ಆಯುವರ್ೇದ ಬಳಸಿ ಆರೋಗ್ಯ ಹೆಚ್ಚಿಸಿಕೊಳ್ಳಿ: ನಾಯ್ಕ್

ಕಾರವಾರ 05: ಆಯುವರ್ೇದ ಬಳಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯ್ಕ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಸೋಮವಾರ ಧನ್ವಂತರಿ ಜಯಂತಿ ಅಂಗವಾಗಿ ಮೂರನೇ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಯಾವುದೇ ಅಡ್ಡಪರಿಣಾಮವಿಲ್ಲದ ಆಯುವರ್ೇದ ಔಷಧಗಳನ್ನು ಬಳಸಿ ತಮ್ಮ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇತ್ತೀಚಿನ ನಮ್ಮ ಜೀವನ ಶೈಲಿಯೇ ಆನಾರೋಗ್ಯಕ್ಕೆ ಪ್ರಮುಖ ಕಾರಣ ಎಂದ ಅವರು ಆಂಗ್ಲ ಶೈಲಿಯ ಔಷಧ ಪದ್ಧತಿಗಿಂತ ಆಯುವರ್ೇದ ಔಷಧ ಪದ್ಧತಿ ಉತ್ತಮ. ಔಷಧ ಬಳಸುವ ಬದಲು ಔಷಧದ ಅವರ್ಶಯಕತೆ ಬರದಂತೆ ನೋಡಿಕೊಳ್ಳುವುದು ನಮ್ಮ ಜೀವನ ಶೈಲಿ. ಅದು ನಮ್ಮ ಆಯುವರ್ೇದದಲ್ಲಿದೆ ಎಂದರು.

ಡಾ.ಜಗದೀಶ್ ಯಾಜಿ ಮಾತನಾಡಿ ನಮ್ಮ ಜೀವನ ಶೈಲಿಯೇ ನಮ್ಮ ಆರೋಗ್ಯದ ಗುಟ್ಟು. ನಮ್ಮ ಆರೋಗ್ಯ ಹೇಗಿರಬೇಕೆಂಬುದು ನಮ್ಮ ಕೈಯಲ್ಲಿಯೇ ಇದೆ. ಅದನ್ನು ಆಯುವರ್ೇದ ಔಷಧ ಪದ್ಧತಿ ಹೇಳಿಕೊಡುತ್ತದೆ. ನಮ್ಮ ಪರಿಸರದಲ್ಲಿ ಪ್ರಕೃತಿಯಲ್ಲೇ ದಿವ್ಯೌಷಧಗಳು ಲಭ್ಯವಿದೆ. ಅವುಗಳ ಬಳಕೆ ಗೊತ್ತಿರಬೇಕಷ್ಟೆ ಎಂದರು.

ಅಲ್ಲದೆ ಪ್ರಕೃತಿಯ ಯಾವುದೇ ಕ್ರಮಗಳನ್ನು ತಡೆಯುವುದೂ ಅನಾರೋಗ್ಯಕ್ಕೆ ನಾಂದಿಯಾಗಲಿದೆ. ಮನುಷ್ಯರ ಜೀವನ ಶೈಲಿಯ ಪ್ರಕೃತಿದತ್ತ ಕ್ರಿಯೆಗಳು ಸರಿಯಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ಅದನ್ನು ನಾವು ನಮ್ಮ ಜೀವನ ಕ್ರಮದಲ್ಲಿ ಸರಿಯಾಗಿಟ್ಟುಕೊಳ್ಳಬೇಕು ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ..ಆರ್.ಬಸವರಾಜಯ್ಯ ಮಾತನಾಡಿ, ನರ್ವರ ಆರೋಗ್ಯ ಸರ್ವರ ಸುಖ ಎಂಬ ಮಾತಿನಂತೆ ನಮ್ಮ ಭಾಗ್ಯಗಳೆಲ್ಲವೂ ಆರೋಗ್ಯದ ಮೇಲೆಯೇ ನಿಗದಿಯಾಗಿರುತ್ತವೆ. ಆದ್ದರಿಂದ ಆಯುವರ್ೇದ ಪದ್ಧತಿಯಲ್ಲಿ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ವಾತರ್ಾಧಿಕಾರಿ ಹಿಮಂತರಾಜು ಜಿ., ರೋಟರಿ ಅಧ್ಯಕ್ಷರುಗಳಾದ ಅನುಮೋಲ್ ರೇವಣಕರ್, ಕೃಷ್ಣಾನಂದ ತುಳವೇಕರ್, ವೈದ್ಯರಾದ ಡಾ. ವಾಲಿನಿ, ಡಾ.ಲಲಿತಾ ವಿ.ಎಚ್., ಡಾ. ಹಿರೇಮಠ್, ಡಾ.ಪ್ರಶಾಂತ್ ವಣರ್ೇಕರ್ ಉಪಸ್ಥಿತರಿದ್ದರು.

ಆಯುವರ್ೇದ ಕಿಡಮೂಲಿಕೆಗಳ ವಸ್ತುಪ್ರದರ್ಶನ, ಆರೋಗ್ಯ ತಪಾಸಣೆ ಹಾಗೂ ಆಯುವರ್ೇದ ಕುರಿತು ಉಪನ್ಯಾಸ ಮಾಲಿಕೆಗಳು ಇಡೀದಿನ ಜರುಗಿದವು.