ಲೋಕದರ್ಶನವರದಿ
ಶಿಗ್ಗಾವಿ16: ಸೃಜನ ಶಕ್ತಿಯಿಂದ ಸೃಷ್ಠಿಯಾಗುವ ಸಾಹಿತ್ಯ- ಕಲೆ ಆಯಾ ದೇಶದ ಸಂಪತ್ತಾಗಿದೆ. ಈ ಹಿನ್ನಲೆಯಲ್ಲಿ ಅಂತಹ ಸೃಜನಶೀಲ ಕಾರ್ಯಗಳಿಗೆ ಸಾಕಷ್ಟು ಮಹತ್ವ ಇದೆ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ್ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ದೃಶ್ಯಕಲಾ ವಿಭಾಗವು ಲಿಯೋನಾಡರ್ೋ-ಡ-ವಿಂಚಿ ಜನ್ಮದಿನದ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ 'ವಿಶ್ವ ಕಲಾ ದಿನಾಚರಣೆ' ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆ ಎಂಬುದು ಪ್ರಾಚೀನರ ಭಾಷಾ ಸಾಂಸ್ಕೃತಿಕ ಮಾಧ್ಯಮವಾಗಿತ್ತು ಎಂಬುದನ್ನು ಭಾಷಾ ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಕಲಾವಿದರಾದಕಿಶೋರಕುಮಾರ ಅವರು ಮಾತನಾಡಿ, ಕಲೆ ಎನ್ನುವುದು ಶ್ರೇಷ್ಠ ಮಾಧ್ಯಮವಾಗಿದ್ದು, ಇದರ ಮುಖಾಂತರ ಮನುಷ್ಯ ತನ್ನ ಎಲ್ಲ ಭಾವನೆಗಳನ್ನು ಇಡೀ ಜಗತ್ತಿಗೆ ಸಾರಬಹುದು ಎಂದು ಕಲೆಯ ಮಹತ್ವವನ್ನು ಕುರಿತು ವಿವರಿಸಿದರು.
ವಿ.ವಿ ಮೌಲ್ಯಮಾಪನ ಕುಲಸಚಿವರಾದ ಡಾ.ಎಂ.ಎನ್.ವೆಂಕಟೇಶ ಅವರು ಮಾತನಾಡಿ, ಎ.15 ನ್ನು ರಂದು ಜಗತ್ತಿನ ಶ್ರೇಷ್ಠ ಕಲಾವಿದರಾಗಿರುವ ಲಿಯೋನಾಡರ್ೋ-ಡ ವಿಂಚಿ ಅವರ ಜನ್ಮದಿನವನ್ನು 'ವಿಶ್ವ ಕಲಾ ದಿನಾಚರಣೆ'ಯನ್ನಾಗಿ ಪ್ರತಿವರ್ಷ ಆಚರಿಸುತ್ತಿದ್ದು, ಇವರ ಕಲಾಕೃತಿಯನ್ನೇ ಕೇಂದ್ರವಾಗಿಟ್ಟುಕೊಂಡು ಚಲನಚಿತ್ರ, ನಾಟಕ, ಸಾಹಿತ್ಯ ವ್ಯಕ್ತವಾಗಿವೆ. ಅವರ ಕಲೆಯ ಕುರಿತಾದ ಅಧ್ಯಯನಕ್ಕೂ ಸಾಕಷ್ಟು ಆಕರ ಸಾಮಾಗ್ರಿಗಳು ದೊರೆಯುತ್ತವೆ ಎಂದು ಹೇಳಿದರು.
ವಿವಿಯ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ದೃಶ್ಯ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶಂಕರ ಕುಂದಗೋಳ ಅವರು ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ರವಿ ನಾಯಕ ಹಾಗೂ ಎಲ್ಲ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು, ವಿದ್ಯಾಥರ್ಿಗಳು, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.