ಲೋಕದರ್ಶನ ವರದಿ
ಹೂವಿನಹಡಗಲಿ 20: ಜಾನಪದ ಸಾಹಿತ್ಯದಲ್ಲಿ ಆಚಾರ-ವಿಚಾರಗಳು, ಉಡುಗೆ-ತೊಡಗೆಗಳು ಹಾಗೂ ಸಂಬಂಧಗಳು ಸಾರಿ ಹೇಳುತ್ತವೆ ಇತಂಹ ಜಾನಪದ ಶ್ರೀಮಂತ ಸಾಹಿತ್ಯದಲ್ಲಿ ನೈತಿಕ ಮೌಲ್ಯ ಅಡಗಿದೆ ಎಂದು ತಾ.ಪಂ.ಸದಸ್ಯೆ ಹನುಮಂತಮ್ಮ ಹೇಳಿದರು.
ತಾಲೂಕಿನ ಹೊಳಗುಂದಿ ಎಎಂಪಿಎಸ್ ಪೌಢಶಾಲೆಯ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಸಿದ್ದೇಶ್ವರ ತರುಣ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಾಯೋಜನೆ ಅಡಿ ಸುಗಮಸಿರಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜಾನಪದ ಕಲೆಗಳಾದ ಹಂತಿಪದಗಳು, ಜೋಗುಳಪದ, ಸೋಬಾನೆಪದ, ಕೋಲಾಟ, ಸುಗ್ಗಿಹಾಡುಗಳು ಮುಂತಾದ ಕಲಾ ಪ್ರಕರಗಳು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದ ಅವರು ಹಳ್ಳಿಯ ಕಲಾವಿದರನ್ನು ಸಕರ್ಾರ, ಸಂಘ-ಸಂಸ್ಥೆಗಳು ಪ್ರೋತ್ಸಾಯಿಸಬೇಕು ಎಂದರು.
ಗ್ರಾ.ಪಂ.ಅಧ್ಯಕ್ಷೆ ದುಗ್ಗವ್ವ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕ ಟಿ.ವೆಂಕಟೇಶ, ಕಲಾಪೋಷಕ ಮುದಿಮಲ್ಲಪ್ಪ, ನಾಗವೇಣಿ ಇದ್ದರು.ನಂತರ ಸುಗಮ ಸಂಗೀತ ಕಾರ್ಯಕ್ರಮವನ್ನು ಕಲಾವಿದಕೆ.ಪರಶುರಾಮ ತಂಡ ಅಂಗೂರು ನಡೆಸಿಕೊಟ್ಟು ಗ್ರಾಮೀಣ ಕಲೆಯನ್ನು ಪ್ರದರ್ಶಿಸಿದರು. ಆರಂಭದಲ್ಲಿ ಕು.ನಂದಿನಿ, ಮಂಗಳಗೌರಿ ಪ್ರಾಥರ್ಿಸಿದರು. ಶಿಕ್ಷಕ ವಿ.ಭೀಮನಾಯ್ಕ ನಿರೂಪಿಸಿದರು.