ಗದಗ 09: ಗದಗ ಜಿಲ್ಲೆಯ ಎಲ್ಲ ಇಲಾಖೆಗಳು ಹಾಗೂ ಸರಕಾರಿ ಸಂಸ್ಥೆಗಳು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇರುವ ಸ್ವಂತ ಕಟ್ಟಡಗಳ ಪಟ್ಟಿ ಮಾಡಿ ಅವುಗಳ ವಗರ್ಿಕರಣ , ವಿಸ್ತೀರ್ಣ ಮುಂತಾದವುಗಳ ವಿವರಗಳ ಮಾಹಿತಿಯನ್ನು ಜಿಲ್ಲಾ ಪಂಚಾಯತ್ಗೆ ಸಲ್ಲಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.
ಗದಗ ಜಿ.ಪಂ. ಸಭಾಭವನದಲ್ಲಿಂದು ಕೇಂದ್ರ ಸಕರ್ಾರದ ಜಲಶಕ್ತಿ ಅಭಿಯಾನ ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡಗಳ ಪಟ್ಟಿಯನ್ನು ಗ್ರಾಮಪಂಚಾಯತಿ, ತಾಲೂಕಾವಾರು ಮಾಹಿತಿಯನ್ನು ಸಲ್ಲಿಸಬೇಕು. ಕೇಂದ್ರ ಸಕರ್ಾರವು ಗದಗ ಜಿಲ್ಲೆಯ ಗದಗ ಹಾಗೂ ರೋಣ ತಾಲೂಕುಗಳನ್ನು ಜಲಶಕ್ತಿ ಯೋಜನೆಯಡಿ ಅಭಿವೃದ್ಧಿ ಪಡಿಸಲು ಜಲಸಂರಕ್ಷಣೆ ನಿಟ್ಟಿನಲ್ಲಿ ಇರುವ ನೀರಿನ ಮೂಲಗಳ ಪುನಶ್ಚೇತನ ಹೊಸ ನೀರಿನ ಮೂಲಗಳ ಸೃಷ್ಟಿ ಮತ್ತು ನೀರಿನ ದಕ್ಷ ಬಳಕೆ ಕುರಿತಂತೆ ಕ್ರಿಯಾ ಯೋಜನೆ ರೂಪಿಸಲು ನಿದರ್ೇಶನ ನೀಡಿದೆ. ಈಗಾಗಲೇ ಕೇಂದ್ರ ಸಕರ್ಾರದಿಂದ ಗದಗ ಜಇಲ್ಲೆ ನೂಡಲ್ ಅಧಿಕಾರಿ ಆಗಿ ನೇಮಕಗೊಂಡ ಕೇಂದ್ರ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದಶರ್ಿ ಸುನೀಲ ಕುಮಾರ್ ಜಿಲ್ಲಾ ಮಟ್ಟದಲ್ಲಿ ಸಭೆ ಜರುಗಿಸಿ ರೋಣ ತಾಲೂಕಿನಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ಜಲ ಸಂವರ್ಧನೆ ಕಾಮಗಾರಿಗಳನ್ನು ವೀಕ್ಷಿಸಿ ಹಲವಾರು ನಿದರ್ೇಶನಗಳನ್ನು ನೀಡಿದ್ದಾರೆ.
