ಲೋಕದರ್ಶನವರದಿ
ಹುಬ್ಬಳ್ಳಿ: ಕೇಂದ್ರ ಲೋಕಸೇವಾ ಆಯೋಗವು 2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಗಳಿಸಿದ ಹುಬ್ಬಳ್ಳಿಯ ಹೆಮ್ಮೆಯ ಸುಪುತ್ರ ರಾಹುಲ್ ಶರಣಪ್ಪ ಸಂಕನೂರ ಅವರನ್ನು ಸದಾನಂದ ಡಂಗನವರ ಗೆಳೆಯರ ಬಳಗದ ವತಿಯಿಂದ ಶಾಲು, ಮಾಲೆ, ಫಲ ನೀಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ
ಮಾತನಾಡಿ ರಾಹುಲ್ ಸಾಧನೆ ಮಹಾನಗರ, ಉತ್ತರ ಕನರ್ಾಟಕ ಅಲ್ಲದೇ ಇಡೀ ಕನರ್ಾಟಕ ಹೆಮ್ಮೆಪಡುವಂತಹದು. ದೇಶಕ್ಕೆ 17ನೇ ಸ್ಥಾನ ಗಳಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕನರ್ಾಟಕದಲ್ಲಿಯೇ ರಾಹುಲ್ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಕೋರಿದರು.
ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಶರಣಪ್ಪ ವಿ. ಸಂಕನೂರ, ರೇವಣಸಿದ್ದಪ್ಪ ಹಂಡೇದ, ಷರೀಫ್ ಹುನಗುಂದ, ಕಳಕಪ್ಪ ರಾ. ಗೆದಗೇರಿ, ಮುಂತಾದವರು ಇದ್ದರು.