ತಾಳಿಕೋಟೆ: ಜೆಡಿಎಸ್ ಅಭ್ಯರ್ಥಿಗೆ ಠೇವಣಿ ಉಳಿಯುವುದೇ ಕಷ್ಟ:ಶಾಸಕ ನಡಹಳ್ಳಿ

ಲೋಕದರ್ಶನ ವರದಿ

ತಾಳಿಕೋಟೆ 08: 5 ವರ್ಷದ ಮಗುವಿನಿಂದ 100 ವಯೋವೃದ್ಧರವರೆಗೆ  ಮತ್ತೊಮ್ಮೆ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಬೇಕೆಂದು ಜಗತ್ತಿನಲ್ಲಿ ಜಪ ಮಾಡುತ್ತಿದ್ದಾರೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಅಂಬಾಭವಾನಿ ಮಂದಿರದಲ್ಲಿ ರಾಮ ನಾಮಜಪ ಪೂಜೆಯಲ್ಲಿ ಪಾಲ್ಗೊಂಡು ನಂತರ ಲೋಕಸಭೆ ಚುನವಣೆಯ ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಪರ ಮತಯಾಚಿಸಿ ಹೋಟೇಲೊಂದರ ಮುಂದುಗಡೆ ಸಾರ್ವಜನಿಕ ಸಂಹಾದ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಕಳೆದ 5 ಬಾರಿ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಮೋದಿ ಅಲೆಯಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತ ಎಂದು ತಿಳಿದು ಅಪವಿತ್ರ ಮೈತ್ರಿಮೂಲಕ ಕಾಂಗ್ರೆಸ್ಸಿಗರು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ  ಜಿಲ್ಲೆಯಲ್ಲಿ ಠೇವಣಿ ಉಳಿಯುವದೇ ಕಷ್ಟವಾಗಿದೆ ಎಂದು ಹೇಳಿದ ಅವರು ಕಾಂಗ್ರೆಸ್ಸಿನಿಂದ ಜಿಲ್ಲೆಯಲ್ಲಿ ಇಬ್ಬರು ಸಚಿವರು ಮತ್ತು ಒಬ್ಬರು ನಿಗಮ ಮಂಡಳಿ ಅಧ್ಯಕ್ಷರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಹಾಕಲು ಧೈರ್ಯ ಮಾಡದಿರುವುದು ಸೋಲಿನ ರುಚಿಯಿಂದ ತಪ್ಪಿಸಿಕೊಳ್ಳಲು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. 

ಜೆಡಿಎಸ್ಗೆ ಕುಟುಂಬವೇ ಪಕ್ಷ ಮತ್ತು ಕುಟುಂಬವೇ ದೇಶವಾಗಿದೆ. ಆದರೆ ಬಿಜೆಪಿಯಲ್ಲಿ ದೇಶ ಮೊದಲು ನಂತರ ಪಕ್ಷ ಮತ್ತು ತದನಂತರ ವ್ಯಕ್ತಿಗೆ ಬೆಲೆ ಕೊಡುತ್ತದೆ. ಮೋದಿಯವರನ್ನು ಮತ್ತೊಮ್ಮೆ  ಪ್ರಧಾನಿ ಮಾಡುವುದರಿಂದ ದೇಶದ ಅಭಿವೃದ್ಧಿ ಮತ್ತು ದೇಶದ ಭದ್ರತೆ ಹೆಚ್ಚಾಗುತ್ತದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯಥರ್ಿಯಾಗಲಿ ಚಿಹ್ನೆಯಾಗಲಿ ಇಲ್ಲ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ದೇಶದ ಭದ್ರತೆ ಮತ್ತು ಶಾಂತಿಗಾಗಿ ಮೋದಿಯವರನ್ನು ಈ ಬಾರಿ ಬೆಂಬಲಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕ ನಡಹಳ್ಳಿ ಮನವಿ ಮಾಡಿದರು.

      ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ನಾಯಕರು. ಬೇರೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯೂ ಅಬ್ಬರ ಪ್ರಚಾರ ಮಾಡಲಿದ್ದಾರೆ ಎಂದು ಪತ್ರಕರ್ತರಿಗೆ ತಿಳಿಸಿದರು.

          ಈ ಸಮಯದಲ್ಲಿ ವಸಂತ ಜೋಶಿ, ರಾಘವೇಂದ್ರ ಚವ್ಹಾಣ, ವಾಸುದೇವ ಹೆಬಸೂರ, ಕಾಶೀನಾಥ ಮುರಾಳ, ಕಾಶಿನಾಥ ಸಜ್ಜನ, ಜಯಸಿಂಗ್ ಮೂಲಿಮನಿ, ಪ್ರಕಾಶ ಹಜೇರಿ, ಸತ್ಯನಾರಾಯಣ ತಾಳಪಲ್ಲೆ, ಮಾನಸಿಂಗ್ ಕೊಕಟನೂರ, ಮುನ್ನಾ ಠಾಕೂರ, ಮಲ್ಲು ಕಸಬೇಗೌಡರ(ಭಟ್), ಶರಣು ಗೊಟಗುಣಕಿ, ವಿಠ್ಠಲ ಮೋಹಿತೆ, ಮಲ್ಲು ಮೇಟಿ, ರಾಘು ವಿಜಾಪೂರ, ಮಂಜು ಶೆಟ್ಟಿ, ಕಾಶೀನಾಥ ಅರಳಿಚಂಡಿ, ಮತ್ತು ಸತ್ಯಸಾಯಿ ಮಹಿಳಾ ಮಂಡಳಿ ಸದಸ್ಯಿನಿಯರು ಉಪಸ್ಥಿತರಿದ್ದರು.