ಜಲಶಕ್ತಿ ಯೋಜನೆಯಡಿ ಮುಖ್ಯವಾಗಿ ಮಳೆ ನೀರು ಸಂಗ್ರಹಣೆ ಕುರಿತಂತೆ ಗದಗ ಹಾಘೂ ರೋಣ ತಾಲೂಕಿನಲ್ಲಿ ಈಗಾಗಲೇ ಇರುವ ಸ್ವಾಭಾವಿಕ ಜಲಾಗಾರಗಳು, ಕೆರೆಗಳು, ಸಾಂಪ್ರದಾಯಿಕವಾಗಿ ಇರುವ ಕಲ್ಯಾಣಿ, ಬಾವಿಗಳು, ಎಲ್ಲ ಸಕರ್ಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಜಾರಿಗೊಳಿಸಲು, ಕೃಷಿ ಇಲಾಖೆಯಿಂದ ಈಗಾಗಲೇ ನಿಮರ್ಾಣಗೊಂಡಿರುವ ಕೃಷಿ ಹೊಂಡಗಳು, ತೋಟಗಾರಿಕೆ ಇಲಾಖೆಯಿಂದ ಆಗಬಹುದಾದ ಕೃಷಿ ಹೊಂಡಗಳು , ರೋಣ ಮತ್ತು ಗದಗ ತಾಲೂಕಿನಲ್ಲಿ ಇರುವ ನೀರಾವರಿ ಕಾಲುವೆ ಹಾಗೂ ಉಪ ಕಾಲುವೆಗಳು ಪ್ರತಿಯೊಂದು ಗ್ರಾಮದಲ್ಲಿ ಮನೆಗಳಿಂದ ಹರಿಯುವ ನೀರಿನ ಇಂಗುಗುಂಡಿಗಳು, ಸಾಮುದಾಯಿಕ ನೀರಿನ ಇಂಗುಗುಂಡಿಗಳು ಹಾಗೂ ಇಡೀ ಗ್ರಾಮದ ಕೊಳಚೆ ನೀರು ಇಂಗುಗುಂಡಿಗಳು ಕುರಿತು ಸಂಬಂಧಿಸಿದ ಇಲಾಖೆಗಳು ಸಮೀಕ್ಷೆ ನಡೆಸಿ ತಕ್ಷಣವೇ ಗ್ರಾಮವಾರು ಹಾಗೂ ಕಾಮಗಾರಿವಾರು ಮಾಹಿತಿ ನೀಡಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.
ರೋಣ ಹಾಗೂ ಗದಗ ತಾಲೂಕಿನ ಗ್ರಾಮಗಳಲ್ಲಿ ಮಳೆ ನೀರಿನ ಸಂಗ್ರಹಣೆಗೆ ಅವಕಾಶವಿರುವ ಮನೆಗಳನ್ನು ಗುರುತಿಸಿ ಗ್ರಾಮವಾರು ಮಾಹಿತಿಯನ್ನು ಒದಗಿಸಲು ಸಹ ಅವರು ತಿಳಿಸಿದರು. ಸಕರ್ಾರಿ ಕಟ್ಟಡಗಳ ಕುರಿತಂತೆ ಆರೋಗ್ಯ ಇಲಾಖೆ ಅಂಗನವಾಡಿ, ಆಯುಷ್ ಇಲಾಖೆ, ಪಶು ಪಾಲನೆ ಹಾಗೂ ವೈದ್ಯಕೀಯ ಇಲಾಖೆ, ಅರಣ್ಯ ಹಾಗೂ ಸಾಮಾಜಿಕ ಅರಣ್ಯ, ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ, ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆಗಳ ಕಟ್ಟಡಗಳು, ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಕಟ್ಟಡಗಳು, ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ಇಲಾಖೆಗಳ ಕಟ್ಟಡವಾರು ಮಳೆ ನೀರಿನ ಕೊಯ್ಲು ಕುರಿತಂತೆ ಮಾಹಿತಿಯನ್ನು ನೀಡಲು ಜಿಲ್ಲಾ ಪಂಚಾಯತ್ ಯೋಜನಾ ನಿದರ್ೇಶಕ ಟಿ. ದಿನೇಶ ತಿಳಿಸಿದರು.
ಗದಗ ಜಿಲ್ಲೆಯು ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದ್ದು ಮಳೆ ನೀರಿನ ಸಂಗ್ರಹ ಹೆಚ್ಚಿಸುವುದು ತುಂಬಾ ಅಗತ್ಯವಾಗಿದ್ದು ಕೇಂದ್ರ ಸಕರ್ಾರದ ಜಲಶಕ್ತಿ ಅಭಿಯಾನದಡಿ ಗದಗ ಹಾಗೂ ರೋಣ ತಾಲೂಕುಗಳಲ್ಲಿ ಮಳೆ ನೀರನ್ನು ಹೆಚ್ಚಿನ ರೀತಿಯಲ್ಲಿ ಸಂಗ್ರಹಿಸಲು ಎಲ್ಲ ಇಲಾಖೆಗಳು ಸಕರ್ಾರೇತರ ಸಂಸ್ಥೆಗಳು, ಸಾರ್ವಜನಿಕರು ಒಟ್ಟಾರೆಯಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆದುದರಿಂದ ಇಲಾಖೆಗಳ ಹಿರಿಯ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಈ ಎರಡೂ ತಾಲೂಕುಗಳಲ್ಲಿ ಮಳೆ ನೀರಿನ ಸಂಗ್ರಹ ಹೆಚ್ಚಿಸಲು ಸಂಪೂರ್ಣವಾಗಿ ಸಹಕರಿಸಿ ಅಗತ್ಯದ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು