ಕಂಪ್ಲಿ: ವಿದುಷಿ ರೋಹಿಣಿಗೆ ಡಾಕ್ಟರೇಟ್ ಪದವಿ

ಕಂಪ್ಲಿ 19: ಇಲ್ಲಿನ ವಿದುಷಿ ರೋಹಿಣಿ ಗಂಗಾಧರ ಇವರು ಕನರ್ಾಟಕ ವಿಶ್ವವಿದ್ಯಾಲಯದ ಕಲಾ ನಿಖಾಯದಿಂದ ಡಾಕ್ಟರೇಟ್ ಪದವಿಗಳಿಸಿದ್ದಾರೆ. ಕರ್ನಾಟಕ ವಿವಿಯ ಸಂಗೀತ ಮತ್ತು ಲಲಿತಾ ಕಲಾ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಮೃತ್ಯುಂಜಯ ಎಚ್.ಅಗಡಿ ಇವರ ಮಾರ್ಗದರ್ಶನದಲ್ಲಿ 'ಸಂಗೀತ ಬೆಳವಣಿಗೆಗೆ ಮತಂಗ ಮುನಿಯ ಬೃಹದ್ದೇಶಿ ಕೊಡುಗೆ' ವಿಷಯದಲ್ಲಿನ ಸಂಶೋಧನೆಗೆ ಡಾಕ್ಟರೇಟ್ ಪದವಿ ದೊರಕಿದೆ. 

ಗೌರವ: 2020ರ ಜನವರಿ ಮಾಹೆಯ ಮೊದಲ ವಾರದಲ್ಲಿ, ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘ ಹಾಗೂ ಸಾಹಿತ್ಯ ಸಿರಿ ಪ್ರತಿಷ್ಠಾನಗಳ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ, ಡಾಕ್ಟರೇಟ್ ಪದವಿ ಪುರಸ್ಕೃತೆ ವಿದುಷಿ ರೋಹಿಣಿ ಗಂಗಾಧರ ಇವರನ್ನು ಗೌರವಿಸಲಾಗುವುದು ಎಂದು ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.