೇಶ, ಉಪನ್ಯಾಸಕರಾದ ಉಮಾ ಮಹೇಶ್ವರಿ, ಮಲ್ಲಿಕಾರ್ಜುನ, ಮೇಘರಾಜ, ತಿರುಪತಿ, ಗೋಪಾಲ, ರಾಮಪ್ಪ, ಜಡೆಪ್ಪ, ಶಿಲ್ಪಾ, ಸುಕನ್ಯ, ಸೇರಿದಂತೆ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಏ002 ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ 3ನೇ ದಿನದ ಶಿಬಿರದಲ್ಲಿ ಮಹಿಳಾ ಸಬಲೀಕರಣ ಉಪನ್ಯಾಸ ನೀಡಿದರು.