ರಾಯಬಾಗ 23: ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೇಡ ಜಂಗಮ ಸಮುದಾಯದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಖಂಡನೀಯವಾಗಿದೆ ಎಂದು ಅರ್ಚಕ ಮತ್ತು ಪುರೋಹಿತ ರಾಜ್ಯ ಘಟಕದ ಅಧ್ಯಕ್ಷ ಕಾಡಯ್ಯ ಶಾಸ್ತ್ರೀ ಹಿರೇಮಠ ಹೇಳಿದರು.
ಗುರುವಾರ ಸಾಯಂಕಾಲ ಪಟ್ಟಣದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ ನಾಯಕರಾದ ಖರ್ಗೆಯವರು ಬೇಡ ಜಂಗಮ ಸಮುದಾಯವನ್ನು ಗುರಿ ಮಾಡಿ ಹೇಳಿಕೆ ನೀಡಿರುವುದು ಬೇಡ ಜಂಗಮ ಬಾಂಧವರಿಗೆ ತೀವ್ರ ನೋವುಂಟು ಮಾಡಿದೆ ಎಂದರು.
ಅರ್ಚಕ ಬಸವರಾಜ ನಿಶಾನಿಮಠ ಮಾತನಾಡಿ, ಬೇಡ ಜಂಗಮ ಸಮುದಾಯದವರು ಎಸ್‌ಸಿ ಸಮುದಾಯದಲ್ಲಿ ಸೇರೆ್ಡಗಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಸಂವಿಧಾನಬದ್ಧವಾಗಿ ಹೋರಾಟ ನಡೆಸುತ್ತಿರುವ ಸಮುದಾಯದ ವಿರುದ್ಧ ಖರ್ಗೆಯವರು ಮಾತನಾಡಿದ್ದು ಸರಿಯಲ್ಲ. ಈ ಹಿಂದೆ ಅನೇಕ ಆದೇಶಗಳು ಮತ್ತು ನ್ಯಾಯಾಲಯದ ತೀರ್ುಗಳು ಬೇಡ ಜಂಗಮ ಸಮುದಾಯ ಪರವಾಗಿ ಬಂದಿವೆ. ಈಗ ಡಾ.ಎಚ್.ಎನ್.ನಾಗಭೂಷಣದಾಸ ಏಕ ಸದಸ್ಯ ಆಯೋಗ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯಕ್ಕೆ ಅವಕಾಶ ಕೂಡಿ ಬಂದಿದೆ. ನ್ಯಾಯುತವಾಗಿ ಹೋರಾಟ ನಡೆಸುತ್ತಿರುವ ಬೇಡಜಂಗಮ ಸಮುದಾಯದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿರುವವರ ವಿರುದ್ಧ ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಸಂವಿಧಾನ ಬದ್ಧವಾದ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಎಂದು ಒತ್ತಾಯಿಸಿದರು.
ವಾಗೇಶ ಸಾಲಿಮಠ, ದುಂಡಯ್ಯ ಹಿರೇಮಠ, ಸಂಜಯ ಹಿರೇಮಠ, ಸೀಮಾ ಹಿರೇಮಠ, ಕಮಲಾಕ್ಷಿ ಹಿರೇಮಠ, ಮಹಾಂತೇಶ ಚರಂತಿಮಠ, ಸಿದ್ದಲಿಂಗಯ್ಯ ಘಂಟಿಮಠ, ನಿತ್ಯಾನಂದ ನಿಶಾನಿಮಠ, ಮಹಾಂತೇಶ ಹಿರೇಮಠ, ಸೋಮು ಹಿರೇಮಠ, ಶ್ರೀಶೈಲ ಹಿರೇಮಠ, ಬಾಳಯ್ಯ ಹಿರೇಮಠ, ಮಹಾಂತೇಶ ಉಜ್ಜಯನಿಮಠ, ರಮೇಶ ಹಿರೇಮಠ ಸೇರಿ ಅನೇಕರು ಇದ್ದರು.