ಲೋಕದರ್ಶನವರದಿ
ಧಾರವಾಡ 04: ಇಲ್ಲಿನ ಪರಿಸರ ಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡ ಪ್ರಾದೇಶಿಕ ಕಛೇರಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಹಾಗೂ ಪಾಟೀಲ ಗುರುಕುಲ ಕರಿಯರ ಅಕಾಡಮಿ, ಇವರುಗಳ ಸಂಯುಕ್ತಾಶ್ರಯದಲ್ಲಿ "ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಯಿತು.
ಕನರ್ಾಟಕ ವಿಜ್ಞಾನ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಜಗದೀಶ ಗುಡಗೂರ ರವರು ಕಾರ್ಯಕ್ರಮವನ್ನು ಸಸಿಗೆ ನೀರವೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅತೀ ಮುಖ್ಯ ಮುಂಬರುವ ದಿನಗಳಲ್ಲಿ ಜಲಕ್ಷಾಮದಿಂದ ಜಲಯುದ್ಧ ಸಂಭವಿಸಬಹುದೆಂದು ಎಚ್ಚರಿಕೆ ನೀಡಿ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಿದರು. ಶ್ರೀಮಂತರ ಮನೆಗಳಲ್ಲಿ ಟಬ್-ಬಾತನಿಂದ 20 ಲೀಟರ ನೀರಿನ ಬದಲು 100 ಲೀಟರ ನಷ್ಠು ನೀರು ಹಾಳಾಗುತ್ತಿದೆ ಇದನ್ನು ತಡೆಗಟ್ಟುವುದು ಅತೀ ಅವಶ್ಯವೆಂದರು. ಭೂಮಂಡಲದಲ್ಲಿರುವ ಎಲ್ಲ ಜೀವರಾಶಿಗಳ ರಕ್ಷಣೆ ವಿಶ್ವ ಭೂಮಿ ದಿನಾಚರಣೆ ಸವಾಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷರಾದ ಶಂಕರ ಕುಂಬಿ ರವರು ಮಾತನಾಡಿ ಧಾರವಾಡದಲ್ಲಿದ್ದು ಅನೇಕ ಕೆರೆಗಳು ಇಂದು ನೋಡಲು ಸಿಗುವುದಿಲ್ಲ ಜಲಕ್ಷಾಮವನ್ನು ಓತ್ತಿ ಹೇಳಿ, ಭೂಮಿಯ ಒಳಗೆ 1000 ಅಡಿ ವರೆಗೆ ಕೊರೆದರೂ ನೀರು ದೊರಕುವುದು ಕಷ್ಟವಾಗಿದೆ ಎಂದರು.
ನೀರಿನ ಮಿತವ್ಯಯ ಬಳಕೆ, ಪ್ಲಾಸ್ಟಿಕ್ ಬಳಕೆ ವಿರೋಧ, ಹಬ್ಬಗಳಲ್ಲಿ ಪಟಾಕಿ ಹಾರಿಸುವುದು ತಡೆಯಬೇಕೆಂದರು. ತಮ್ಮ ತಮ್ಮ ಹುಟ್ಟು ಹಬ್ಬದಂದು ಕೇಕ ಕತ್ತರಿಸುವ ಬದಲು ಎಲ್ಲರೂ ಒಂದು ಗಿಡವನ್ನು ನೆಡಲು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರುಕುಲ ಕರಿಯರ ಅಕಾಡಮಿ ನಿದರ್ೇಶಕರಾದ ಎನ್.ಎಂ. ಪಾಟೀಲ ರವರು ಮಾತನಾಡಿ ಚಿಕ್ಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿದಾಗ ದೊಡ್ಡವರಾದ ಮೇಲೆ ಅವರ ಜವಾಬ್ದಾರಿ ಅರಿತು ಪರಿಸರ ಸಂರಕ್ಷಣೆ ಮಾಡುವರು ಎಂದರು
ಸಹಾಯಕ ಪರಿಸರ ಅಧಿಕಾರಿಗಳಾದ ಸೋಮಶೇಖರ ಹಿರೇಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿರುವ ವಿವಿಧ ದಿನಾಚರಣೆಗಳನ್ನು ವಿವರಿಸಿದರು. ಕಾರ್ಯಕ್ರಮವನ್ನು ಭೂ ನಮನದೊಂದಿಗೆ ಪ್ರಾರಂಭಗೊಂಡು ಕಾರ್ಯದಶರ್ಿಗಳಾದ ಡಾ. ವಿಲಾಸ ಕುಲಕಣರ್ಿ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು, ಗುರುಕುಲ ವಿದ್ಯಾಥರ್ಿ ವಿದ್ಯಾಥರ್ಿನಿಯರಿಗೆ "ಪರಿಸರ ಪ್ರಜ್ಞೆ" ಪುಸ್ತಕಗಳನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಪರಿಸರ ಸಮಿತಿ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ಇತ್ತೀಚಿಗೆ ಧಾರವಾಡದಲ್ಲಿ ಜರುಗಿದ ಕನರ್ಾಟಕ ಸಾಹಿತ್ಯ ಸಮ್ಮೇಳದಲ್ಲಿ ಯಾವುದೇ ಪ್ಲಾಸ್ಟಿಕ್ ಬಳಕೆ ಇಲ್ಲದೇ ಸಮ್ಮೇಳನವನ್ನು ಯಶಸ್ವಿಗೊಳಿಸಿದ ಕೀತರ್ಿ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ರವರಿಗೆ ಸಲ್ಲುತ್ತದೆ ಎಂದರು.