ರೈತರ ಜೀವನಾಡಿ ಆಕಳುಗಳಿಗೆ ಶೃಂಗಾರದ ಮೂಲಕ ಗೌರ ಕಾರವಾರ: ಬಲಿಪಾಡ್ಯಮಿ ಆಕಳುಗಳಿಗೆ ಪೂಜೆ

ಕಾರವಾರ 09:ದೀಪಾವಳಿ ಬಳಿಕ ಬಲಿ ಪಾಡ್ಯಮಿ ನಿಮಿತ್ತ ತಾಲೂಕಿನ  ವಿವಿಧ ಭಾಗಗಳಲ್ಲಿ  ಗುರುವಾರ ಆಕಳುಗಳಿಗೆ  ವಿಶೇಷ ಪೂಜೆ ನಡೆಸಿ ಜನರು ಸಂಭ್ರಮಿಸಿದರು. 

ಗೋವುಗಳನ್ನು ನಂಬಿ ಬದುಕು ಕಟ್ಟಿಕೊಂಡಿರುವ ರೈತರು,ಗೌಳಿಗರು ಗೋವುಗಳನ್ನು ವಿಶೇಷವಾಗಿ ಶೃಂಗರಿಸಿ ಪೂಜಿಸಿದರು. ಗ್ರಾಮೀಣ ಭಾಗವಲ್ಲದೇ,ನಗರದ ಗುನಗಿವಾಡಾ, ಹಬ್ಬುವಾಡಾ, ಬಾಂಡಿಶಿಟ್ಟಾ,ಬಿಣಗಾ ಮುಂತಾದೆಡೆ ಕೂಡ ಹೈನುಗಾರಿಕೆಯಲ್ಲಿ ತೊಡಗಿರುವವರು ಗೋವುಗಳಿಗೆ ಪೂಜಿಸಿದರು. ಬಲಿಪಾಡ್ಯದ ಅಂಗವಾಗಿ ಹಸುಗಳಿಗೆ ಸಾರ್ವಜನಿಕರು ಆಕಳು ಪೂಜೆ ನಡೆಸಿ ವಿಶೇಷ ಖಾದ್ಯ,ಭೋಜನ ಸಮಪರ್ಿಸಿದರು.

ಹಸುಗಳಿಗೆ ಶೃಂಗಾರ:

ಬಲಿಪಾಡ್ಯಮಿ ನಿಮಿತ್ತ ಮುನ್ನಾ ದಿನವಾದ ಬುಧವಾರವೇ ಕೊಟ್ಟಿಗೆಯನ್ನು ಸ್ವಚ್ಚಗೊಳಿಸಿ ತಳೀರುತೋರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ಕೊಟ್ಟಿಗೆಯಲ್ಲಿ ಗೋಪಾಲಕ ಶ್ರೀ ಕೃಷ್ಣನ ಮಣ್ಣಿನ ಮೂತರ್ಿಯನ್ನು ಪೂಜಿಸುವುದು ಸಂಪ್ರದಾಯ.ಬಲಿಪಾಡ್ಯಮಿ ಅಂಗವಾಗಿ ಆಕಳುಗಳನ್ನು ತೊಳೆದು ಶುಭ್ರಗೊಳಿಸಿ ಕೋಡುಗಳಿಗೆ ಬಣ್ಣ ಬಳಿಯಲಾಗಿತ್ತು. ದನಕರು,ಎಮ್ಮೆ ಮುಂತಾದ ಪಶುಗಳನ್ನು ವಿಶೇಷವಾಗಿ ಹೂವು,ಕಂಕಣ,ರಿಬ್ಬನ್ ಕಟ್ಟಿ ಶೃಂಗರಿಸಲಾಗಿತ್ತು. ಹಸುಗಳ ಮೈ ಮೇಲೆ ಜೇಡಿ ಮಣ್ಣಿನ ವೃತ್ತಾಕಾರದ ಹಚ್ಚೆ ಹಾಕಿ ಹಸುಗಳ ಕೊರಳಿಗೆ ಕಂಕಣವನ್ನು ಸುತ್ತಲಾಗಿತ್ತು. ಕೆಂಪು,ಹಳದಿ ವಸ್ತ್ರದ ಕಂಕಣದಲ್ಲಿ ತೆಂಗಿನ ಕಾಯಿ,ಬೆಲ್ಲ,ನಗದು ಸಮೇತ ಪೊಟ್ಟಣ ಕಟ್ಟಲಾಗಿತ್ತು. ನಂತರ ನಡೆದ ಪೂಜೆಯಲ್ಲಿ ಹಣ್ಣಿನ ನೈವೇದ್ಯ, ಹಳದಿ, ಕುಂಕುಮ ಹಚ್ಚಿ ಆರತಿ ಬೆಳಗಿಸಿ ಪ್ರಸಾದ ವಿತರಿಸಲಾಯಿತು.

ಕಂಕಣ ಕೀಳುವ ಸ್ಪಧರ್ೆ..

ಆಕಳು ಗಳನ್ನು ಪೂಜಿಸಿದ ಬಳಿಕ ವಿಶೇಷವಾಗಿ ಗ್ರಾಮೀಣ ಭಾಗದ ರೈತರಿಂದ ಹಸುಗಳನ್ನು ಸಮೀಪದ ಗದ್ದೆಗಳಿಗೆ ಮೇಯಲು ಬಿಡಲಾಯಿತು.ಗದ್ದೆಯಲ್ಲಿ ಆಕಳುಗಳ ಕೊರಳಿಗೆ ಕಟ್ಟಿದ ಕಂಕಣ ಕೀಳುವ ಸ್ಪಧರ್ೆ ತಾಲೂಕಿನ ವಿವಿಧೆಡೆ ನಡೆಯಿತು. ಮೊದಲಿಗೆ ಗೋವನ್ನು ತಡೆದು ಕಂಕಣವನ್ನು ಕಿತ್ತುಕೊಳ್ಳುವವರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ.ಹೀಗಾಗಿ ಹಣಕೋಣ, ಮುಡಗೇರಿ, ಅಮದಳ್ಳಿ, ದೇವಳಮಕ್ಕಿ,ಕಡವಾಡ,ಸಿದ್ಧರ್ ಮುಂತಾದ ಗ್ರಾಮೀಣ ಭಾಗಗಳಲ್ಲಿ ಗೋವುಗಳ ಕೊರಳಲ್ಲಿರುವ ಕಂಕಣ ಕೀಳಲು ಯುವಕರು ಸ್ಪಧರ್ೆಗೆ ಇಳಿದರು. ಜನರು ಗೋವುಗಳ ಬೆನ್ನಟ್ಟಿಕೊಂಡು ಹೋಗಿ ಕಂಕಣ ಕೀಳಲು ಹರಸಾಹಸ ಪಟ್ಟು ಸಂಭ್ರಮಿಸಿದ್ದು,ವಿಶೇಷವಾಗಿತ್ತು.