ವಿಜಯಪುರ: ಶಾಸಕ ದೇವಾನಂದ ಚವ್ಹಾಣ ಬಹಿರಂಗ ಕ್ಷಮೆಯಾಚಿಸಲಿ: ಪಟ್ಟಣಶೆಟ್ಟಿ ಆಗ್ರಹ

ಲೋಕದರ್ಶನ ವರದಿ

ವಿಜಯಪುರ 05: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯಥರ್ಿಯಾಗಿ ಸ್ಪಧರ್ಿಸಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಭಯೋತ್ಪಾದಕ ಎಂದು ಹೇಳಿಕೆ ನೀಡಿದ ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ದೇವಾನಂದ ಚವ್ಹಾಣ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಅಮಾಯಕರ ಪ್ರಾಣ ತೆಗೆಯುವವರು ಭಯೋತ್ಪಾದಕರು. ಸೌಮ್ಯ ಸ್ವಭಾವದ ರಾಜಕಾರಣಿ ಯಾಗಿರುವ ಸಚಿವ ರಮೇಶ ಜಿಗಜಿಣಗಿ ಅವರನ್ನು ಶಾಸಕ ಡಾ. ದೇವಾನಂದ ಚವ್ಹಾಣ ಅವರು ಭಯೋತ್ಪಾದಕ ಎಂದು ಹೇಳಿಕೆ ನೀಡುವ ಮೂಲಕ ಅವರನ್ನು ಅವಮಾನ ಮಾಡಿದ್ದಾರೆ. ಅಸಂಸದೀಯವಾಗಿ ಮಾತನಾಡಿರುವ ಡಾ.ದೇವಾನಂದ ರಾಜಕೀಯ ರಂಗದಲ್ಲಿರಲು ಯೋಗ್ಯರಲ್ಲ ಎಂದರು.

ಡಾ.ದೇವಾನಂದ ಚವ್ಹಾಣ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವುದು ಬಿಡುವುದರ ಬಗ್ಗೆ ಬಿಜೆಪಿ ಮುಖಂಡರು ಹಾಗೂ ಜಿಗಜಿಣಗಿ ಅವರು ನಿರ್ಧರಿಸುತ್ತಾರೆ, ಆ ನಿಧರ್ಾರ ನಾನು ತೆಗೆದುಕೊಳ್ಳಲು ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಐದು ಬಾರಿ ಲೋಕಸಭೆ ಚುನಾವಣೆ0ುಲ್ಲಿ ಗೆದ್ದರೂ ಬಿಜೆಪಿ ಅಭ್ಯಥರ್ಿ ಸರಳತೆ ಬಿಟ್ಟಿಲ್ಲ,  ಅಧಿಕಾರದ ಮದ ಏರಿಸಿಕೊಂಡಿಲ್ಲ. ಕಾಕಾ ಮಾಮಾ ಎಂಬುದು ಅವರ ಸೌಮ್ಯ ಭಾಷೆ ಮತ್ತು ಅದೊಂದು ಸಂಸ್ಕಾರ ಎಂದರು.

ಬಾರೋಲೆ, ಹೋಗೋಲೆ ಎನ್ನುವವರಿಗಿಂತ ಕಾಕಾರ, ಅಣ್ಣಾರ ಎಂದು ಪ್ರೀತಿಯಿಂದ ಮಾತನಾಡುತ್ತ ಜಿಗಜಿಣಗಿ ಅವರು ಎಲ್ಲರಿಗೂ ಗೌರವ ಕೊಡುತ್ತಾರೆ. ಸಣ್ಣವರಿರಲಿಲಿ, ದೊಡ್ಡವರಿರಲಿ ಯಾವುದೇ ಹಮ್ಮುಬಿಮ್ಮು ಇಲ್ಲದೇ ಮುಕ್ತವಾಗಿ ಅವರೊಂದಿಗೆ ಬೆರೆಯುತ್ತಾರೆ. ಅವರ ಈ ಸ್ವಭಾವವನ್ನು ಟೀಕಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಜಿಗಜಿಣಗಿ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಕೆಲವರು ಆಧಾರರಹಿತವಾದ ಆಪಾದನೆ ಮಾಡುತ್ತಿದ್ದಾರೆ. ಅವರ ಆರೋಪ ಹುರುಳಿಲ್ಲದ್ದು. ಈ ರೀತಿ ಆಪಾದನೆ ಮಾಡುವುದನ್ನು ಬಿಡಬೇಕು. ಜಿಗಜಿಣಗಿ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎನ್ನುವುದನ್ನು ಸಾಕ್ಷಿ ಸಮೇತ ಯಾರಾದರೂ ತೋರಿಸುವರೇ? ಎಂದು ಸವಾಲು ಹಾಕಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸುರೇಶ ಬಿರಾದಾರ ಮಾತನಾಡಿ, ಜಿಗಜಿಣಗಿ ಒಬ್ಬ ನಿಷ್ಠಾವಂತ ಹಾಗೂ ಸಜ್ಜನ ರಾಜಕಾರಣಿ. ಪಂಚಮಸಾಲಿ ಸಮಾಜದ ಕೆಲ 0ುುವಕರು ಜಿಗಜಿಣಗಿ ವಿರೋಧ ಹೇಳಿಕೆ ನೀಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಜಿಗಜಿಣಗಿ ವಿರುದ್ದ ಹೇಳಿಕೆ ಹರಿಬಿಡುತ್ತಿದ್ದಾರೆ. ಆದರೆ, ಪಂಚಮಸಾಲಿ ಸಮಾಜದವರು ಎಲ್ಲ ಪಕ್ಷಗಳಲ್ಲಿ ಇದ್ದಾರೆ. ಹೀಗಾಗಿ ಚುನಾವಣೆ0ುಲ್ಲಿ ಸಮಾಜದ ಹೆಸರು ಎಲ್ಲೂ ಬಳಸಬಾರದು ಎಂದರು. 

ಪಾಲಿಕೆ ಸದಸ್ಯರಾದ ಪ್ರಕಾಶ ಮೀರ್ಜಾ , ಅಲ್ತಾಫ್ ಇಟಗಿ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.