ಲೋಕದರ್ಶನ ವರದಿ
ಬೆಳಗಾವಿ,22: ಮಕ್ಕಳು ದೊಡ್ಡವರಾದಾಗ ಮಾತ್ರ ತಂದೆ ತಾಯಿಗಳು ಮಕ್ಕಳ ಮೂಲಕ ಗುರುತಿಸಲ್ಪಡುತ್ತಾರೆ. ಆದರೆ, ಇಂದು ಚಿಕ್ಕವಯಸ್ಸಿನ ವಿಶ್ವಪ್ರಸಾದ ಬಾಲಕನನ್ನು ಬೆಳಗಾವಿಯ ಜನತೆ ಗುರುತಿಸಲ್ಪಡುತ್ತಿದ್ದೇವೆ ಅವನ್ನು ಪಡೆದ ನಾವೇ ಭಾಗ್ಯವಂತರೆಂದು ಡಾ. ರಾಜೇಂದ್ರ ಮಠದ ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಹಿಂದವಾಡಿಯಲ್ಲಿ ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಸಂಗೀತ ಸುಧೆ ವಾಟ್ಸಪ್ ಗ್ರುಪ್ ವತಿಯಿಂದ ಆಯೋಜಿಸಲಾಗಿದ್ದ ಝೀತಮಿಲ್ ವಾಹಿನಿಯ ಸರೆಗಮಪ ಲಿಟಲ್ಚಾಂಪ್ಸ್ಸಂಗೀತ ಸ್ಪಧರ್ೆಯ ವಿಜೇತ ನಿಮಿತ್ತವಾಗಿ ವಿಶ್ವ ಪ್ರಸಾದ ಮತ್ತು ಶಿವಪ್ರಸಾದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.
ಆತನ, ಇಚ್ಛೆಯಂತೆ ಈ ಅರ್ಷ ವಿದ್ಯಾ ಆಶ್ರಮದ ಅನಾಥ ಮಕ್ಕಳ ಜೊತೆಗೆ ಆತನಜನ್ಮದಿನಾರಣೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು. ಇಂತಹ ಬಾಲಕರು ಮತ್ತೊಬ್ಬರಿಗೆ ಪ್ರೇರಣೆಯಾಗಲಿ, ವಿಶ್ವವೇ ಗುರುತಿಸುವ ಕೆಲಸ ನಿಮ್ಮಂದಾಗಬೇಕು.
ಈ ಸಂದರ್ಭದಲ್ಲಿ ಉಮಾ ಸಂಗೀತ ಪ್ರತಿಷ್ಠಾನ ಹಾಗು ಸಂಗೀತ ಸುಧೆ ವಾಟ್ಸಪ್ಗ್ರುಪ್ನ ವತಿಯಿಂದ ವಿಶ್ವ ಪ್ರಸಾದ ಮತ್ತು ಶಿವಪ್ರಸಾದ ಸನ್ಮಾನಿಸಲಾಯಿತು.
ಸಂಗೂತಾಯಿಕಟ್ಟಿಮನಿ ಮಾತನಾಡಿ, ವಿಶ್ವ ಪ್ರಸಾದ ಬಾಲ್ಯದ ದಿನಗಳನ್ನು ನೆನದು, ಸಂಗೀತದ ಮೂಲಕವೂ ಸಾಧನೆ ಮಾಡಬಹುದೆಂದು ತನ್ನ ಚಿಕ್ಕ ವಯಸಿನಲ್ಲಿ ತೋರಿಸಿದರು.
ಸಂಗೀತ ಸುಧೆ ವಾಟ್ಸಪ್ಗ್ರುಪ್ನ ಸಂಸ್ಥಾಪಕ ಅರುಣ ಶಿರಗಾಪುರ ಸ್ವಾಗತಿಸಿದರು. ಗೀತಾ ಎಮ್ಮಿ ಅತಿಥಿ ಪರಿಚಯ ಮಾಡಿದರು. ಮಂಗಲ ಮಠದ ವಂದನಾರ್ಪಣೆ ಮಾಡಿದರು. ಹಾಗು ರತ್ನಶ್ರೀ ಗುಡೇರ ನಿರೂಪಿಸಿದರು. ಎಲ್ಲ ಗಾನಗಿ ಪರಿವಾರದವರು, ಸಂಗೀತ ಸುಧೆ ವಾಟ್ಸಪ್ಗ್ರುಪ್ನ ಸದಸ್ಯರು, ಉಮಾ ಸಂಗೀತ ಪ್ರತಿಷ್ಠಾನದ ವಿದ್ಯಾಥರ್ಿಗಳು, ಡಾ. ಬಿದರಿ, ಯಾದವೇಂದ್ರ ಪೂಜಾರಿ, ಮುಂತಾದಗಣ್ಯರು ವಿಶ್ವಪ್ರಸಾದನಿಗೆ ಶುಭಕೋರಿದರು