ಬಳ್ಳಾರಿ: ರಾಷ್ಟ್ರೀಯ ಹಾಲು ದಿನ ಆಚರಣೆ

ಲೋಕದರ್ಶನ ವರದಿ

ಬಳ್ಳಾರಿ 26: ಕ್ಷೀರ ಕ್ರಾಂತಿಯ ಪಿತಾಮಹರಾದ ಪದ್ಮಭೂಷಣ ಡಾ.ವರ್ಗಿಸ್ ಕುರಿಯನ್ ಅವರ ಜನ್ಮ ದಿನಾಚರಣೆ ಅಂಗವಾಗಿ  ನಗರದ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿ ಮಂಗಳವಾರ ಅಂಗವಾಗಿ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಹೆಚ್.ಮರುಳಸಿದ್ದಪ್ಪ ಅವರು ವಿವರವಾಗಿ ತಿಳಿಸಿದರು. 

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಉಸ್ತುವಾರಿ ವ್ಯವಸ್ಥಾಪಕ ನಿದರ್ೇಶಕ ಡಾ.ಸುನೀಲ್ ಸುಹೇಲ ಅವರು ರಾಷ್ಟ್ರೀಯ ಹಾಲು ದಿನಾಚರಣೆಯ ಕಾರ್ಯಕ್ರಮದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ಸಹಾಯಕ ವ್ಯವಸ್ಥಾಪಕ ಎಸ್. ವೆಂಕಟೇಶ್ ಗೌಡ ಅವರು ಸ್ವಾಗತಿಸಿ ವಂದಿಸಿದರು. 

ಈ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಜಿ. ವೀರಶೇಖರ ರೆಡ್ಡಿ, ಮಾರುಕಟ್ಟೆ ವ್ಯವಸ್ಥಾಪಕರಾದ ಜಿ.ಬಿ. ಉದಯಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ.ಸಿ.ಪಿ.ಓ. ಚಾಂದ್ಬಾಷ, ಅಧೀಕ್ಷಕರಾದ ಕೊಟ್ರಪ್ಪ, ನಿರ್ಮಲಾ, ಐಸ್ ಕ್ರೀಂ ಘಟಕದ ಮಾರುಕಟ್ಟೆ ಸಮಾಲೋಚಕ ಬಿ.ವೆಂಕಟೇಶ್ ರೆಡ್ಡಿ, ಮಾರುಕಟ್ಟೆ ಅಧಿಕಾರಿ ಕೆ.ಆರ್.ಇಂದುಕಲಾ, ಸಿ.ಎನ್.ಮಂಜುನಾಥ,   ವೀರೇಶ್ (ಹಳೇಕೊಟೆ) ಹಾಗೂ ಇತರೆ ಅಧಿಕಾರಿ ಹಾಗೂ ನೌಕರರು ಸೇರಿದಂತೆ ಮಕ್ಕಳು ಇದ್ದರು.