ಹೊಸಪೇಟೆ: 100 ಹಾಸಿಗೆ ಆಸ್ಪತ್ರೆಗೆ ಶಾಸಕ ಆನಂದ್ ಸಿಂಗ್ ಭೇಟಿ

ಹೊಸಪೇಟೆ 21: ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿ ತಪಾಸಣೆ ಹಾಗೂ 100 ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಆನಂದ್ ಸಿಂಗ್

ಇಂದು ವಿಜಯನಗರ ವಿಧಾನಸಭಾ ಕ್ಷೇತ್ರ ಹೊಸಪೇಟೆಯ ಶಾಸಕ ಆನಂದ್ ಸಿಂಗ್ರವರು 100 ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳ ಮಾಹಿತಿ ಪಡೆದರು. 

ವೈದ್ಯರ ಜೊತೆ ಕೆಲಕಾಲ ಸಮಾಲೋಚನೆ ನಡೆಸಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೌಲಭ್ಯಗಳು ಹಾಗೂ ಅಗತ್ಯವಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕರಾದ ಡಾ. ಸಲೀಂ, ಸೇರಿದಂತೆ ಇತರೆ ವೈದ್ಯರು, ಸಿಬ್ಬಂದಿ, ಧಮರ್ೇಂದ್ರ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

ಸಿಟಿ ರೌಂಡ್ಸ್ ಮಾಡಿದ ಶಾಸಕರು ವಿಜಯನಗರ ಕಾಲುವೆಯ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ತಪಾಸಣೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ಇಂಜಿನೀಯರ್ಸ್ ಹಾಗೂ ಗುತ್ತಗೆದಾರರಿಗೆ ನೀಡಿದರು.