ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು : ಶಾಸಕ ಪಠಾಣ

Workers should organize and fight for their rights: MLA Pathana

ಶಿಗ್ಗಾವಿ 06: ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು. 

ಪಟ್ಟಣದ ಜೀತ ವಿಮುಕ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರುಕಡು ಬಡವ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಸಿಗುವಂತೆ ನೋಡಿಕೊಂಡು ಎಲ್ಲರ ಕಲ್ಯಾಣ ಬಯಸಬೇಕು, ಬಡ ಕಾರ್ಮಿಕರ ಹೆಸರಲ್ಲಿ ಸೌಲಭ್ಯ ಪಡೆಯುವ ಅನಕೂಲಸ್ಥರನ್ನು ಪಟ್ಟಿಯಿಂದ ಹೊರ ಹಾಕು ಕಾರ್ಯಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.   ದಲಿತ ಮುಖಂಡ ಡಿ.ಎಸ್‌. ಮಾಳಗಿ ಮಾತನಾಡಿ ದುಡಿಯುವ ವರ್ಗವಾಗಿರುವ ಕಾರ್ಮಿಕ ವರ್ಗ ತನ್ನ ಕಾಯಕದಲ್ಲಿ ಕೈಲಾಸ ಕಾಣಬೇಕು. ಕಾರ್ಮಿಕ ಇಲಾಖೆಯಲ್ಲಿ ಹಲವಾರು ಸೌಲತ್ತುಗಳಿದ್ದು ಅವುಗಳ ಸದುಪಯೋಗ ಮಾಡಿಕೊಂಡು ಜೀವನವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರು. 

ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಸುರೇಶ ಹರಿಜನ, ತಹಶೀಲ್ದಾರ್ ರವಿಕುಮಾರ ಕೊರವರ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಘಜಕೋಶ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಕರಿಯಪ್ಪ ಕಟ್ಟಿಮನಿ, ಎಸ್‌.ಎಫ್ ಮಣಕಟ್ಟಿ, ಗುಡ್ಡಪ್ಪ ಜಲ್ದಿ, ಅಶೋಕ್ ಕಾಳೆ, ರಾಜು ಕೆಂಭಾವಿ, ಬಸವರಾಜ್ ಜೇಕಿನಕಟ್ಟಿ, ಹಜರೆಸಾಬ ಬೆಳಗಲಿ, ಜಮೀರ್ ಮಣಕಟ್ಟಿ, ಕಲಂದರ್ ಬಾಯ್ಬಡಿಕಿ, ಮಾರುತಿ, ಸಾಬೀಕ್ ಅಹಮದ್ ಅಂಬೂರ್, ಗೌಸ ಅಗಸನಮಟ್ಟಿ, ಪರಶುರಾಮ್ ಈಳಿಗೆರ, ಅಬ್ದುಲ್ ಸತ್ತಾರ್ ತಿಳುವಳ್ಳಿ, ಮಕ್ಬೂಲ್ ಯಲ್ಲಾಪುರ, ರಫೀಕ ಆರಿಕೊಪ್ಪ, ಅಷ್ಪಾಕ್ ಬೇಗ, ಮಲಿಕ್ ರೆಹಾನ್ ಬಾಗಲಕೋಟ, ಮಹಮ್ಮದ ಹಾಶ್ಮಿಮತ್ತೂಭಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.