ವಿಜಯಪುರ 23: ಸಮೀಪದ ತಿಡಗುಂದಿ ವ್ಯಾಪ್ತಿಯಲ್ಲಿ ಕರ್ನಾಟಕ - ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ಕ್ಕೆ ಹೊಂದಿಕೊಂಡ 1203 ಎಕರೆ ರೈತರ ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯ ಸರ್ಕಾರ ಇಂಡಸ್ಟ್ರೀಯಲ್ ಹಬ್ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ತೋರಿಸುತ್ತಿರುವರು ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಬಿಟ್ಟುಕೊಡುವುದಿಲ್ಲ ಎಂದು ತಿಡಗುಂದಿ ರೈತರು ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಾದ ಡಿ.ಕೆ.ಶಿವುಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಮೀಪದ ಕೋಲಾರಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿರುವ ವೇಳೆ ತಿಡಗುಂದಿ ಭಾಗದ ರೈತರು ಮನವಿ ಸಲ್ಲಿಸಿ ಕೂಡಲೇ ಈ ಯೋಜನೆಯನ್ನು ಕೈಬೀಡಬೇಕು ಇಲ್ಲ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿಕೊಂಡರು.
230 ರೈತರ ಆಕ್ಷೇಪಣಾ ಪತ್ರವನ್ನು ರಾಜ್ಯ ಸರ್ಕಾರಕ್ಕೆ, ಬೃಹತ್ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರಿಗೆ, ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸಲ್ಲಿಸಿ ಯಾವ ರೈತರು ಭೂಮಿಯನ್ನು ಬಿಟ್ಟಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ, ಆದರೂ ಕೂಡಾ ಇಂದು ಸರ್ವೇ ಮಾಡಲು ಆಗಮಿಸುತ್ತಿರುವುದು ರೈತವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ.
ಅನೇಕ ಪದವಿದರರು ಬೇರೆಡೆಗೆ ನೌಕರಿ ಮಾಡುವುದನ್ನು ಬಿಟ್ಟು ಕೃಷಿ ಮಾಡಲು ಸ್ವಗ್ರಾಮಕ್ಕೆ ಆಗಮಿಸಿರುವುವವರು ಇದ್ದಾರೆ, ಇದೇ ಕೈಗಾರಿಕಾ ಸಚಿವರು ನೀರಾವರಿ ಸಚಿವರಾಗಿದ್ದಾಗ ನಮ್ಮ ಭೂಮಿಗಳಿಗೆ ನೀರು ಮಾಡಿಕೊಟ್ಟಿದ್ದರು, ಅವರಿಗೆ ಇಡೀ ಸಂಪೂರ್ಣ ಗ್ರಾಮಸ್ತರೇ ಧನ್ಯವಾದ ತಿಳಿಸಿ ಸನ್ಮಾನಿಸಿದ್ದೆವೂ, ಆದರೆ ಈಗ ಅದೇ ನೀರನ್ನ ಎಲ್ಲಾ ರೈತರಿಗೂ ಬಿಟ್ಟು ಕೈಗಾರಿಕೆ ಮಾಡಲು ಹೊರಟ್ಟಿದ್ದಾರೆ, ರೈತರಿಗಿಂತ ಇವರಿಗೆ ಕೈಗಾರಿಕೆಯೇ ಮುಖ್ಯವಾಯಿತೇ ಎಂಬುದು ರೈತರ ಪ್ರಶ್ನೆಯಾಗಿದೆ. ಫಲವತ್ತಾದ ಕೃಷಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಕುಟುಂಬ ಸಮೇತ ಗುಳೆ ಹೋಗಬೇಕಾಗುತ್ತದೆ.
ಈ ವೇಳೆ ಸಂಗಮೇಶ ಸಗರ, ಗೀರೀಶ ತಾಳಿಕೋಟಿ, ಸಿದ್ದರಾಮ ಪೂಜಾರಿ, ಚನ್ನಪ್ಪ ಘೋಠೆ, ಮಡಿವಾಳಪ್ಪ ತಿಲ್ಲಿಹಾಳ, ಗೋಪಾಲ ಭೋಸಲೆ, ಸಿದ್ದರಾಯ ತಿಲ್ಲಿಹಾಳ, ಅಶೋಕಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಸೇರಿದಂತೆ ಅನೇಕ ರ/ಯತರು ಉಪಸ್ಥಿತರಿದ್ದರು.
ಅಧಿಕಾರಿಗಳೊಂದಿಗೆ ರೈತರ ವಾಗ್ವಾದ :
ತಿಳವಳಿಕೆ ಪತ್ರದ ಪ್ರಕಾರ ಅಳತೆ ಕಾರ್ಯ (ಜೆ.ಎಂ.ಸಿ) ಮಾಡಲು ಬಂದ್ ದಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧಿನಾಧಿಕಾರಿಗಳೊಂದಿಗೆ ತಿಡಗುಂದಿ ರೈತರು ತೀರ್ವ ಗಲಟೆ ಮಾಡಿ ಮರಳಿ ಹೋಗುವ0ತೆ ಪಟ್ಟು ಹಿಡಿದರು, ಅನಿವಾರ್ಯವಾಗಿ ಅಧಿಕಾರಿಗಳು ಕಾಲುಕಿತ್ತ ಘಟನೆ ನಡೆಯಿತು.