ಯೋಗ ದೇಹಕ್ಕೆ ಹೊಸ ಉಲ್ಲಾಸ ನೀಡುತ್ತದೆ: ಬಿರಾದಾರ

ಲೋಕದರ್ಶನವರದಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಕ್ರೀಡೆ- ಯೋಗವು ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎಂದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎ.ಓ.ಬಿರಾದಾರ ಹೇಳಿದರು.

 ನಗರದ ವಿಜಯ ಮಹಾಂತೇಶ ಮಾದರಿಯ ಪ್ರೌಢ  ಶಾಲೆಯಲ್ಲಿ  ಮಂಗಳವಾರ  ಆಯೋಜಿಸಿದ್ದ  ಸಕರ್ಾರದ ಆದೇಶದಂತೆ  ಡಿ.16 ರಿಂದ 21 ವರೆಗೆ ಆರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಫಿಟ್ಇಂಡಿಯಾ ( ಸದೃಢ ಭಾರತ) ಶಾಲೆ ಸಪ್ತಾಹ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವದರೊಂದಿಗೆ ಎಲ್ಲಾ ವಿದ್ಯಾಥರ್ಿಗಳು ದೈಹಿಕ ಮಾನಸಿಕವಾಗಿ ಸದೃಢಗೊಳಿಸುವುದಾಗಿದೆ ಈ ಮಹತ್ವಾಕಾಂಕ್ಷೆಯ ಫಿಟ್ಇಂಡಿಯಾ ಅಭಿಯಾನವನ್ನು ನಾವೆಲ್ಲರು ಸೇರಿ ಯಶಸ್ವಿಗೊಳಿಸಬೇಕೆಂದರು.ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ವಿ.ಜಿ ಗೌಡರ  ಮಾತನಾಡಿ ವಿದ್ಯಾಥರ್ಿಗಳು ಉತ್ತಮವಾದ ಅಭ್ಯಾಸದೊಂದಿಗೆ ಕ್ರೀಡೆ-ಯೋಗದಲ್ಲಿ ಭಾಗವಹಿಸುವದರೊಂದಿಗೆ ಒಳ್ಳೆಯ ಆರೋಗ್ಯ ನಮ್ಮನ್ನು ಸದೃಢಗೊಳಿಸುತ್ತದೆೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಸವರಾಜ ಕಮ್ಮಾರ, ಮಹಾಂತೇಶ ತೋಪಲಕಟ್ಟಿ,  ದೈಹಿಕ ಶಿಕ್ಷಕ ಮಹಾಂತೇಶ ಸಾಲಿಮಠ, ಶಿಕ್ಷಕರಾದ ಪಿ.ಎಂ.ಅಕ್ಕಿ, ಎಂ.ಐ.ಬಡ್ಡಿ, ಮಹಾಂತೇಶ ಮಾವಿನಕಾಯಿ  ಇತರರು ಉಪಸ್ಥಿತರಿದ್ದರು.