ಗದಗ 01: ಗದಗ ಜಿಲ್ಲಾಡಳಿತ ಭವನದಲ್ಲಿಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಮತದಾನ ಜಾಗೃತಿಗಾಗಿ ಬೈಕ್ ಜಾಥಾ ನಡೆಯಿತು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಜಿ.ಪಂ ಮುಖ್ಯಕಾರ್ಯಾನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ, ಸ್ವೀಪ್ ಸಮಿತಿ ಸಸದಸ್ಯ ಕಾರ್ಯದರ್ಶಿ ಟಿ. ದಿನೇಶ. ಗದಗ ತಹಶೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ . ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ. ಎಸ್. ಎನ್. ಬಳ್ಳಾರಿ. ಪದಾಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳ ಸಿಬ್ಬಂದಿಗಳು ಭಾಗವಹಿಸಿದ್ದರು. ಬೈಕ್ ರ್ಯಾಲಿಯು ಜಿಲ್ಲಾಡಳಿತ ಭವನದಿಂದ ಪ್ರಾರಭವಾಗಿ ಮುಳಗುಂದ ನಾಕಾ, ಭೂಮರಡ್ಡಿ ಸರ್ಕಲ್, ಟಾಂಗಾಕೂಟ, ಗಾಂಧಿ ಸರ್ಕಲ್ಗಳ ಮೂಲಕ ಬೆಟಗೇರಿ ಬಸ್ ನಿಲ್ದಾಣಕ್ಕೆ ಮುಕ್ತಾಯಗೊಂಡಿತು.