ಲೋಕದರ್ಶನವರದಿ
ಧಾರವಾಡ03: ತಾಂತ್ರ್ರಿಕ ಶಿಕ್ಷಣ ಪಡೆಯುವ ವಿದ್ಯಾಥರ್ಿಗಳಿಗೆ ಪಠ್ಯದ ಜೊತೆಗೆ ತರಬೇತಿಯ ಅವಶ್ಯಕತೆ ಇದೆ. ಕಲಿಕೆಯ ಜೊತೆಗೆ ನೂತನ ತಾಂತ್ರಿಕತೆ ಅರಿವು ವಿದ್ಯಾಥರ್ಿಗಳಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನ ಇಲೆಕ್ಟ್ರೀಕ್ಲ ವಿದ್ಯಾಥರ್ಿಗಳಿಗಾಗಿ ಆಯೋಜಿಸಿದ್ದ ವಿದ್ಯುತ್ ಗೃಹ ಉಪಯೋಗಿ ಉಪಕರಣಗಳ ದುರಸ್ತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿಯಾದ ಶ್ರೀಧರ ಮನ್ವಾಚಾರ್ಯರವರು ಹೇಳಿದರು
ಎರಡು ವರ್ಷದ ಈ ಕೋಸರ್ಿನ ವಿದ್ಯಾಥರ್ಿಗಳು ಈ ರೀತಿ ತರಬೇತಿ ಪಡೆಯುವದರಿಮದ ಕೋಸರ್ಿನ ನಂತರ ತಾವೇ ಸ್ವ-ಉದ್ಯೋಗ ಪ್ರಾರಂಭಿಸಬಹುದು ಎಂದು ಹೇಳಿದರು.
ಈ ತರಬೇತಿ ಶಿಬಿರದಲ್ಲಿ ವಿದ್ಯಾಥರ್ಿಗಳು ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಜನರಿಂದ ಉಪಕರಣಗಳನ್ನು ತಂದು ನುರಿತ ಮೆಕ್ಯಾನಿಕ್ ಸಹಾಯದಿಂದ ಉಚಿತವಾಗಿ ದುರಸ್ತಿ ಮಾಡಿಕೊಡುತ್ತಿರುವುದು ವಿಶೇಷ.
ಈ ರೀತಿ ಶಿಬಿರಗಳು ವಿದ್ಯಾಥರ್ಿಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬುತ್ತವೆ. ಸ್ವ-ಉದ್ಯೋಗಕ್ಕೆ ಪ್ರೇರೆಪಣೆಯಾಗುತ್ತವೆ. ಈ ರೀತಿ ತರಬೇತಿ ಪಡೆದ ಈ ಸಂಸ್ಥೆಯ ವಿದ್ಯಾಥರ್ಿಗಳು ಈಗಾಗಲೇ ಸ್ವ ಉದ್ಯೋಗ ಪ್ರಾರಂಭಿಸಿದ್ದಾರೆ. ಈ ರೀತಿ ಉಚಿತ ತರಬೇತಿಯನ್ನು ಆಯೋಜಿಸಿರುವ ಜನತಾ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಗೆ ಕೃತಜ್ಞತೆಗಳು ಎಂದು ಅತಿಥಿಗಳಾಗಿ ಆಗಮಿಸಿದ್ದ ಮಹಾವೀರ ಉಪಾದ್ಯೆ ಹೇಳಿದರು.
ಮಹೇಶ ಕುಂದರಪಿಮಠ, ಬಿ.ಎ.ತಡಕೋಡ, ಶೋಭಾ ಕಮ್ಮಾರ, ವಿದ್ಯಾ ಹಿರೇಮಠ, ಅಶೋಕ ಜಿಗಳೂರ, ಸಿದ್ದಲಿಂಗಯ್ಯಾ ಹಿರೇಮಠ, ವಿಶಾಲ ಭಜಂತ್ರಿ ಉಪಸ್ಥಿತರಿದ್ದರು ಮಂಜುನಾಥ ಚಟ್ಟೇರ ನಿರೂಪಿಸಿ ವಂದಿಸಿದರು.