ಧಾರವಾಡ 23: ದಿ. 22 ರಂದು ವಾಲ್ಮಿ, ಧಾರವಾಡದಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕುರಿತು ಧಾರವಾಡ ಮತ್ತು ವಿಜಯಪುರ ಬಿ.ಎಸ್.ಸಿ. ಕೃಷಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಏರಿ್ಡಸಲಾಗಿತ್ತು.
ಡಾ. ಗೀರೀಶ ಮರಡ್ಡಿ, ನಿರ್ದೇಶಕರು, ವಾಲ್ಮಿ, ಧಾರವಾಡ ಇವರು ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಅವೈಜ್ಞಾನಿಕ ಕೃಷಿ ಪದ್ಧತಿಗಳಿಂದ ಅಮೂಲ್ಯ ಸಂಪನ್ಮೂಲಗಳಾದ ಮಣ್ಣು ಅಪಾರ ಪ್ರಮಾಣದಲ್ಲಿ ಸವೆತಕ್ಕೆ ಒಳಗಾಗಿ ಫಲವತ್ತಾದ ಮಣ್ಣು ಕೃಷಿ ಭೂಮಿಯಿಂದ ಜಲಾಶಯಗಳನ್ನು ಸೇರುತ್ತಿದೆ. ಆದ್ದರಿಂದ ಭೂ ಸವೆತ ತಡೆಗಟ್ಟು ಕಾರ್ಯದಿಂದ ಮೇಲ್ಪದರ ಮಣ್ಣು ಮಾತ್ರವಲ್ಲದೇ ಜಲ ಸಂರಕ್ಷಣೆಯನ್ನು ಕೂಡಾ ಮಾಡಬಹುದಾಗದ್ದು, ಈ ನಿಟ್ಟಿನಲ್ಲಿ ಕೃಷಿಕರಿಗೆ ಈ ಸಂಪನ್ಮೂಲಗಳ ಸಂರಕ್ಷಣೆ ವಿಧಾನಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಸಂರಕ್ಷಣೆಯಲ್ಲಿ ಪಾಲ್ಗೋಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇಂ. ಅಶೋಕ ವಾಸನದ, ಮುಖ್ಯ ಅಭಿಯಂತರರು, ಮಲಪ್ರಭಾ ಯೋಜನಾ ವಲಯ, ಧಾರವಾಡ ಇವರು ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಪ್ರಸ್ತುತ ದಿನಮಾನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಈ ದಿಸೆಯಲ್ಲಿ ಭಾವಿ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳು ಈ ಸಂಪನ್ಮೂಲಗಳ ಸಂರಕ್ಷಣೆಗೆ ಬದ್ದರಾಗಬೇಕೆಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ವೆಂಕಟೇಶ ಬಿ.ಕೆ. ರಾಷ್ಟ್ರೀಯ ನಿರ್ವಹಣಾ ಮುಖ್ಯಸ್ಥರು, ಐ.ಸಿ.ಐ.ಸಿ ಫೌಂಡೇಷನ್, ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕೃಷಿ ದೇಶದ ಬಹು ದೊಡ್ಡ ಉದ್ದೋಗ ಹಾಗೂ ಉತ್ಪಾದನಾ ವಲಯವಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಾದ ಜಲ ಮತ್ತು ನೆಲ ಸಂರಕ್ಷಿಸಿದಲ್ಲಿ ಮಾತ್ರ ಕೃಷಿ ವಲಯದಿಂದ ದೇಶದ ಆಹಾರ ಬದ್ಧತೆಗೆ ಅನುಕೂಲವಾಗುತ್ತದೆ. ಆದ್ದರಿಂದ ಯುವ ಕೃಷಿ ವಿಜ್ಞಾನಿಗಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವತ್ತ ಗುರಿ ಹೊಂದಬೇಕೆಂದು ಕರೆ ನೀಡಿದರು.
ಇಂಧುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಕಾರ್ಯಾಗಾರ ಆಯೋಜಿಸಿ, ತಾಂತ್ರಿಕ ಗೋಷ್ಠಿಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ. ಎಸ್.ವೈ. ವಾಲಿ, ಪ್ರಾಧ್ಯಾಪಕರು, ಕೃಷಿಶಾಸ್ತ್ರ, ಕೃಷಿ ಮಹಾವಿದ್ಯಾಲಯ, ವಿಜಯಪುರ ಮತ್ತು ಡಾ. ಎಸ್.ಎಸ್. ಗುಂಡ್ಲರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮಣ್ಣು ವಿಜ್ಞಾನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಉಪಸ್ಥಿತರಿದ್ದರು. ಕು. ನಾಗರತ್ನಾ ಹೊಸಮನಿ ಇವರು ನಿರೂಪಣೆ ಮಾಡಿದರು.