ದೇವರ ದಾಸಿಮಯ್ಯ ಜಯಂತಿ ಆಚರಣೆ

ಧಾರವಾಡ 10: ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ 1040 ನೇ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು.

      ಜಿಲ್ಲಾಧಿಕಾರಿ ದೀಪಾ ಚೋಳನ್ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ, ರಂಗಾಯಣ ಆಡಳಿತಾಧಿಕಾರಿ ಕೆ.ಎಚ್ ಚನ್ನೂರ ಕವಲಗೇರಿ ಗ್ರಾಮದ ಶಿವಾನಂದ ಮಠದ ಶಿವಾನಂದ ಸರಸ್ವತಿ ಸ್ವಾಮಿಜಿ, ರವಿ ಮಾರುತಿ ಲೋಲಿ, ಷಡಕ್ಷರಿ ಪಕ್ಕೀರಪ್ಪ,  ದೇವೆಂದ್ರ ಎಮ್ ಹೊಸಮನಿ, ರವೀಂದ್ರ ಲೋಲೆನವರ, ಈಶ್ವರ ಆರ್ ಕಾಮಕರ, ತಾರಿಬಾ ಬೇಲ್ಕರ್, ಆರ್.ಡಿ. ಗದ್ದೆಣ್ಣನವರ, ಅನಸುಯಾ ನವಲಗುಂದ, ಸಮಾಜದ ಮುಖಂಡರು  ಸೇರಿದಂತೆ ವಿವಿಧ ಅಧಿಕಾರಿಗಳು,  ಪಾಲ್ಗೊಂಡಿದ್ದರು.