ಕೊಪ್ಪಳ 22: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರೀಲ್. 23 ರಂದು ಚುನಾವಣೆ ನಡೆಯಲಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯಥರ್ಿಗಳ ಚುನಾವಣಾ ವೆಚ್ಚದ ಪರಿಶೀಲನಾ ಸಭೆ ನಡೆಸಲಾಗಿದೆ ಎಂದು ವೆಚ್ಚ ವೀಕ್ಷಕರಾದ ಎಂ. ಜಯರಾಮ್ರವರು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಮಾರ್ಗಸೂಚಿಯನ್ವಯ ಅಭ್ಯಥರ್ಿಗಳು 70 ಲಕ್ಷದವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿರುತ್ತದೆ. ಎಲ್ಲಾ ಅಭ್ಯಥರ್ಿಗಳು ನಿಯಮಾನುಸಾರ ವೆಚ್ಚದ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಅಭ್ಯಥರ್ಿಗಳ ವೆಚ್ಚದ ನಿರ್ವಹಣೆಯ ಎ, ಬಿ, ಸಿ ವಹಿಗಳನ್ನು ಹಾಗೂ ವೆಚ್ಚವನ್ನು ಪರಿಶೀಲಿಸಲು ಏಪ್ರಿಲ್. 12, 16 ಹಾಗೂ 21 ರಂದು ವೇಳಾಪಟ್ಟಿ ನಿಗದಿಪಡಿಸಲಾಗಿತ್ತು. ಅದರಂತೆ ಏಪ್ರಿಲ್. 16 ಮತ್ತು 21 ರಂದು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಎರಡು ಮತ್ತು ಮೂರನೇ ಹಂತದ ವೆಚ್ಚ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಎಲ್ಲಾ 14 ಅಭ್ಯಥರ್ಿಗಳು ಸಭೆಯಲ್ಲಿ ಹಾಜರಾಗಿ ಅವರವರ ಖಚರ್ು-ವೆಚ್ಚಕ್ಕೆ ಸಂಬಂದಿಸಿದ ವಿವರವನ್ನು ಪರಿಶೀಲನೆಗೆ ಒಪ್ಪಿಸಿರುತ್ತಾರೆ ಎಂದು ವೀಕ್ಷಕರು ತಿಳಿಸಿದ್ದಾರೆ.