ಬೆಳಗಾವಿ 13: ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭಾತೃತ್ವದ ಸಂದೇಶ ಸಾರಿದ ಸಂತ ಅವರೊಬ್ಬರು ಪರಿಪೂರ್ಣ ವ್ಯಕ್ತಿ, ಯುವಜನರಿಗೆ ಚೈತನ್ಯ ಸ್ವರೂಪಿ ಎಂದು ಶ್ರೀ ಸ್ವಾಮಿ ಮೋಕ್ಷಾತ್ಮಾನಂದ ಅಭಿಪ್ರಾಯ, ಎಳಿ ಎದ್ದೇಳಿ ಗುರಿ ಮುಟ್ಟವ ತನಕ ನಿಲ್ಲದಿರಿ ಎಂಬ ಸಂದೇಶ ಭಾರತಿಯರಲ್ಲಿ ಎಂದಿಗೂ ನವಚೈತನ್ಯೆ ತುಂಬುವ ಮಾತು ತಮ್ಮ ಬದುಕಿನ ರೀತಿಯಿಂದಲೇ ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆಯಾದ ಸ್ವಾಮಿ ವಿವೇಕಾನಂದರು ಎಂದು ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ಸ್ವಾಮಿ ಮೋಕ್ಷಾತ್ಮಾನಂದ ಯುವ ಜನರಿಗೆ ಕರೆನೀಡಿದರು.
ಅವರು ದಿ. 13 ರಂದು ಬೆಳಗಾವಿಯ ಡಾ: ಬಿ.ಎಸ್.ಕೋಡ್ಕಣಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೆ.ಎಲ್.ಇ ಎಕ್ಯಾಡಮಿ ಆಫ್ ಹಾಯರ್ ಎಜುಕೇಶನ್ ಆಂಡ್ ರಿಸರ್ಚ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕೆ.ಎಲ್.ಇ ವಿಶ್ವವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163 ನೇ ಜನ್ಮ ದಿನೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾ ಮಟ್ಟದ ಯುವ ಸಪ್ತಾಹ 2024-25 ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬಿ. ಶ್ರೀನಿವಾಸ ಉಪನಿರ್ದೇಶಕರು ಮಾತನಾಡಿ ಯುವ ಜನರು ಸ್ವಾಮಿ ವಿವೇಕಾನಂದರ ಜೀವನ ಆದರ್ಶ ತತ್ವಗಳನ್ನು ಅನುಪಾಲನೆ ಮಾಡಿ ತಮ್ಮ ಜೀವನದಲ್ಲಿ ಅಳವಡಿಸುವಂತೆ ಯುವಕರಿಗೆ ಹೇಳಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ: ಎಮ್ ಎಸ್ ಗಣಾಚಾರಿ ಕುಲಸಚಿವರು ಕೆ.ಎಲ್.ಇ ವಿಶ್ವವಿದ್ಯಾಲಯ ಇವರು ಮಾತನಾಡಿ ಸ್ವಾಮಿ ವಿವೇಕಾನಂದರ ಯುವ ಸಪ್ತಾಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ, ಪ್ರತಿಯೊಬ್ಬರು ತಮಗೆ ಸಮಯ ಸಿಕ್ಕಾಗ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಒಳ್ಳೆ ಜ್ಞಾನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಎಮ್.ವ್ಹಿ.ಜಾಲಿ, ಸಿದ್ದಣ್ಣ ದುರದುಂಡಿ, ಸೋಮನಾಥ ಪೂಜೇರಿ, ಡಾ: ಅಶ್ವಿನಿ ನರಸನ್ನವರ, ಮಲ್ಲಯ್ಯಾ ಕರಡಿ, ಬಸವರಾಜ ಜಕನ್ನವರ, ಸೇರಿದಂತೆ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಜರುದ್ದಿನ ಶೇಖಜಿ ನಿರೂಪಿಸದರು, ರಾಘವೆಂದ್ರ ಲಂಬುಗೋಳ ಸ್ವಾಗತಿಸಿದರು. ಡಾ: ನಾಗರಾಜ ಪಾಟೀಲ ವಂದಿಸಿದರು.