ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಮಣ್ಣು ಆರೋಗ್ಯ ಕಾರ್ಡಗಳ ವರದಿಯಾಧಾರದ ಮೇಲೆ ಬೆಳೆ ಬೆಳೆಯಲು ಸಲಹೆ

ವಿಜಯಪುರ: 05-ಕೃಷಿ ಇಲಾಖೆ ವತಿಯಿಂದ ಮಣ್ಣು ಆರೋಗ್ಯ ಕಾಡರ್ುಗಳನ್ನು ಬಳಸಿ ಅದರ ವರದಿಯ ಆದರಿಸಿ ಬೆಳೆಗಳನ್ನು ಬೆಳೆಯಬೆಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವಿಕಾಸ ಸುರಳಕರ ರೈತರಿಗೆ ಸಲಹೆ ನೀಡಿದರು.

ಇಂದು ನಗರದ ಕೃಷಿ ತಂತ್ರಜ್ಞಾನ ಸಂಸ್ಥೆ ಅವರಣದಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾಡಳಿತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಸಂಯುಕ್ತಾಶ್ರಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ಕೃಷಿಯಲ್ಲಿ  ಉನ್ನತ ಮಟ್ಟದ ತಂತ್ರಜ್ಞಾನ, ಆವಿಷ್ಕಾರಗಳನ್ನು  ಅಳವಡಿ ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆಯಬಹುದಾಗಿದೆ ಅದರೊಟ್ಟಿಗೆ ಕೃಷಿ ಇಲಾಖೆಯು ಕೂಡ ಆ ಕುರಿತು ರೈತರಲ್ಲಿ ಹೊಸ ಆವಿಷ್ಕಾರ, ಹೊಸ ಹೊಸ ತಂತ್ರಜ್ಞಾನ ಅಳವಡಿಕೊಳ್ಳಲು ಮಾಹಿತಿಗಳನ್ನು ನೀಡಿಬೇಕು ರೈತರು ಈ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಹೆಚ್ಚು ಉತ್ಪನ್ನಗಳನ್ನು ಬೆಳೆದು ಆದಾಯ ಕೂಡ ಹೆಚ್ಚಿಸಿಕೊಳ್ಳಬಹುದಾಗಿದೆ ಇದರೊಂದಿಗೆ ರೈತರಿಗೆ ಮಣ್ಣು ಆರೋಗ್ಯ ಕಾಡರ್ುಗಳನ್ನು ನೀಡಲಾಗುತ್ತಿದೆ ಕೃಷಿ ಇಲಾಖೆ ವಿತರಿಸಲ್ಪಡುವ ಕಾಡರ್ುಗಳ ಆಧಾರದ ಮೇಲೆ  ರೈತರು ಬೆಳೆಗಳನ್ನು ಬೆಳೆದು ಇದರಿಂದ ವ್ಯವಸಾಯದ ವೆಚ್ಚಗಳನ್ನು ಉಳಿಸಿಕೊಳ್ಳಬಹುದಾಗಿದೆ ಅಲ್ಲದೆ ಮಣ್ಣಿನ ಆರೋಗ್ಯ ಕೂಡ ರಕ್ಷಿಸಬಹುದಾಗಿದೆ ರೈತರು  ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಂಟಿ ಕೃಷಿ ನಿದರ್ೆಶಕ ಶಿವಕುಮಾರ ಮಾತನಾಡಿ ಅತಿ ಹೆಚ್ಚು ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುವುದರೊಂದಿಗೆ ಪೋಷಕಾಂಶಗಳ ದೊರೆಯುವಿಕೆ ಮೇಲೆಯು ಕೂಡ ಪರಿಣಾಮವಾಗುವುದರಿಂದ ಮಣ್ಣು ಆರೋಗ್ಯ ವರದಿ ಆಧರಿಸಿ ಗೊಬ್ಬರ ಬಳಕೆಯಿಂದ ಇದನ್ನು ತಡೆಗಟ್ಟಬಹುದೆಂದು ಹೇಳಿದರು. 

ಕೆ.ವಿ.ಕೆ. ವಿಜ್ಞಾನಿಗಳಾದ ಡಾ.ಎಸ್.ಬಿ.ಕಲಘಟಗಿ, ಎಸ್.ಎಂ.ವಸ್ತ್ರದ ಹಾಗೂ ವಿದ್ಯಾವತಿ ಯಡಹಳ್ಳಿ ಮಣ್ಣು ಹಾಗೂ ಗೊಬ್ಬರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಸಹಾಯಕ ಕೃಷಿ ನಿದರ್ೇಶಕ ಎಚ್.ಬಿ.ಪಡಲಸಗಿ ನಿರೂಪಿಸಿದರು. ಶ್ರಿಮತಿ ಮಂಜುಳಾ ಬಂಕಾಪುರ ಸ್ವಾಗತಿಸಿದರು. ಕುಮಾರಿ ಜಯಪ್ರದಾ ದಶವಂತ ವಂದಿಸಿದರು